ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ನಿಮ್ಮಲ್ಲಿ ಹಲವಾರು ಜನರು ವಿಮಾನದಲ್ಲಿ ಪ್ರಯಾಣಿಸಿರಬಹುದು. ಹೀಗೆ ಪ್ರಯಾಣಿಸುವಾಗ ವಿಮಾನವು ಲ್ಯಾಂಡಿಂಗ್ ಆಗುವ ವೇಳೆಯಲ್ಲಿ ರನ್‌ವೇಯಲ್ಲಿ ಎರಡು ಹೆಚ್ಚು ಪ್ರೆಷರ್ ಆಗಿರುವ ನೀರಿನ ಚಿಲುಮೆಗಳ ನಡುವೆ ಹಾದುಹೋಗುವುದನ್ನು ಗಮನಿಸಿರಬಹುದು.

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ಈ ಪ್ರಕ್ರಿಯೆಯು ವಿಮಾನಗಳಿಗೆ ಸಾಮಾನ್ಯವಾದುದಲ್ಲ. ಈ ಪ್ರಕ್ರಿಯೆಯನ್ನು ಮಧ್ಯಮ ಗಾತ್ರದ ಹಾಗೂ ದೊಡ್ಡ ಗಾತ್ರದ ಕಮರ್ಷಿಯಲ್ ವಿಮಾನಗಳಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ನೀವು ಈ ಪ್ರಕ್ರಿಯೆಯನ್ನು ಹಲವು ಬಾರಿ ನೋಡಿರಬಹುದಾದರೂ ಈ ಪ್ರಕ್ರಿಯೆಯ ಉದ್ದೇಶವೇನು ಎಂಬುದು ತಿಳಿದಿರುವುದಿಲ್ಲ. ಈ ಪ್ರಕ್ರಿಯೆಯ ಉದ್ದೇಶವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ಕೆಲವು ವಿಮಾನಗಳು ಇಳಿದ ಕೂಡಲೇ ನೀರು ಸಿಂಪಡಿಸಲಾಗುತ್ತದೆ. ವಿಮಾನಗಳ ಮೇಲಿರುವ ಕೊಳೆ ಅಥವಾ ಕಲ್ಮಶಗಳನ್ನು ತೊಳೆಯಲು ನೀರನ್ನು ಸಿಂಪಡಿಸಲಾಗುತ್ತದೆ ಎಂಬುದು ಹಲವರ ಅಭಿಪ್ರಾಯ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ಈ ಪ್ರಕ್ರಿಯೆಯನ್ನು ಸೂಕ್ಷವಾಗಿ ಗಮನಿಸಿದರೆ ನೀರಿನ ಫಿರಂಗಿ ಟೊರೆಂಟ್ ಅನ್ನು ನೇರವಾಗಿ ವಿಮಾನದ ಮೇಲೆ ಇಡುವುದಿಲ್ಲ. ಬದಲಿಗೆ ಎರಡು ವಾಟರ್ ಜೆಟ್‌ಗಳು ವಿಮಾನದ ಎದುರು ಬದಿಗಳಿಗೆ ನಿಂತು ಜೆಟ್ ವಿಮಾನದ ಮೇಲೆ ನೀರು ಸಿಂಪಡಿಸುತ್ತವೆ.

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ಈ ಪ್ರಕ್ರಿಯೆಯಲ್ಲಿ ನೀರು ಅನಿವಾರ್ಯವಾಗಿ ವಿಮಾನದ ಮೇಲೆ ಬೀಳುತ್ತದೆ. ಆದರೆ ಹೀಗೆ ಬೀಳುವ ನೀರು ಅಲ್ಪ ಪ್ರಮಾಣದಾಗಿರುತ್ತದೆ. ಇದರಿಂದ ವಿಮಾನದ ಮೇಲಿರುವ ಕೊಳೆ ತೆಗೆಯಲು ಸಾಧ್ಯವಿಲ್ಲ. ವಿಮಾನವನ್ನು ಸ್ವಚ್ಛಗೊಳಿಸಲು ಸಹ ಸಾಧ್ಯವಿಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ರನ್ ವೇಯಲ್ಲಿ ಇಳಿಯುವ ವಿಮಾನಗಳನ್ನು ಸ್ವಚ್ವಗೊಳಿಸುವ ಉದ್ದೇಶದಿಂದ ನೀರು ಸಿಂಪಡಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ ಪ್ರಕ್ರಿಯೆಯನ್ನು ಏಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ವಿಮಾನಗಳು ಲ್ಯಾಂಡಿಂಗ್ ಆದ ತಕ್ಷಣ ವಾಟರ್ ಸೆಲ್ಯೂಟ್ ಎಂದು ಕರೆಯಲ್ಪಡುವ ಸಂಪ್ರದಾಯದಂತೆ ನೀರಿನ ಫಿರಂಗಿಯೊಂದಿಗೆ ನೀರನ್ನು ಸಿಂಪಡಿಸಲಾಗುತ್ತದೆ. ವಿಮಾನದ ನಿವೃತ್ತಿಯಂತಹ ಔಪಚಾರಿಕ ಉದ್ದೇಶಗಳಿಗಾಗಿ ಈ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ಒಂದು ವಿಮಾನವು ತನ್ನ ಅಂತಿಮ ಹಾರಾಟವನ್ನು ನಡೆಸಿದಾಗ, ಹಾರಾಟದ ನಂತರ ರನ್ ವೇಯಲ್ಲಿ ಇಳಿಯುವಾಗ ಅದಕ್ಕೆ ವಾಟರ್ ಸೆಲ್ಯೂಟ್ ನೀಡಲಾಗುತ್ತದೆ. ವಿಮಾನ ನಿಲ್ದಾಣದ ಸಿಬ್ಬಂದಿ ಎರಡು ಅಗ್ನಿಶಾಮಕ ವಾಹನಗಳನ್ನು ರನ್ ವೇಯ ಎದುರು ಬದಿಗಳಲ್ಲಿ ನಿಲ್ಲಿಸುತ್ತಾರೆ.

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ವಿಮಾನವು ರನ್ ವೇಯಲ್ಲಿ ಇಳಿಯುತ್ತಿದ್ದಂತೆ, ಅಗ್ನಿಶಾಮಕ ದಳದವರು ವಿಮಾನದ ಮೇಲೆ ನೀರನ್ನು ಸಿಂಪಡಿಸುತ್ತಾರೆ. ಸಾಮಾನ್ಯವಾಗಿ ವಿಮಾನದ ನಿವೃತ್ತಿಯ ನಂತರ ವಾಟರ್ ಸೆಲ್ಯೂಟ್ ನೀಡಲಾಗುತ್ತದೆ. ಆದರೆ ಇತರ ಸಂದರ್ಭಗಳಲ್ಲಿಯೂ ವಾಟರ್ ಸೆಲ್ಯೂಟ್ ಮಾಡಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಮಾನಗಳಿಗೆ ವಾಟರ್ ಸೆಲ್ಯೂಟ್ ನೀಡುವ ಹಿಂದಿನ ಉದ್ದೇಶಗಳಿವು

ಉದಾಹರಣೆಗೆ ವಿಮಾನಯಾನ ಸಂಸ್ಥೆಯ ಕ್ಯಾಪ್ಟನ್ ನಿವೃತ್ತರಾಗುವಾಗ ಆತನ ಕೊನೆಯ ಹಾರಾಟದ ವಿಮಾನದ ಮೇಲೆ ವಾಟರ್ ಸೆಲ್ಯೂಟ್ ಮಾಡಲಾಗುತ್ತದೆ.ಇದೇ ವೇಳೆ ವಿಮಾನಯಾನವು ಟೇಕಾಫ್ ಆಗುವಾಗ ಅದರ ಕೊನೆಯ ಹಾರಾಟದಲ್ಲೂ ವಾಟರ್ ಸೆಲ್ಯೂಟ್ ನೀಡಲಾಗುತ್ತದೆ.

Most Read Articles

Kannada
English summary
Airplanes gets water salute for these reasons. Read in Kannada.
Story first published: Thursday, February 4, 2021, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X