ನಟ ಅಲ್ಲು ಅರ್ಜುನ್‌ಗೆ ತಂದೆಯಿಂದ ದುಬಾರಿ ಬೆಲೆಯ ಹೊಸ BMW ಕಾರು ಗಿಫ್ಟ್?

ತೆಲುಗು ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಏಪ್ರಿಲ್ 8ರಂದು 42ನೇ ವಸಂತಕ್ಕೆ ಕಾಲಿಟ್ಟಿದ್ದು, ಅಂದೇ ಪುಷ್ಪ 2 ಟೀಸರ್ ಬಿಡುಗಡೆಗೂಳಿಸುವ ಮೂಲಕ ಚಿತ್ರತಂಡ ಅಲ್ಲು ಅರ್ಜುನ್ ಅವರಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ನೀಡಿತ್ತು.

ನಟ ಅಲ್ಲು ಅರ್ಜುನ್‌ರ ಹುಟ್ಟುಹಬ್ಬಕ್ಕೆ ಅವರ ತಂದೆ ಅಲ್ಲು ಅರವಿಂದ್ ಹೊಚ್ಚ ಹೊಸ ಬಿಎಂಡಬ್ಲ್ಯು 7 ಸಿರೀಸ್ (BMW 7 Series) ಸೆಡಾನ್ ಅನ್ನು ಉಡೊಗೊರೆಯಾಗಿ ನೀಡಿದ್ದಾರೆ. ಅದಕ್ಕಾಗಿ ನೂತನ ಕಾರನ್ನು ಕೆಲವೇ ದಿನಗಳ ಹಿಂದೆ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಖಚಿತತೆ ಇಲ್ಲ. ಸದ್ಯ ಅಲ್ಲು ಅರ್ಜುನ್‌ ಕುಟುಂಬಕ್ಕೆ ಸೇರಿದ ಎನ್ನಲಾದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Allu Arjun Birthday Father Allu Aravind Gifted Bmw 7 Series Car Sources

ನೂತನ ಬಿಎಂಡಬ್ಲ್ಯು 7 ಸಿರೀಸ್ ಕಾರು ರೂ.1.81 ಲಕ್ಷದಿಂದ ರೂ.1.84 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 740ಐ ಎಂ ಸ್ಪೋರ್ಟ್ಸ್ ಮತ್ತು 740ಡಿ ಎಂ ಸ್ಪೋರ್ಟ್ಸ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಈ ಬಿಎಂಡಬ್ಲ್ಯು 7 ಸಿರೀಸ್ ಎರಡು ಪವರ್ ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 3 - ಲೀಟರ್ 6 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 381 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 520 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ಸಿಗುತ್ತದೆ.

ಬಿಎಂಡಬ್ಲ್ಯು 7 ಸಿರೀಸ್ ಕಾರು 3 - ಲೀಟರ್ 6 ಸಿಲಿಂಡರ್ ಎಂಜಿನ್ ಪಡೆದಿದ್ದು, 286 ಪಿಎಸ್ ಪವರ್ ಮತ್ತು 650 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಇದು ಸಹ 8 - ಸ್ವೀಡ್ ಆಟೋಮೆಟಿಕ್ ನೊಂದಿಗೆ ಲಭ್ಯವಿದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 12.61 ರಿಂದ 16.55 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಈ ಕಾರು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 14.9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂಬದಿಯ ಪ್ರಯಾಣಿಕರಿಗಾಗಿ 31.3 - ಇಂಚಿನ 8ಕೆ, ಟಚ್‌ಸ್ಕ್ರೀನ್ ಡಿಸ್ಪ್ಲೇ, ಮಸಾಜ್ ಫಂಕ್ಷನ್ ನೊಂದಿಗೆ ಫ್ರಂಟ್ & ರೇರ್ ಸೀಟ್ಸ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಗಂಟೆಗೆ 250 ಗರಿಷ್ಠ ವೇಗವನ್ನು ಪಡೆಯಲಿದೆ.

ನಟ ಅಲ್ಲು ಅರ್ಜುನ್‌ಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದ್ದು, ಅವರ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಸಾಕಷ್ಟು ಐಷಾರಾಮಿ ಸೆಡಾನ್ ಹಾಗೂ ಎಸ್‌ಯುವಿಗಳಿವೆ. ರೇಂಜ್ ರೋವರ್ ವೋಗ್, ಹಮ್ಮರ್ ಹೆಚ್2, ವೋಲ್ವೋ ಎಕ್ಸ್‌ಸಿ 90 ಟಿ8 ಎಕ್ಸಲೆನ್ಸ್, ಮರ್ಸಿಡಿಸ್ ಜಿಎಲ್ಇ 350ಡಿ, ಜಾಗ್ವಾರ್ ಎಕ್ಸ್‌ಜೆ ಎಲ್ ಮತ್ತು ಬಿಎಂಡಬ್ಲ್ಯೂ ಎಕ್ಸ್6 ಎಂ ಸ್ಪೋರ್ಟ್‌ ಸೇರಿದಂತೆ ಹಲವು ಕಾರುಗಳಿಗೆ ಅಲ್ಲು ಅರ್ಜುನ್‌ ಮಾಲೀಕರಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 11, 2024, 8:30 [IST]
English summary
Allu arjun birthday father allu aravind gifted bmw 7 series car sources
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+