ಏನಿದು ರಫೇಲ್ ವಿವಾದ? ವಾಯುಪಡೆಗೆ ಆಗಿರುವ ಲಾಭವೇನು?
ಈಗಷ್ಟೇ ಫ್ರಾನ್ಸ್ ದೇಶದ ಸಂದರ್ಶನದ ವೇಳೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಫ್ರಾನ್ಸ್‌ವಾ ಹೊಲ್ಯಾಂಡ್ ಜೊತೆ 'ರಫೇಲ್' ಯುದ್ಧ ವಿಮಾನ ಖರೀದಿಯ ಮಹತ್ವಾಂಕಾಕ್ಷೆಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದಾದ ಬೆನ್ನಲ್ಲೇ ವಿವಾದಗಳು ಭುಗಿಲೆದ್ದಿದ್ದವು.
ಅಷ್ಟಕ್ಕೂ ರೇಫಲ್ ಫೈಟರ್ ಜೆಟ್ ಖರೀದಿಯಲ್ಲಿ ಭಾರತೀಯ ವಾಯು ಸೇನೆಗೆ ಆಗಿರುವ ಪ್ರಯೋಜನಗಳೇನು? ಇದರ ಹಿಂದೆ ವಿವಾದಗಳಿಗೆ ಕಾರಣಗಳೇನು? ಇವೆಲ್ಲಕ್ಕೂ ಉತ್ತರ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಿದ್ದೇವೆ.

ರಫೇಲ್ ಯುದ್ಧ ವಿಮಾನ ಖರೀದಿಯು ಭಾರತೀಯ ವಾಯು ಸೇನೆಯ ತುರ್ತು ಅಗತ್ಯವಾಗಿತ್ತು. ಇದರೊಂದಿಗೆ ಅತ್ಯಾಧುನಿಕ ವಿಮಾನಗಳ ಕೊರತೆ ಶೀಘ್ರದಲ್ಲೇ ನೀಗಲಿದೆ.

ಫ್ರಾನ್ಸ್ ಭೇಟಿ ವೇಳೆ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ್ದ ಭಾರತ ಪ್ರಧಾನಿ ನರೇಂದ್ರ ಮೋದಿ 36 ರಫೇಲ್ ಯುದ್ಧ ವಿಮಾನಗಳ ಖರೀದಿಸುವುದಾಗಿ ಘೋಷಿಸಿದ್ದರು.

ಈ ವೇಳೆ ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದಾಗಿ ಬಿಜೆಪಿ ಮುಖಂಡರೇ ಆದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದರು.

ಇದು ಸ್ವೇಚ್ಛಾದಾರದ ನಿರ್ಧಾರ ಎಂದು ಕಿಡಿ ಕಾರಿದ್ದ ಅವರು ಕಳಪೆ ಸಾಧನೆ ತೋರಿರುವ ರಫೇಲ್ ಫೈಟರ್ ಜೆಟ್ ಕಡಿಮೆ ಇಂಧನ ಕ್ಷಮತೆ ಹೊಂದಿರುದಾಗಿ ಟೀಕಿಸಿದ್ದರು.

ಈ ನಡುವೆ ಪ್ರಧಾನಿ ನಿರ್ಧಾರವನ್ನು ಬೆಂಬಲಿಸಿದ್ದ ರಕ್ಷಣಾ ಸಚಿವ ಮನೋಹರ್ ಪರ್ರೀಕರ್, ತತ್ ಕ್ಷಣಕ್ಕೆ ವಾಯುಪಡೆಯನ್ನು ಬಲಾಢ್ಯಗೊಳಿಸಲು ನೆರವಾಗಲಿದೆ ಎಂದಿದ್ದರು.

ಈ ಬಹುಕೋಟಿಯ ಒಪ್ಪಂದದಂತೆ ಮುಂದಿನ ಎರಡು ವರ್ಷಗಳಲ್ಲಿ 36ರಷ್ಟು ರಫೇಲ್ ಯುದ್ಧ ವಿಮಾನಗಳು ಭಾರತವನ್ನು ಬಂದು ತಲುಪಲಿದೆ.

ಒಟ್ಟು 74.70 ಕೋಟಿ ಮೌಲ್ಯದ ಒಪ್ಪಂದದಲ್ಲಿ 36 ರೆಫೇಲ್ ಜೆಟ್ ಗಳನ್ನೂ ಫ್ರಾನ್ಸ್ ನಿಂದ ಖರೀದಿ ಮಾಡಲಾಗುವುದು ಎಂದು ಮೋದಿಯವರು ಘೋಷಿಸಿದ್ದಾರೆ.

ವಿಶೇಷವೆಂದರೆ ಸದ್ಯಕ್ಕೆ 36 ಜೆಟ್ ಗಳನ್ನು ಖರೀದಿಸಲಾಗುತ್ತಿದ್ದು ಉಳಿದ 108 ವಿಮಾನಗಳು ನಮ್ಮ ಬೆಂಗಳೂರಿನ ಹೆಚ್ ಎಎಲ್ ಘಟಕದಲ್ಲಿ ಜೋಡಣೆಯಾಗಲಿದೆ.

ಅಂದರೆ ಹಂತ ಹಂತವಾಗಿ ರಫೇಲ್ ಯುದ್ಧ ವಿಮಾನವು ಭಾರತಕ್ಕೆ ಆಗಮಿಸಲಿದ್ದು, ಉಭಯ ದೇಶಗಳು ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಪ್ರೋತ್ಸಾಹಿಸಲಿದೆ.

36ರಷ್ಟು ರಫೇಲ್ ಫೈಟರ್ ಜೆಟ್ ವಿಮಾನಗಳನ್ನು ತುರಂತ್ ಆಗಿ ಖರೀದಿಸುವುದರ ಮೂಲಕ ವಾಯುಸೇನೆಗೆ ಪ್ರಾಣವಾಯು ಸಿಕ್ಕಂತಾಗಿದೆ. ಇದು 2007ರ ಐಎಎಫ್ ಟೆಸ್ಟಿಂಗ್ ವೇಳೆಯಲ್ಲಿನ ಸಮಾನ ಸಂರಚನೆಗಳನ್ನು ಪಡೆಯಲಿದೆ.

ಪ್ರಸ್ತುತ ದೇಶದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗದೇ ಇರಬಹುದು. ಆದರೆ ಪ್ರತಿಯೊಂದು ರಾಷ್ಟ್ರದ ರಕ್ಷಣಾ ವಿಭಾಗವನ್ನು ಬಲಾಢ್ಯಗೊಳಿಸುವುದರಲ್ಲಿ ವಾಯುಪಡೆಯ ಪಾತ್ರ ಮಹತ್ವದಾಗಿರುತ್ತದೆ. ಅಲ್ಲದೆ ಚೀನಾ ಹಾಗೂ ಪಾಕಿಸ್ತಾನ ಜೊತೆ ಗಡಿ ಹಂಚಿಕೊಳ್ಳುತ್ತಿರುವ ಭಾರತ ಪ್ರತಿ ಕ್ಷಣವೂ ಸಜ್ಜಾಗಿರುವ ಅಗತ್ಯವಿದೆ.

ಫ್ರಾನ್ಸ್ ದೇಶದ ಮಿಲಿಟರಿ ಅಗತ್ಯಗಳಿಗಾನುಸಾರವಾಗಿ ಯುದ್ಧ ವಿಮಾನಗಳನ್ನು ನಿರ್ಮಿಸಿ ಕೊಡುತ್ತಿರುವ ದಸ್ಸಾಲ್ಟ್ ಏವಿಯೇಷನ್, ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುತ್ತಿದೆ.

ದಸ್ಸಾಲ್ಟ್ ಪ್ರಕಾರ, ರಫೇಲ್ ಯುದ್ಧ ವಿಮಾನವು ವಾಯುವಿನಿಂದ ನೆಲಕ್ಕೆ ಹಾಗೂ ವಾಯುವಿನಿಂದ ವಾಯುನಲ್ಲೇ (air to air) ನೇರ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ರಫೇಲ್ ಯುದ್ಧ ವಿಮಾನಗಳು ಏಕಕಾಲದಲ್ಲಿ ಅನೇಕ ಮಿಷನ್ ನಿರ್ವಹಿಸಲು ಸಾಮರ್ಥ್ಯ (omnirole) ಹೊಂದಿರುತ್ತದೆ.

ಇದರಲ್ಲಿ ಪೈಲಟ್ ಗಳಿಗೆ ಆನ್ ರೋಡ್ ಸೆನ್ಸಾರ್ ಮಾಹಿತಿಯು ಲಭ್ಯವಾಗಲಿದೆ.

ಈಗಾಗಲೇ ನ್ಯಾಟೋದ ಲಿಬಿಯಾ ಮಿಷನ್ ನಲ್ಲಿ ದಾಳಿ ನಡೆಸಿರುವ ರಫೇಲ್ ಯುದ್ಧ ವಿಮಾನಗಳು ಅತ್ಯಂತ ಶಕ್ತಿಯುತವಾಗಿ ಟಾರ್ಗೆಟ್ ಮಾಡುವ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲದೆ ಆ್ಯಂಟಿ ಶಿಪ್ ದಾಳಿ (ಹಡಗು), ಅಣ್ವಸ್ತ್ರ, ಬೇಹುಗಾರಿಕೆ ಹಾಗೂ ವಾಯುವಿನಲ್ಲಿ ರಕ್ಷಣಾ ವಲಯ ರೂಪಿಸುವುದು ಇದರ ಇತರ ವಿಶೇಷತೆಗಳಾಗಿವೆ.

ಅತ್ಯಂತ ಕಡಿಮೆ ಎತ್ತರದಲ್ಲಿ ಶತ್ರು ಸೇನೆಯ ಅಥವಾ ಯುದ್ಧ ಭೂಮಿಯ ಪ್ರದೇಶಕ್ಕೆ ಬೆಂಕಿ ಉಂಡೆಗಳನ್ನು ಉಗುಳುತ್ತಾ ಒಳ ನುಗ್ಗುವ ಸಾಮರ್ಥ್ಯವನ್ನು ರಫೇಲ್ ಹೊಂದಿರುತ್ತದೆ.

ರಫೇಲ್ ಯುದ್ಧ ವಿಮಾನದಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆಯು (OBOGS)ಇರುತ್ತದೆ. ಇಂದೊಂದು ಧನಾತ್ಮಕ ಅಂಶವಾಗಿದೆ ಎಂದು ದಸ್ಸಾಲ್ಟ್ ಅಭಿಪ್ರಾಯಪಡುತ್ತದೆ.

ಗುರಿಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ರಫೇಲ್ ಹೊಂದಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸ್ಕ್ಯಾನರ್ ರಾಡಾರ್ ಬಳಕೆಯಾಗುತ್ತಿರುವ ಏಕಮಾತ್ರ ಯುರೋಪ್ ಯುದ್ಧ ವಿಮಾನ ಇದಾಗಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಎಲ್ಲ ಹವಾಮಾನ ಪರಿಸ್ಥಿತಿಯಲ್ಲಿ ರಫೇಲ್ ಯುದ್ಧ ವಿಮಾನ ಪರಿಣಾಮಕಾರಿ ಎನಿಸಿಕೊಳ್ಳಲಿದೆ.

ಆಯಾಮ
ರೆಕ್ಕೆಯ ಅಗಲ - 10.90 ಮೀಟರ್
ಉದ್ದ - 15.30 ಮೀಟರ್
ಎತ್ತರ - 5.30 ಮೀಟರ್

ಒಟ್ಟು ಮೂರು ವೆರಿಯಂಟ್ ಗಳಲ್ಲಿ ರಫೇಲ್ ಯುದ್ಧ ವಿಮಾನ ಲಭ್ಯವಿರುತ್ತದೆ.
ರಫೇಲ್ ಸಿ ಸಿಂಗಲ್ ಸೀಟರ್
ರಫೇಲ್ ಎಂ ಸಿಂಗಲ್ ಸೀಟರ್
ರಫೇಲ್ ಬಿ ಟು ಸೀಟರ್

ಇದರಲ್ಲಿ ಡಿಟಿಟಲ್ ಫ್ಲೈ ಬೈ ವೈರ್ ವಿಮಾನ ನಿಯಂತ್ರಣ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಉತ್ತಮ ಸ್ಥಿರತೆಯನ್ನು ಪ್ರದಾನ ಮಾಡಲಿದೆ.

ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಮಾರುವುದಕ್ಕೆ ದಸ್ಸಾಲ್ಟ್ ಗೆ ಯಾವುದೇ ಅಭ್ಯಂತರವಿರಲಿಲ್ಲ. ಆಧರೆ ಭಾರತದ ಎಚ್ ಎಎಲ್ ಘಟಕದಲ್ಲಿ 108 ವಿಮಾನಗಳ ನಿರ್ಮಾಣದ ವಿಷಯ ಬಂದಾಗ ದಸ್ಸಾಲ್ಟ್ ಜವಾಬ್ದಾರಿಯನ್ನು ವಹಿಸಲು ಹಿಂಜರಿದಿತ್ತು. ಇದುವೇ ಇತ್ತ ದೇಶಗಳ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು.

ಭಾರತದ ಎಚ್ ಎಎಲ್ ಸಾಮರ್ಥ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ದಸ್ಸಾಲ್ಟ್ ಬಳಿಕ ವಿಮಾನ ನಿರ್ಮಾಣಕ್ಕೆ ತಂತ್ರಜ್ಞಾನ ಹಂಚಿಕೊಳ್ಳುವದಾಗಿ ಒಪ್ಪಿಕೊಂಡಿತ್ತು.

ಅಷ್ಟಕ್ಕೂ ರಫೇಲ್ ಯುದ್ಧ ವಿಮಾನಗಳು ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಾಢ್ಯಗೊಳಿಸಲಿದೆಯೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...


Click it and Unblock the Notifications








