ಸೀಟ್‌ ಬೆಲ್ಟ್ ಧರಿಸದ ಪೊಲೀಸರಿಗೆ ದಂಡ ವಿಧಿಸಿದ AI ಕ್ಯಾಮೆರಾ: 11 ಬಾರಿ ನಿಯಮಗಳ ಉಲ್ಲಂಘನೆ

ಕೇರಳ ಸರ್ಕಾರವು ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ 726 AI ಕ್ಯಾಮೆರಾಗಳನ್ನು ಸ್ಥಾಪಿಸಿದೆ. ಇವು ಸಾಮಾನ್ಯರಿಗಷ್ಟೇ ಅಲ್ಲದೇ ಸರ್ಕಾರಿ ಅಧಿಕಾರಿಗಳಿಗೂ ದಂಡ ವಿಧಿಸುತ್ತಿದೆ. ಇತ್ತೀಚೆಗಷ್ಟೇ ಪೊಲೀಸರು ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸುವ ಚಿತ್ರ ತೆಗೆದ AI ಕ್ಯಾಮರಾ, ನಿಯಮ ಉಲ್ಲಂಘಿಸಿದ್ದಕ್ಕಾಗಿದೆ ಚಲನ್ ಜಾರಿ ಮಾಡಿದೆ.

ಚೆವರಲೆಟ್ ಟವೆರಾ ನಿಯೋ SUV ವಾಹನದಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದು, ನಿಖರವಾದ ಸ್ಥಳ ತಿಳಿದುಬಂದಿಲ್ಲ. KL01 BK 5117 ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನವು ಪೊಲೀಸರ ಅಧಿಕೃತ ವಾಹನವಾಗಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರ ಹೆಸರಿನಲ್ಲಿ ಈ ಕಾರನ್ನು ನೋಂದಾಯಿಸಲಾಗಿದೆ. ಪೊಲೀಸ್ ಪಡೆ ಬಳಸುವ ಎಲ್ಲಾ ವಾಹನಗಳನ್ನು ಅವರ ಹೆಸರಿನಲ್ಲೇ ನೋಂದಾಯಿಸಲಾಗಿದ್ದು, ಅವುಗಳನ್ನು ಪೊಲೀಸ್ ಪಡೆಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ.

ai-camera-fines-cops-not-wearing-seat-belts

ಸಹ ಪ್ರಯಾಣಿಕರ ಸೀಟಿನಲ್ಲಿದ್ದ ವ್ಯಕ್ತಿ ಸೀಟ್ ಬೆಲ್ಟ್ ಧರಿಸದಿರುವುದನ್ನು AI ಕ್ಯಾಮರಾದಿಂದ ಚಿತ್ರ ತೆಗೆಯಲಾಗಿದೆ. ಹಗಲಿನಲ್ಲಿ ಸೆರೆಹಿಡಿಯಲಾದ ಆರಂಭಿಕ ಚಿತ್ರವು ಚಾಲಕ ಸೀಟ್ ಬೆಲ್ಟ್ ಧರಿಸಿರುವುದನ್ನು ತೋರಿಸುತ್ತದೆ. ಆದರೇ, ಅದೇ SUV ರಾತ್ರಿಯಲ್ಲಿ ಸೆರೆಹಿಡಿಯುವಿಕೆಯಲ್ಲಿ, ಚಾಲಕ ಸಹ ಸೀಟ್ ಬೆಲ್ಟ್ ಇಲ್ಲದೆ ವಾಹನವನ್ನು ಓಡಿಸಿರುವುದು AI ಕ್ಯಾಮರಾ ಗುರ್ತಿಸಿದೆ.

ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ ಮಾಡುವುದು ಅಪರಾಧವಾಗಿದ್ದು, ಅಧಿಕಾರಿಗಳಾಗಿದ್ದರೂ ಎಲ್ಲರಿಗೂ ನಿಯಮ ವರ್ತಿಸುತ್ತದೆ. ಇದು ಉಲ್ಲಂಘನೆ ಮಾತ್ರವಲ್ಲದೆ ಅತ್ಯಂತ ಅಪಾಯಕಾರಿಯೂ ಹೌದು. ಈ ಹಿಂದೆ ಸೀಟ್ ಬೆಲ್ಟ್ ಧರಿಸಿದ್ದರಿಂದಲೇ ಹಲವರು ಅಪಘಾತಗಳಲ್ಲಿ ಸಾವನ್ನಪ್ಪಿರುವ ನಿದರ್ಶನಗಳಿವೆ. ಹಾಗಾಗಿ ಕೇರಳ ಮೋಟಾರು ವಾಹನ ಇಲಾಖೆಯಿಂದ ಚಲನ್ ಜಾರಿ ಮಾಡಲಾಗಿದೆ.

ai-camera-fines-cops-not-wearing-seat-belts

ಆರಂಭದಲ್ಲಿ AI ಕ್ಯಾಮೆರಾಗಳನ್ನು ಅಳವಡಿಸಿದಾಗ, ತುರ್ತು ವಾಹನಗಳಿಗೆ ದಂಡದಿಂದ ವಿನಾಯಿತಿ ನೀಡಲಾಗಿದೆ ಎಂದು ಘೋಷಿಸಲಾಯಿತು. ಇದಕ್ಕೂ ಕಾರಣವಿದೆ, ಈ ವರ್ಷದ ಆರಂಭದಲ್ಲಿ ಕೇರಳ ಎಂವಿಡಿ (Motor Vehicles Department) ಮತ್ತು ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯು ವಿವಾದದಲ್ಲಿ ಸಿಲುಕಿಕೊಂಡಿತ್ತು, ನಿಯಮ ಉಲ್ಲಂಘನೆಗಾಗಿ KSEB ನೌಕರರ ವಿರುದ್ಧ ದಂಡವನ್ನು ವಿಧಿಸಿತ್ತು.

ಇದರಿಂದ ಕೋಪಗೊಂಡ KSEB ಬಾಕಿ ಉಳಿದಿರುವ ವಿದ್ಯುತ್ ಬಿಲ್‌ಗಳನ್ನು ಉಲ್ಲೇಖಿಸಿ MVD ಕಚೇರಿಗಳಿಗೆ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸುವ ಮೂಲಕ ಪ್ರತಿಕ್ರಿಯಿಸಿತ್ತು. ಇದೀಗ ಪೊಲೀಸ್ ಇಲಾಖೆಯ ಅಧಿಕಾರಿಗಳ ವಿರುದ್ಧವೇ ಚಲನ್ ಜಾರಿ ಮಾಡಲಾಗಿದ್ದರೂ, ಈವರೆಗೂ ಇಲಾಖೆ ಸ್ಪಂದಿಸಿಲ್ಲ. ಇದು ಕೂಡ ಈಗ ಕೇರಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ai-camera-fines-cops-not-wearing-seat-belts

ವೀಡಿಯೊದಲ್ಲಿ ಕಂಡುಬರುವ ಟವೇರಾದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನ್‌ಲೈನ್ ಹುಡುಕಾಟವನ್ನು ನಡೆಸಿದಾಗ, ಜೂನ್ 2023 ರಿಂದ ಈ ಎಸ್‌ಯುವಿ ಸುಮಾರು 11 ಚಲನ್‌ಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. AI ಕ್ಯಾಮೆರಾಗಳಿಂದ ತೆಗೆದ ಚಿತ್ರಗಳನ್ನು ಜನರು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದ್ದು, ಈಗ ಅಧಿಕಾರಿಗಳ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಕೇರಳದ ಒಬ್ಬ ಬೈಕ್ ಸವಾರನಿಗೆ 155 ನಿಯಮ ಉಲ್ಲಂಘನೆಗಳಿಗಾಗಿ 86,500 ರೂ. ದಂಡ ವಿಧಿಸಲಾಗಿದ್ದು, ಇದು ಇಲ್ಲಿಯವರೆಗೆ ರಾಜ್ಯದಲ್ಲಿ ನೀಡಲಾದ ಅತಿ ಹೆಚ್ಚು AI ಕ್ಯಾಮೆರಾ ದಂಡ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಈ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಕೇರಳದಲ್ಲಿ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಶೇಕಡಾ 50 ರಷ್ಟು ಕಡಿಮೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 24, 2023, 10:29 [IST]
English summary
Ai camera fines cops not wearing seat belts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+