Akash Ambani: ಐಷಾರಾಮಿ ಬುಲೆಟ್ ಪ್ರೂಫ್ ಕಾರು ಖರೀದಿಸಿದ 'ಚಿಕ್ಕ ಅಂಬಾನಿ'.. ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani), ಹಿರಿಯ ಪುತ್ರ ಆಕಾಶ್ ಅಂಬಾನಿ (Akash Ambani) ಕೂಡ ತಮ್ಮ ಕುಟುಂಬದ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೂ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದ್ದು, ಹಲವು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಇತ್ತೀಚೆಗೆ ಅವರು, ಹೊಚ್ಚ ಹೊಸ ಬುಲೆಟ್ ಪ್ರೂಫ್ ಮರ್ಸಿಡಿಸ್ ಎಸ್680 ಗಾರ್ಡ್ (Mercedes S680 Guard) ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ನೂತನ ಕಾರಿನಲ್ಲಿ ಅವರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
'ಕಾರ್ಸ್ ಫಾರ್ ಯು' ಯುಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಅಂಬಾನಿ ಅವರು, ಹೊಸ 'ಮರ್ಸಿಡಿಸ್ ಎಸ್680 ಗಾರ್ಡ್' ಕಾರಿನಲ್ಲಿರುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಆಯೋಜಿಸಿದ್ದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಮುಂಬೈಗೆ ಹಿಂದಿರುಗುವಾಗ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೂತನ ಮರ್ಸಿಡಿಸ್ ಎಸ್680 ಗಾರ್ಡ್' ಸರಿ ಸುಮಾರು ರೂ.15 ಕೋಟಿ ಬೆಲೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆ, ವಿಶ್ವದಾದ್ಯಂತ ಖ್ಯಾತ ನಾಮರು ಈ ಕಾರನ್ನು ಬಳಕೆ ಮಾಡುತ್ತಾರೆ. ಇದನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, 3.5 ಇಂಚು ದಪ್ಪವಾಗಿರುವ ಬುಲೆಟ್ & ಬ್ಲಾಸ್ಟ್-ಪ್ರೂಫ್ ಮಲ್ಟಿ-ಲೇಯರ್ ಗ್ಲಾಸ್, ಡ್ರೈವರ್ ಜೊತೆ ಮಾತನಾಡಲು ಆನ್‌ಬೋರ್ಡ್ ಇಂಟರ್‌ಕಾಮ್ ವ್ಯವಸ್ಥೆಯನ್ನು ಹೊಂದಿದೆ.
ಈ ಕಾರು 6.0-ಲೀಟರ್ ವಿ12 ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 612 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 830 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದ್ದು, ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಜೊತೆಗೆ ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಆಕಾಶ್ ಅಂಬಾನಿ ಹಲವು ಪ್ರಖ್ಯಾತ ಕಾರುಗಳ ಮಾಲೀಕರು ಆಗಿದ್ದಾರೆ. ಅವರ ಬಳಿ ರೋಲ್ಸ್ ರಾಯ್ಸ್ ಡ್ರಾಪ್‌ಹೆಡ್ ಕೂಪೆ (Rolls-Royce Drophead Coupe) ಕಾರಿದೆ. ಸದ್ಯ ಇದರ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರು ರೂ.7.60 ಕೋಟಿ ಬೆಲೆಯನ್ನು ಹೊಂದಿತ್ತು. 6749 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿತ್ತು. ಇದರಲ್ಲಿ 4 ಜನರು ಸುಲಭವಾಗಿ ಓಡಾಟ ನಡೆಸಬಹುದಾಗಿತ್ತು.
ಬಿಎಂಡಬ್ಲ್ಯೂ ಸೀರೀಸ್ (BMW 5 Series) ಕಾರಿಗೂ ಆಕಾಶ್ ಅಂಬಾನಿ ಒಡೆಯರಾಗಿದ್ದಾರೆ. ಈ ಕಾರು, ರೂ.72.90 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 2-ಲೀಟರ್ ಟರ್ಬೊ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ 8-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 18-ಸ್ಪೀಕರ್ ಬೋವರ್ಸ್, ವಿಲ್ಕಿನ್ಸ್ ಸರೌಂಡ್ ಸೌಂಡ್ ಸಿಸ್ಟಮ್, ಮತ್ತು ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇವುಗಳು ಮಾತ್ರವಲ್ಲದೆ, ಲಂಬೋರ್ಘಿನಿ ಉರಸ್ (Lamborghini Urus) ಕಾರನ್ನು ಆಕಾಶ್ ಅಂಬಾನಿ ಹೊಂದಿದ್ದಾರೆ. ಇದು ರೂ.4.18 ರಿಂದ ರೂ.4.57 ಕೋಟಿ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 4-ಲೀಟರ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಪಡೆದಿದೆ. ಜೊತೆಗೆ ಬೆಂಟ್ಲೆ ಬೆಂಟೈಗಾ, ಹಾಗೂ ಫೆರಾರಿ ಪುರೊಸಾಂಗ್ಯೂ ಕಾರುಗಳಿಗೂ ಅವರು ಮಾಲೀಕರಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications