ಚೆನ್ನೈ ಕುವರಿ ಅಲಿಷಾ ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್

By Nagaraja

ಭೇಟಿಯಾಗಿ ಇವರೇ ದೇಶದ ಮೊದಲ ಮಹಿಳಾ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ ಅಲಿಷಾ ಅಬ್ದುಲ್ಲಾ. ನಿಮ್ಮಲ್ಲಿ ಹಲವರು ಇದೇ ಮೊದಲ ಬಾರಿಗೆ ಅಲಿಷಾ ಬಗ್ಗೆ ಕೇಳುತ್ತಿರಬಹುದು. ಮೋಟಾರು ರೇಸಿಂಗ್ ಎಂಬುದು ಪುರುಷರಿಗೆ ಮಾತ್ರ ಮೀಸಲಾಗಿರುವ ಸಾಹಸ ಕ್ರೀಡೆ ಎಂಬುದನ್ನು ತಪ್ಪು ಎಂದು ತೋರಿಸಿಕೊಂಡಿರುವ ಅಲಿಷಾ ಸಿನೆಮಾ ರಂಗದಲ್ಲೂ ಹೆಸರು ಮಾಡಿದ್ದಾರೆ.

ಹೀಗೆ ಎಲ್ಲ ಕ್ರೀಡೆ ವಿಭಾಗಗಳಲ್ಲೂ ಮಹಿಳೆಯರು ಸಾಧನೆ ಮೆರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ಹಾಗಿದ್ದರೆ ಬನ್ನಿ 25ರ ಹರೆಯದ ಈ ಚೆನ್ನೈ ಕುವರಿಯ ಕುರಿತಾಗಿ ಹೆಚ್ಚು ತಿಳಿದುಕೊಳ್ಳೋಣವೇ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಮಹಿಳಾ ಬೈಕ್ ರೇಸರ್ ಅಲಿಷಾ ಅಬ್ದುಲ್ಲಾ ಹುಟ್ಟಿ ಬೆಳೆದಿದ್ದು ನೆರೆಯ ಚೆನ್ನೈಯಲ್ಲಿ. 1989ನೇ ಇಸವಿಯ ಜುಲೈ 24ರಂದು ಜನಿಸಿರುವ ಈಕೆ ಚಿಕ್ಕವನಿಂದಲೇ ರೇಸಿಂಗ್ ಬಗ್ಗೆ ಬಹಳ ಉತ್ಸಾಹವನ್ನು ಹೊಂದಿದ್ದರು.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಒಂಬತ್ತರ ಹರೆಯದಲ್ಲೇ ಗೊ ಕಾರ್ಟಿಂಗ್ ( go-karting) ರೇಸಿಂಗ್ ನಲ್ಲಿ ಭಾಗವಹಿಸುವ ಮೂಲಕ ಹೆಸರು ಮಾಡಿದ್ದ ಈಗೆ 11ರ ಹರೆಯದಲ್ಲಿ ಗೊ ಕಾರ್ಟಿಂಗ್ ರೇಸ್ ಗೆದ್ದುಕೊಂಡಿದ್ದರು.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಅಷ್ಟೇ ಅಲ್ಲದೆ 13ನೇ ವಯಸ್ಸಿನಲ್ಲಿ ಎಂಆರ್ ಎಫ್ ರಾಷ್ಟ್ರೀಯ ಗೊ ಕಾರ್ಟಿಂಗ್ ಚಾಂಪಿಯನ್ ಶಿಪ್ ಹಾಗೂ ರಾಷ್ಟ್ರೀಯ ಮಟ್ಟದ ಫಾರ್ಮುಲಾ ಕಾರು ರೇಸಿಂಗ್ ಓಪನ್ ಕ್ಲಾಸ್ ನಲ್ಲಿ ಅತ್ಯುತ್ತಮ ಆರಂಭಿಗ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಚೆನ್ನೈನಲ್ಲೇ ವ್ಯಾಸಂಗ ಕೈಗೊಳ್ಳುತ್ತಿರುವ ಅಲಿಷಾ ಅವರಿಗೆ ಚಿಕ್ಕವನಿಂದಲೇ ಸ್ವತ: ಬೈಕ್ ರೇಸರ್ ಆಗಿರುವ ಅಪ್ಪ ಹಾಗೂ ಅಮ್ಮ ಸ್ಪೂರ್ತಿಯಾಗಿದ್ದು, ದೈನಂದಿನ ಐದು ತಾಸುಗಳಷ್ಟು ಕಠಿಣ ಅಭ್ಯಾಸದಲ್ಲಿ ನಿರತರಾಗುತ್ತಿದ್ದರು. ಅಲ್ಲದೆ 14ನೇ ವಯಸ್ಸಿನಲ್ಲೇ ಬೈಕ್ ರೇಸಿಂಗ್ ಗೆ ಕಾಲಿರಿಸಿದ್ದರು.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

2004ರಲ್ಲಿ ಫಾರ್ಮುಲಾ ಒನ್ ಕಾರು ರೇಸಿಂಗ್ ಗೂ ಕಾಲಿರಿಸಿದ ಈಕೆ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ನಾಲ್ಕನೇಯವರಾಗಿ ಗುರಿ ತುಲುಪಿದ್ದರು.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಆಕೆ ಹೇಳುವ ಪ್ರಕಾರ ಫಾರ್ಮುಲಾ ಒನ್ ಕಾರು ರೇಸಿಂಗ್ ತುಂಬಾನೇ ದುಬಾರಿಯಾಗಿದ್ದು, ಪ್ರತಿಯೊಂದು ಅಭ್ಯಾಸಕ್ಕೂ ಕನಿಷ್ಠ ಒಂದು ಲಕ್ಷ ರುಪಾಯಿ ವ್ಯಯ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರಾಯೋಜಕತ್ವದ ಅಗತ್ಯವಿರುತ್ತದೆ ಎಂದಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಅಲ್ಲದೆ ತಮ್ಮ ಅನುಭವ ಹಂಚಿಕೊಂಡಿರುವ ಅಲಿಷಾ, ರೇಸರ್ ಓರ್ವ ತಮ್ಮಲ್ಲಿ ತಾವು ನಂಬಿಕೆಯನ್ನಿಟ್ಟುಕೊಳ್ಳಬೇಕಾಗಿದ್ದು, ಮಾನಸಿಕವಾಗಿಯೂ ದೈಹಿಕವಾಗಿಯೂ ಸಮರ್ಥರಾಗಿಬೇಕು ಎಂದು ತಿಳಿಸಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಕಾರೇ ಅಥವಾ ಬೈಕ್ ರೇಸ್ ಆಗಿರಲಿ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾಕೆಂದರೆ ಎಲ್ಲದಕ್ಕಿಂತಲೂ ಮಿಗಿಲಾಗಿ ಪ್ರಾಣ ಮುಖ್ಯವಾಗಿದೆ. ಅಂತೆಯೇ ಇದರಲ್ಲಿ ಬಳಸಲಾಗುವ ಲೆಥರ್ ಸೂಟ್ಸ್ ಹಾಗೂ ಇತರ ಭದ್ರತಾ ಕವಚಗಳು ತುಂಬಾನೇ ದುಬಾರಿಯಾಗಿದೆ ಎಂದು ವಿವರಿಸಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಈಗ ದೇಶದ ಮಹಿಳೆಯರಿಗಾಗಿ ಮಾದರಿಯಾಗುವ ಗುರಿ ಹೊಂದಿರುವ ಅಲಿಷಾ ತಮ್ಮದೇ ಆದ ರೇಸಿಂಗ್ ಅಕಾಡೆಮಿ ತೆರೆದುಕೊಂಡಿದ್ದಾರೆ. ಅಲ್ಲದೆ ಈಗಾಗಲೇ 90ಕ್ಕಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈಕೆ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ಎತ್ತಿ ಹಿಡಿದಿರುವುದು ಹೆಮ್ಮೆಯ ಕ್ಷಣ ಎಂದಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಕಲ್ಪನಾ ಚಾವ್ಲಾ ನನಗೆ ಮಾದರಿಯಾಗಿದ್ದು, ಆಕೆಯ ತರಹನೇ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗೆಯೇ ಕೇವಲ ರೇಸಿಂಗ್ ಗೆ ಮಾತ್ರ ಸೀಮಿತಗೊಳ್ಳದೇ, ಸಿನೆಮಾ ಹಾಗೂ ಫ್ಯಾಶನ್ ರಂಗದಲ್ಲೂ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ. ಇದಕ್ಕಾಗಿ ಫಿಟ್ನೆಸ್ ಕಾಯ್ದುಕೊಳ್ಳಬೇಕಾಗಿರುವುದು ಅತಿ ಅಗತ್ಯ ಎಂದು ತಿಳಿಸಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ದೇಶದ ಏಕೈಕ ವೇಗದ ಮಹಿಳಾ ಬೈಕ್ ಹಾಗೂ ಕಾರು ರೇಸರ್ ಎಂದು ಗುರುತಿಸಿಕೊಂಡಿರುವ ಅಲಿಷಾ, ವೈಫಲ್ಯದಿಂದಲೇ ತಾನು ಮೇಲೆ ಎದ್ದು ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಯಶಸ್ಸಿಗಿಂತ ವೈಫಲ್ಯದಿಂದ ಹೇಗೆ ಹೊರಬರುತ್ತೀರಿ ಎಂಬುದು ಮುಖ್ಯ ಎಂದಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಮೋಟಾರು ಕ್ರೀಡೆ ಅತ್ಯಂತ ದುಬಾರಿಯಾಗಿರುವುದರಿಂದ ಸರಕಾರದ ಮಾನ್ಯತೆ ಅಗತ್ಯ. ಸಾಮಾನ್ಯ ಬೈಕ್ ರೇಸಿಂಗ್ ಗೆ 10ರಿಂದ 25 ಸಾವಿರ ರು.ಗಳಷ್ಟು ಖರ್ಚು ತಗಲುತ್ತದೆ. ಪ್ರಸ್ತುತ ಮೋಟಾರು ಕ್ರೀಡೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿಶ್ವ ದರ್ಜೆಯ ಟ್ರ್ಯಾಕ್ ಗಳು ನಿರ್ಮಾಣವಾಗುತ್ತಿದೆ. ಅಲ್ಲದೆ ಭವಿಷ್ಯದಲ್ಲಿ ಕ್ರಿಕೆಟ್ ಬಳಿಕ ದೇಶದ ಅತ್ಯಂತ ದೊಡ್ಡ ಕ್ರೀಡೆ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

13 ವರ್ಷಗಳ ಕಾಲ ತಮ್ಮನ್ನು ತಾವೇ ರೇಸಿಂಗ್ ನಲ್ಲಿ ತೊಡಗಿಸಿಕೊಂಡಿರುವ ಅಲಿಷಾ, ಇವೆಲ್ಲಕ್ಕೂ ತಾವು ಮಾಡಿರುವ ತ್ಯಾಗ, ಪರಿಶ್ರಮ ಹಾಗೂ ಏಕಾಗ್ರತೆಯೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕಾಮ್ ಜೊತೆ ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಅಲಿಷಾ ಅಬ್ದುಲ್ಲಾ

ದೇಶದ ಮೊದಲ ಮಹಿಳಾ ರೇಸಿಂಗ್ ಚಾಂಪಿಯನ್- ಅಲಿಷಾ ಅಬ್ದುಲ್ಲಾ

ಈಗ ಸಾಂಪ್ರಾದಾಯಸ್ಥ ಮಹಿಳೆಯ ಮೈ ಚಳಿಯನ್ನು ಬಿಟ್ಟು ಮೋಟಾರು ಕ್ರೀಡೆ ವಿಭಾಗದಲ್ಲಿ ಸಾಧನೆ ಮಾಡಿರುವ ಅಲಿಷಾ ಅಬ್ದುಲ್ಲಾ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


More from DriveSpark

Article Published On: Friday, May 15, 2015, 12:55 [IST]
English summary
Alisha Abdullah - Indias first female national racing champion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+