ತಮಿಳು ಸೂಪರ್ ಸ್ಟಾರ್ ಅಜಿತ್ ಎಪ್ರಿಲಿಯಾ ಬೈಕ್ ಪ್ರೇಮ
ಸಾಮಾನ್ಯವಾಗಿ ಕನ್ನಡದಲ್ಲಿ ತಮಿಳರ ಬಗ್ಗೆ ಬರೆಯುವಾಗ ಅದನ್ನು ವಿರೋಧಿಸುವವರೇ ಜಾಸ್ತಿ. ಕನ್ನಡ ರಾಜ್ಯ ಸ್ನೇಹ ಹೊಂದಿರುವ ಪ್ರತಿಯೊಬ್ಬರಲ್ಲೂ ಇಂತಹ ರೋಷ ಉಕ್ಕಿ ಬರುವುದು ಸಹಜವೇ ಸರಿ. ಅಂತದ್ದರಲ್ಲಿ ಒಳ್ಳೆಯ ವಿಚಾರಗಳನ್ನು ಬರೆಯುವುದು ನಮ್ಮ ಕರ್ತವ್ಯವಾಗಿರುತ್ತದೆ. ಅಂತಿಮದಲ್ಲಿ ಭಾರತೀಯನೆಂಬ ಪ್ರೀತಿ ಗೌರವ ಹಾಗೆಯೇ ಇದು ಕನ್ನಡಿಗರ ದೊಡ್ಡತನವನ್ನು ಎತ್ತಿ ಹಿಡಿಯುತ್ತದೆ.
ಅಂದ ಹಾಗೆ ದಕ್ಷಿಣ ಭಾರತದಲ್ಲಿ 'ತಲ' ಎಂದೇ ಖ್ಯಾತಿ ಪಡೆದಿರುವ ತಮಿಳಿನ ಸೂಪರ್ ಸ್ಟಾರ್ ನಟ ಅಜಿತ್, ಬೈಕ್ ಪ್ರೇಮಿಯೂ ಹೌದು. ಇತ್ತೀಚೆಗಷ್ಟೇ ಬಿಎಂಡಬ್ಲ್ಯು ಎಸ್ 1000ಆರ್‌ಆರ್ ( BMW S1000RR) ಬೈಕ್‌ನಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಜಾಲಿ ರೈಡ್ ಹೊಡೆದಿದ್ದ ಈ 'ಬಿಲ್ಲಾ' ಖ್ಯಾತಿಯ ನಟ ಇದೀಗ ಮತ್ತೊಂದು ದುಬಾರಿ ಎಪ್ರಿಲಿಯಾ ಸೂಪರ್ ಬೈಕ್ ಖರೀದಿಸುವ ಮೂಲಕ ಗಮನ ಸೆಳೆದಿದ್ದಾರೆ.

25 ಲಕ್ಷಗಳಷ್ಟು ದುಬಾರಿ
ಕಾರು ಹಾಗೂ ಬೈಕ್‌ಗಳ ಬಗ್ಗೆ ಅತೀವ ಕ್ರೇಜ್ ಹೊಂದಿರುವ ಅಜಿತ್ 15ರಿಂದ 25 ಲಕ್ಷ ರು.ಗಳಷ್ಟು (ಆನ್ ರೋಡ್) ದುಬಾರಿಯ ಎಪ್ರಿಲಿಯಾ ಕ್ಯಾಪೊನಾರ್ಡ್ 1200 (Aprilia Caponord 1200) ಬೈಕ್ ಖರೀದಿಸಿದ್ದಾರೆ.

ರೇಸಿಂಗ್ ಪ್ರೇಮ
ಬಿಡುವಿಲ್ಲದ ಶೂಟಿಂಗ್ ಮಧ್ಯೆಯೂ ಸ್ವಲ್ಪ ಸಮಯ ಕಂಡುಕೊಳ್ಳುವ ಅಜಿತ್, ಬೈಕ್‌ನಲ್ಲಿ ರೇಸಿಂಗ್ ಮಾಡುವುದನ್ನು ಇಷ್ಟಪಡುತ್ತಾರೆ. ಇದೀಗ ಎಪ್ರಿಲಿಯಾ ಸೂಪರ್ ಬೈಕ್ ಖರೀದಿ ಮೂಲಕ ತಮ್ಮ ಪಟ್ಟಿಗೆ ಇನ್ನೊಂದು ಬೈಕ್ ಸೇರ್ಪಡೆಗೊಳಿಸಿದ್ದಾರೆ.

ಎಪ್ರಿಲಿಯಾ ಕ್ಯಾಪೊನಾರ್ಡ್ 1200
ಕೆಲವು ತಿಂಗಳುಗಳ ಹಿಂದೆಯಷ್ಟೇ ಪ್ಯೊಜೊ ಸಂಸ್ಥೆಯು ದೇಶದಲ್ಲಿ ಎಪ್ರಿಲಿಯಾ ಕ್ಯಾಪೊನಾರ್ಡ್ 1200 ಡ್ಯುಯಲ್ ಸ್ಪೋರ್ಟ್ ಮೋಟಾರ್‌ಸೈಕಲನ್ನು ಲಾಂಚ್ ಮಾಡಿತ್ತು.

ಮಿಲಾನ್ ಮೋಟಾರ್ ಶೋ
ದೇಶದ ಸಾಹಸ ಬೈಕ್ ಸೆಗ್ಮೆಂಟ್‌ಗೆ ಹೆಜ್ಜೆಯಿಟ್ಟಿರುವ ಎಪ್ರಿಲಿಯಾ ಕಳೆದ ವರ್ಷ ಇಟಲಿಯಲ್ಲಿ ನಡೆದ EICMA ಅಥವಾ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಪ್ರದರ್ಶನ ಕಂಡಿತ್ತು.

ಆಧುನಿಕ ತಂತ್ರಜ್ಞಾನ
ಎಪ್ರಿಲಿಯಾ ಕ್ಯಾಪೋನಾರ್ಡ್ 1200 ಸಿಸಿ ಬೈಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಳವಡಿಸಲಾಗಿದ್ದು, ಅತಿ ವೇಗದಲ್ಲೂ ಸ್ಥಿರತೆಯ ಪ್ರದರ್ಶನ ನೀಡಲಿದೆ.

ಸುರಕ್ಷತೆ
ಎಬಿಎಸ್, ಎಪಿಆರ್‌ಸಿ (ಎಪ್ರಿಲಿಯಾ ನಿರ್ವಹಣಾ ರೈಡ್ ಕಂಟ್ರೋಲ್), ಎಡಿಡಿ (ಎಪ್ರಿಲಿಯಾ ಡೈನಾಮಿಕ್ ಡ್ಯಾಂಪಿಗ್ ಸಿಸ್ಟಂ), ಎಟಿಸಿ (ಎಪ್ರಿಲಿಯಾ ಟ್ರಾಕ್ಷನ್ ಕಂಟ್ರೋಲ್) ಹಾಗೂ ಕ್ರೂಸ್ ಕಂಟ್ರೋಲ್ ಹೊಂದಿರಲಿದೆ.

ಮಾಡೆಲ್
ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಎಪ್ರಿಲಿಯಾ ದೇಶದಲ್ಲಿ ಲಭ್ಯವಿದ್ದು, ಕ್ಯಾಪೋನಾರ್ಡ್ 1200 ಹಾಗೂ ಕ್ಯಾಪೋನಾರ್ಡ್ 1200 ಟ್ರಾವೆಲ್ ಪ್ಯಾಕ್‌ನಲ್ಲಿ ಆಗಮನವಾಗಿದೆ. ಹಾಗೆಯೇ ಬಿಳಿ ಹಾಗೂ ಕಪ್ಪು ವರ್ಣಗಳಲ್ಲಿ ಲಭ್ಯವಾಗಲಿದೆ.

ಪ್ರತಿಸ್ಪರ್ಧಿ
ಡುಕಾಟಿ ಮಲ್ಟಿಸ್ಟ್ರಾಡಾ ಹಾಗೂ ಬಿಎಂಡಬ್ಲ್ಯು ಆರ್1200 ಜಿಎಸ್ ಬೈಕ್‌ಗಳಿಗೆ ಈ ಇಟಲಿಯ ವಾಹನ ತಯಾರಕ ಕಂಪನಿಯು ಕಠಿಣ ಪೈಪೋಟಿ ನೀಡುತ್ತಿದೆ.


Click it and Unblock the Notifications








