500 ರೂಪಾಯಿಗೆ ರೊಮ್ಯಾಂಟಿಕ್ ಪೋಟೋ ಕ್ಲಿಕ್ಕಿಸಿ ಕೊಟ್ಟ AI ಕ್ಯಾಮೆರಾ: ಫೋಟೋ ಫುಲ್ ವೈರಲ್
ಇತ್ತೀಚೆಗೆ ದೇಶದ ನಾನಾ ಕಡೆ ಟ್ರಾಫಿಕ್ ನಿಯಮಗಳನ್ನು ವಾಹನ ಸವಾರರು ಉಲ್ಲಂಘಿಸುವುದನ್ನು ತಪ್ಪಿಸುವುದಕ್ಕಾಗಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲಿ ಇತ್ತೀಚೆಗೆ ಕೇರಳ ಸರ್ಕಾರ ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ತೆಗೆದುಕೊಂಡಿದ್ದ ಒಂದು ನಿರ್ಧಾರ ಇಡೀ ದೇಶವೇ ತಿರುಗಿ ನೊಡುವಂತೆ ಮಾಡಿತ್ತು.
ಕೇರಳ ಸರ್ಕಾರ ರಾಜ್ಯದಾದ್ಯಂತ ಸುಮಾರು 726 AI ಕ್ಯಾಮೆರಾಗಳನ್ನು ಅಳವಡಿಸಿತ್ತು. ಇದು ಇಡೀ ದೇಶದಲ್ಲಿಯೇ ದೊಡ್ಡ ಸುದ್ದಿಯನ್ನು ಮಾಡಿದ್ದಂತು ನಿಜ. ವಾಹನ ಸಂಚಾರ ದಟ್ಟನೆ ಇರುವ ಕಡೆ ಈ ಕ್ಯಾಮೆರಾಗಳನ್ನು ಅಳವಡಿಸಿದ್ದರಿಂದ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ಬೈಕ್ ಮತ್ತು ಇತರ ವಾಹನಗಳ ಪೋಟೋಗಳನ್ನು ತನ್ನಿಂದಾಗೇ ಕ್ಲಿಕ್ಕಿಸಿ ಪೊಲೀಸರಿಗೆ ರವಾನಿಸುತ್ತಿತ್ತು. ಈ ಮೂಲಕ ಪೊಲೀಸರು ಸಂಭಂಧಪಟ್ಟವರಿಗೆ ನೋಟೀಸ್ ಕಳುಹಿಸುತ್ತಿದ್ದರು.
ಇನ್ನು ಈ ಕ್ಯಾಮೆರಾಗಳನ್ನು ಅಳವಡಿಸಿದಾಗಿನಿಂದ ಇದು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇತ್ತು. ಇದೀಗ AI ಕ್ಯಾಮೆರಾ ಮತ್ತೊಮ್ಮೆ ಸುದ್ದಿಯಲ್ಲಿದ್ದು ವಿಷಯ ತುಂಬಾ ಇಂಟರೆಸ್ಟಿಂಗ್ ಆಗಿದೆ. ಬೈಕ್‌ನಲ್ಲಿ ಚಲಿಸುತ್ತಿದ್ದ ಜೊಡಿಯೊಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ AI ಕ್ಯಾಮೆರಾ ಫೋಟೋ ಕ್ಲಿಕ್ಕಿಸಿ ಪೊಲೀಸರಿಗೆ ಕಳುಹಿಸಿತ್ತು. ಇದನ್ನು ಜೋಡಿಗೆ ಪೋಸ್ಟ್ ಮಾಡಿದ ಪೋಟೋ ಇದೀಗ ಭಾರೀ ಸದ್ದು ಮಾಡುತ್ತಿದೆ.
ಉತ್ತಮ ರೆಸೆಲ್ಯೂಷನ್ ಹೊಂದಿದ AI ಕ್ಯಾಮೆರಾಗಳಲ್ಲಿ ಇತ್ತೀಚೆಗೆ ದಾಖಲಾದ ಪೋಟೋ ಇದಾಗಿದ್ದು, ಜೋಡಿಯೊಂದು ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆಯ ರೊಮಾಂಟಿಕ್ ಪೋಟೋವಾಗಿ ಹೊರ ಹೊಮ್ಮಿರುವುದು ವಿಶೇಷ. ಈ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹಲವೆಡೆ ಹರಿದಾಡುತ್ತಿದ್ದು, 500 ರೂಪಾಯಿ ದಂಡವಾಗಿ ಕೊಟ್ಟರೇನು? ಇಷ್ಟೊಂದು ರೊಮಾಂಟಿಕ್ ಫೀಲ್ ಇರುವ ಪೋಟೋ ಸಿಕ್ಕಿತಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಹಲವರು ಹೇಳುವಂತೆ ದುಡ್ಡು ಕೊಟ್ಟರೂ ಸಹ ಇಷ್ಟೊಂದು ಮುದ್ದಾದ ಫೋಟೋವನ್ನು ಕ್ಯಾಮರಾಮೆನ್ ಪ್ರಯತ್ನಿಸಿದರೂ ಸಿಗುವುದಿಲ್ಲ ಎಂದು AI ಕ್ಯಾಮೆರಾದ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಇನ್ನು ಇದಕ್ಕೆ ಸಂಭಂಧಿಸಿದ ಫೋಟೋ, ಮಲಯಾಳಂ ಇನ್ಸ್ಟಾಗ್ರಾಂ ಪೇಜ್ ವಂಡಿ ಪ್ರಾಂದನ್ಮಾರ್ ಎಂಬಲ್ಲಿ ವಿಡಿಯೋ ರೂಪದಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋದ ಕಾಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
AI ಕ್ಯಾಮೆರಾ ಏನಾದರೂ ಬಣ್ಣಗಳೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿದ್ದಿದ್ದರೆ ಇದನ್ನೇ ಸೇವ್ ದಿ ಡೇಟ್ ಆಗಿ ಮಾರ್ಪಾಡುಗೊಳಿಸಬಹುದಾಗಿತ್ತು ಎಂಬುದು ಹಲವರ ಅಭಿಪ್ರಾಯ. ಇದನ್ನು ಆ ವಿಡಿಯೊದ ಕ್ಯಾಪ್ಷನ್‌ನಲ್ಲಿ ನೀಡಲಾಗಿದ್ದು ಇದು ಜನರನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುತ್ತಿದೆ. ಇನ್ನು ಫೋಟೋದಲ್ಲಿ ನಾವು ಒಬ್ಬ ವ್ಯಕ್ತಿ, ಒಂದು ಹುಡುಗಿಯನ್ನು ಬೈಕ್‌ನಲ್ಲಿ ಪಿಲಿಯನ್ ಆಗಿ ಕೂರಿಸಿ ಅದನ್ನು ಓಡಿಸಿಕೊಂಡು ಹೋಗುತ್ತಿರುವ ಚಿತ್ರವನ್ನು ಕಾಣಬಹುದಾಗಿದೆ.

ಇನ್ನು AI ಕ್ಯಾಮೆರಾ ಈ ಚಿತ್ರವನ್ನು ಬಹುಷ ರಾತ್ರಿಯಲ್ಲಿ ಕ್ಲಿಕ್ಕಿಸಿರಬಹುದು ಎಂದೆನಿಸುತ್ತಿದೆ. ಇದಕ್ಕೆ ಕಾರಣ ಫೋಟೋ ಸುತ್ತಮತ್ತ ಕತ್ತಲು ತುಂಬಿದ್ದು ಬೈಕ್ ಸವಾರ ಮತ್ತು ಬೈಕ್‌ನ ಹಿಂಬಿದಿಯಿದ್ದ ಹುಡುಗಿಯ ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇನ್ನು ಬೈಕ್ ಹಿಂಬದಿ ಕೂತಿದ್ದ ಹುಡುಗಿ ಹೆಲ್ಮೆಟ್ ಧರಿಸದೇ ಇದ್ದ ಕಾರಣದಿಂದ ಈ AI ಕ್ಯಾಮೆರಾ ಫೋಟೋವನ್ನು ಕ್ಲಿಕ್ಕಿಸಿದೆ ಎಂದು ತಿಳಿದು ಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications