ಫ್ಯಾನ್ಸಿ ನಂಬರ್‌ಗಾಗಿ 59 ಕೋಟಿ ತಿರಸ್ಕರಿಸಿದ ಖಾನ್

ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡಿ ಫ್ಯಾನ್ಸಿ ನಂಬರುಗಳನ್ನು ಖರೀದಿಸುತ್ತಿರುವ ಸುದ್ದಿಗಳನ್ನು ಓದಿರುತ್ತೇವೆ. ಅದೇ ಹೊತ್ತಿಗೆ ಬ್ರಿಟನ್‌ನ ಪ್ರಖ್ಯಾತ ಉದ್ಯಮಿಯೊಬ್ಬರು ಫ್ಯಾನ್ಸಿ ನಂಬರ್ ತಮ್ಮ ಬಳಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬರೋಬ್ಬರಿ 59 ಕೋಟಿಯ ಆಫರನ್ನು ತಿರಸ್ಕರಿಸಿದ ಘಟನೆಯೊಂದು ಆಂಗ್ಲರ ನಾಡಿನಿಂದ ವರದಿಯಾಗಿದೆ.

ಹೌದು, ಬ್ರಿಟನ್‌ನ ಪ್ರಖ್ಯಾತ ಆಟೋಮೊಬೈಲ್ ಕಸ್ಟಮೈಸ್ಡ್ ಸಂಸ್ಥೆ ಖಾನ್ ಡಿಸೈನ್ ಮಾಲಿಕ ಅಪ್ಜಲ್ ಖಾನ್ ಇಂತಹದೊಂದು ಕೊಡುಗೆಯನ್ನು ಸರಾಗವಾಗಿ ತಳ್ಳಿ ಹಾಕಿದ್ದಾರೆ. ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಖಾನ್ ಬಳಿಯಿರುವ 'F1' ನಾವಲ್ಟಿ ಪ್ಲೇಟ್ ಖರೀದಿಗಾಗಿ ಬಿಲಿಯನೇರ್‌ವೊಬ್ಬರು ಸಮೀಪಿಸಿದ್ದರು. ಇದಕ್ಕಾಗಿ ಖಾನ್ ಅವರಿಗೆ 6 ಮಿಲಿಯನ್ ಬ್ರಿಟಿಷ್ ಪೌಂಡ್ ನೀಡುವುದಾಗಿ ಆಫರ್ ಮುಂದಿರಿಸಿದ್ದರು. ಆದರೆ ಖಾನ್ ಈ ಆಫರನ್ನು ತಿರಸ್ಕರಿಸಿದ್ದಾರೆ.


'F1' ಎಂಬುದು ಖಾನ್ ಅವರ ಫೇವರಿಟ್ ನಾವಲ್ಟಿ ಪ್ಲೇಟ್ ನಂಬರ್ ಆಗಿದೆ. ಅಲ್ಲದೆ ಇದು 109 ವರ್ಷಗಳ ಇತಿಹಾಸವನ್ನು ಹೊಂದಿದ್ದು, 2008ರಲ್ಲಿ ಖಾನ್ ಅವರು 440000 ಬ್ರಿಟಿಷ್ ಪೌಂಡ್ ನೀಡಿ ( ಅಂದಾಜು 4.5 ಕೋಟಿ ರು.) ಖರೀದಿಸಿದ್ದರು.

ಅಂದರೆ ಐದು ವರ್ಷದೊಳಗೆ 'F1' ನಾವಲ್ಟಿ ಪ್ಲೇಟ್ ದರ 15 ಪಟ್ಟು ದುಪ್ಪಟ್ಟುಗೊಂಡಿದೆ. ಈ ಎಫ್1 ನಂಬರ್ ಪ್ಲೇಟ್ ಅತಿ ದುಬಾರಿ ಬುಕಾಟಿ ವೆರೊನ್ ಹಾಗೂ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎರ್ ಮೆಕ್‌ಲ್ಯಾರೆನ್‌ನಲ್ಲಿ ಆಳವಡಿಸಲಾಗಿದೆ. ಇದರ ಜೊತೆಗೆ ಖಾನ್ ಅವರು '4HRH' ಮತ್ತು 'NO1' ನಂಬರ್‌ನ ಹೆಮ್ಮೆಯ ಮಾಲಿಕರೂ ಕೂಡಾ ಆಗಿದ್ದಾರೆ.


ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಇಂತಹ ಘಟನೆ ವರದಿಯಾಗುತ್ತಿರುವುದು. ಈ ಹಿಂದೆ ಸಯೀದ್ ಖೋರಿ ಎಂಬ ಅಬುದಾಬಿ ಉದ್ಯಮಿ ಯುನೈಟೈಡ್ ಅರಬ್ ಎಮಿರೇಟ್ಸ್‌‌ಗೆ 70 ಕೋಟಿ ನೀಡಿ ರುಪಾಯಿ ನೀಡಿ '1' ಫ್ಯಾನ್ಸಿ ನಂಬರ್ ಖರೀದಿಸಿದ್ದರು. ಇದು ಜಗತ್ತಿನ ಅತಿ ದುಬಾರಿ ನಂಬರ್ ಪ್ಲೇಟ್ ಖರೀದಿಯಾಗಿದೆ.
Most Read Articles

Kannada
English summary
We have all read stories about super rich people spending millions of dollars on personalized, vanity licence plate. Here is the latest story, coming from the United Kingdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X