ಎಲ್ಲರಿಗು ಒಂದೆ ಕಾನೂನು ಅಲ್ಲವೇ? ಅಂಬಾನಿ ಮಗ ಸೀಟ್‌ಬೆಲ್ಟ್ ಧರಿಸದೆ ಕಾರು ಚಾಲನೆ: ವಿಡಿಯೋ

ಭಾರತದ ಅತ್ಯಂತ ಶ್ರೀಮಂತರೆನಿಸಿಕೊಂಡಿರುವ ಅಂಬಾನಿ ಕುಟುಂಬವು ಅಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮುಖೇಶ್ ಅಂಬಾನಿ ಅವರ ಮಗ ಆಕಾಶ್ ಅಂಬಾನಿ (Akash Ambani) ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ತಮ್ಮ 10 ಕೋಟಿ ರೂ. ಫೆರಾರಿ ಪುರೊಸಾಂಗೆ ಎಸ್‌ಯುವಿಯನ್ನು ಸೀಟ್‌ಬೆಲ್ಟ್‌ ಧರಿಸದೆ ಓಡಿಸುತ್ತಿರುವುದು ಕಂಡುಬಂದಿದೆ. ಅಂಬಾನಿ ಕುಟುಂಬವು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ರೋಲ್ಸ್ ರಾಯ್ಸ್, ಮರ್ಸಿಡಿಸ್ ಎಸ್-ಕ್ಲಾಸ್ ಮತ್ತು ರೇಂಜ್ ರೋವರ್‌ಗಳಲ್ಲಿ ಓಡಾಡುತ್ತಾರೆ. ಈ ಹಿಂದೆ ಸಿಟ್‌ಬೆಲ್ಟ್‌ ಧರಿಸಿದ್ದರಾದರೂ, ಈಗ ಆಕಾಶ್ ಅಂಬಾನಿ ನಿಯಮ ಉಲ್ಲಂಘಿಸಿರುವುದು ಸುದ್ದಿಯಾಗಿದೆ.

ಆಕಾಶ್ ಅಂಬಾನಿ ತಮ್ಮ ಫೆರಾರಿ ಪುರೊಸಾಂಗು ಕಾರಿನ್ನು ಓಡಿಸುತ್ತಿರುವ ವಿಡಿಯೋವನ್ನು ಕಾರ್ ಜರ್ನಿ 99 ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಆಕಾಶ್ ಅಂಬಾನಿ ಜೊತೆಗೆ ಭದ್ರತಾ ಸಿಬ್ಬಂದಿ ಇತರ ಕಾರುಗಳಲ್ಲಿ ಬರುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು. ಈ ಬೆಂಗಾವಲು ಪಡೆಯು ದುಬಾರಿ ಲ್ಯಾಂಡ್ ರೋವರ್ ಡಿಸ್ಕವರಿ ಹಾಗೂ ಪೊಲೀಸ್ ಅಧಿಕಾರಿಗಳು ಎಂಜಿ ಗ್ಲೋಸ್ಟರ್‌ನಲ್ಲಿ ಬರುತ್ತಿದ್ದರು.

akash-ambani-driving-car-without-wearing-seatbelt-viral-video

ವಿಡಿಯೋ ಅಷ್ಟೇನು ಸ್ಪಷ್ಟವಾಗಿರಲಿಲ್ಲ, ಮಸುಕಾಗಿ ಕಾಣುತ್ತಿದ್ದರೂ ಅದರಲ್ಲಿ ಆಕಾಶ್ ಅಂಬಾನಿ ಬುಹುತೇಕ ಸೀಟ್‌ಬೆಲ್ಟ್‌ ಧರಿಸದಂತೆಯೇ ಕಾಣುತ್ತದೆ. ಆದರೆ ಖಚಿತವಾಗಿ ಹೇಳಲಾಗುವುದಿಲ್ಲ, ಈ ಕುರಿತ ವಿಡಿಯೋವನ್ನು ಇಲ್ಲೂ ಹಂಚಿಕೊಳ್ಳಲಾಗಿದೆ. ಇದನ್ನು ಪರಿಶೀಲಿಸಿ ಅವರು ಸೀಟ್‌ಬೆಲ್ಟ್ ಧರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಎರಡು ಫೆರಾರಿ ಪುರೋಸಾಂಗ್‌ಗಳಿವೆ: ಅಂಬಾನಿ ಕುಟುಂಬವು ಎರಡು ಪುರೊಸಾಂಗ್ ಎಸ್‌ಯುವಿಗಳನ್ನು ಹೊಂದಿದೆ. ಈ ಹಿಂದೆ ಮೊದಲನೆಯದು ಶಾರುಖ್ ಖಾನ್ ಅವರನ್ನು ಬಿಡುವಾಗ ಜಾಮ್‌ ನಗರದಲ್ಲಿ ಕಂಡುಬಂದಿತ್ತು. ಇದೀಗ ಆಕಾಶ್ ಅಂಬಾನಿ ಚಾಲನೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು. ಈ ಕಾರನ್ನು ಇತ್ತೀಚೆಗಷ್ಟೆ ಅಂಬಾನಿ ಕುಟುಂಬ ಡೆಲಿವರಿ ಪಡೆದಿದೆ ಎಂದು ಹೇಳಲಾಗುತ್ತಿದೆ.

akash-ambani-driving-car-without-wearing-seatbelt-viral-video

ಈ ಎಸ್‌ಯುವಿ 10 ಕೋಟಿ ರೂ. ಬೆಲೆಯಿದ್ದು, ಎರಡು ಕಾರುಗಳು ಸದ್ಯ ಅಂಬಾನಿ ಕುಟುಂಬದ ಒಡೆತನದಲ್ಲಿವೆ. ಈ ಕಾರುಗಳ ಎಂಜಿನ್ ವಿಶೆಷತೆಗಳ ಬಗ್ಗೆ ಹೇಳುವುದಾದ್ರೆ, 6.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿವೆ. ಈ ಎಂಜಿನ್ 725 ಬಿಹೆಚ್ ಪವರ್ ಹಾಗೂ 716 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ರೋಲ್ಸ್ ರಾಯ್ಸ್ ಚಾಲನೆ: ಆಕಾಶ್ ಅಂಬಾನಿ ಡ್ರೈವಿಂಗ್ ಮಾಡುತ್ತಾ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕೆಲವು ವಾರಗಳ ಹಿಂದೆ, ಅವರು ತಮ್ಮ ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆಯನ್ನು ಚಾಲನೆ ಮಾಡುತ್ತಾ ಕಾಣಿಸಿಕೊಂಡ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಅವರೊಂದಿಗೆ ಪತ್ನಿ ಶ್ಲೋಕಾ ಮೆಹ್ತಾ ಮತ್ತು ಸಹೋದರಿ ಇಶಾ ಅಂಬಾನಿ ಕೂಡ ಇದ್ದರು.

ವೀಡಿಯೊದಲ್ಲಿರುವ ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆ ಫ್ಯಾಂಟಮ್‌ನ ಅಪರೂಪದ ವೇರಿಯೆಂಟ್‌ಗಳಲ್ಲಿ ಒಂದಾಗಿದೆ. ಕ್ರೋಮ್ ವೀಲ್‌ಗಳು ಮತ್ತು ಐಷಾರಾಮಿ ಒಳಾಂಗಣದೊಂದಿಗೆ ಈ ಕಾರು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇದರ ಎಂಜಿನ್ 6.8 ಲೀಟರ್‌ನ ವಿ12 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 460 ಬಿಹೆಚ್ ಪವರ್ ಹಾಗೂ 720 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 12, 2024, 18:18 [IST]
English summary
Akash ambani driving car without wearing seatbelt viral video
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+