Just In
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫ್ಯಾನ್ಸಿ ನಂಬರ್ ಪಡೆಯಲು 32 ಲಕ್ಷ ರೂಪಾಯಿ ಬಿಡ್ ಸಲ್ಲಿಸಿ ಕೈ ಎತ್ತಿದ ಆಸಾಮಿ
ಭಾರತದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ಹಲವಾರು ಖಾಸಗಿ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿದವು. ಇದರಿಂದಾಗಿ ಕೆಲವು ಕಂಪನಿಗಳು ತಮ್ಮ ನೌಕರರ ವೇತನವನ್ನು ಕಡಿತಗೊಳಿಸಿದವು. ಖಾಸಗಿ ವಲಯ ಮಾತ್ರವಲ್ಲದೆ ಸರ್ಕಾರಗಳೂ ಸಹ ಆದಾಯ ಕೊರತೆಯನ್ನು ಎದುರಿಸಬೇಕಾಯಿತು.

ಆರ್‌ಟಿಒ ಕಚೇರಿಗಳು ಹೊಸ ವಾಹನಗಳ ರಿಜಿಸ್ಟ್ರೇಷನ್ ಹಾಗೂ ಫ್ಯಾನ್ಸಿ ನಂಬರ್'ಗಳ ಮಾರಾಟದಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತವೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಹೊಸ ವಾಹನಗಳ ರಿಜಿಸ್ಟ್ರೇಷನ್ ಹಾಗೂ ಫ್ಯಾನ್ಸಿ ನಂಬರ್'ಗಳ ಮಾರಾಟ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಆರ್‌ಟಿಒ ಕಚೇರಿಗಳು ಆದಾಯ ಕೊರೆತೆಯನ್ನು ಎದುರಿಸಿದವು.

ಹೀಗೆ ಆದಾಯದ ಕೊರತೆ ಎದುರಿಸಿದ ಆರ್‌ಟಿಒಗಳಲ್ಲಿ ಗುಜರಾತ್‌ನ ಅಹಮದಾಬಾದ್ ಆರ್‌ಟಿಒ ಕಚೇರಿಯೂ ಸೇರಿದೆ. ಭಾರತದಲ್ಲಿ ಕರೋನಾ ವೈರಸ್ ಸಮಸ್ಯೆ ಆರಂಭವಾಗುವ ಮೊದಲು, ಅಹಮದಾಬಾದ್'ನ ಆರ್‌ಟಿಒ ಕಚೇರಿ ಫ್ಯಾನ್ಸಿ ನಂಬರ್'ಗಳ ಹರಾಜು ಪ್ರಕ್ರಿಯೆ ಮೂಲಕ ಆದಾಯ ಗಳಿಸುತ್ತಿತ್ತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆದರೆ ಕರೋನಾ ವೈರಸ್ ಸಮಸ್ಯೆಯ ನಂತರ ಈ ಆರ್‌ಟಿಒದ ಆದಾಯವು ಕುಸಿತಗೊಂಡಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಜನರು ತಮ್ಮ ವಾಹನಗಳಿಗಾಗಿ ತಮ್ಮ ನೆಚ್ಚಿನ ನಂಬರ್ ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಿದ್ದಾರೆ.

ಅಹಮದಾಬಾದ್‌ನ ವ್ಯಕ್ತಿಯೊಬ್ಬರು ತಮ್ಮ ವಾಹನದ ರಿಜಿಸ್ಟ್ರೇಷನ್ ನಂಬರ್ ಪಡೆಯಲು 32 ಲಕ್ಷ ರೂಪಾಯಿ ಬಿಡ್ ಮಾಡಿದ್ದರು. ಅವರು ತಮ್ಮ ನೆಚ್ಚಿನ ನೋಂದಣಿ ಸಂಖ್ಯೆಯನ್ನು ಪಡೆಯಲು ಇಷ್ಟು ದೊಡ್ಡ ಮೊತ್ತವನ್ನು ಬಿಡ್ ಮಾಡಿದ್ದರು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆದರೆ ಆ ವ್ಯಕ್ತಿ ಸಮಯಕ್ಕೆ ಸರಿಯಾಗಿ ಹಣವನ್ನು ಪಾವತಿಸಿಲ್ಲ. ಈ ಕಾರಣಕ್ಕೆ ಆರ್‌ಟಿಒ ಕಚೇರಿಯು ಅವರು ಹರಾಜಿನಲ್ಲಿ ಪಡೆದಿದ್ದ ನಂಬರ್ ಅನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಾತನಾಡಿರುವ ಅಹಮದಾಬಾದ್ ಆರ್‌ಟಿಒ ಕಚೇರಿ ಅಧಿಕಾರಿಗಳು, ಅಹಮದಾಬಾದ್‌ನ ವ್ಯಕ್ತಿಯೊಬ್ಬರು ಹೊಸ ಕಾರು ಖರೀದಿಸಿದ್ದರು.

ಆ ಕಾರಿಗೆ ತಮ್ಮ ಇಷ್ಟದ ನೋಂದಣಿ ಸಂಖ್ಯೆಯನ್ನು ಪಡೆಯಲು ಅರ್ಜಿ ಸಲ್ಲಿಸಿದರು. ಆ ಸಂಖ್ಯೆಯನ್ನು ಪಡೆಯಲು ಅವರು 32 ಲಕ್ಷ ರೂಪಾಯಿ ಬಿಡ್ ಮಾಡಿದ್ದರು. ಆದ್ದರಿಂದ ಆ ಸಂಖ್ಯೆಯನ್ನು ಆ ವ್ಯಕ್ತಿಗಾಗಿ ಮೀಸಲಿಟ್ಟಿದ್ದೆವು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆದರೆ ಸಮಯಕ್ಕೆ ಸರಿಯಾಗಿ ಆ ವ್ಯಕ್ತಿ ಹಣ ಪಾವತಿಸಲು ವಿಫಲವಾದ ಕಾರಣ ಅವರ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿದ್ದೇವೆ ಎಂದು ಹೇಳಿದರು. ನವೆಂಬರ್ ತಿಂಗಳಿನಲ್ಲಿ ಅಹಮದಾಬಾದ್‌ನ ಆರ್‌ಟಿಒ ಕಚೇರಿಯಲ್ಲಿ 11,600 ಹೊಸ ವಾಹನಗಳನ್ನು ನೋಂದಾಯಿಸಲಾಗಿದೆ.

ಈ ಪೈಕಿ 3,022 ವಾಹನ ಮಾಲೀಕರು ತಮ್ಮ ಇಷ್ಟದ ನೋಂದಣಿ ಸಂಖ್ಯೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು. ನವೆಂಬರ್ ತಿಂಗಳಿನಲ್ಲಿ ಅಹಮದಾಬಾದ್ ಆರ್‌ಟಿಒ ಕಚೇರಿಯು ಫ್ಯಾನ್ಸಿ ನಂಬರ್ ಹರಾಜಿನಿಂದ ರೂ.1.09 ಕೋಟಿ ಆದಾಯ ಗಳಿಸಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಅಹಮದಾಬಾದ್ ಆರ್‌ಟಿಒ ಕಚೇರಿಯು ಫ್ಯಾನ್ಸಿ ನಂಬರ್ ಹರಾಜಿನ ಮೂಲಕ ರೂ.2.36 ಕೋಟಿ ಆದಾಯ ಗಳಿಸಿದೆ. ಕರೋನಾ ವೈರಸ್ ಸಮಸ್ಯೆಯಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಫ್ಯಾನ್ಸಿ ನಂಬರ್'ಗಳಿಗಾಗಿ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.