ವಾಹನ ಲೋಕದ 25 ಸತ್ಯಾಸತ್ಯತೆಗಳ ಬಗ್ಗೆ ಅರಿಯಿರಿ

ಭಾರತೀಯರ ದೃಷ್ಟಿಕೋನದಲ್ಲಿದಲ್ಲಿ ಮನೆ ಬಳಿಕ ಖರೀದಿಸಬಹುದಾದ ಎರಡನೇ ಅತಿದುಬಾರಿ ಖರೀದಿಯೆಂದರೆ ಅದು ಕಾರು. ಇದು ಪ್ರಯಾಣಿಕರನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಂಡೊಯ್ಯುವುದಕ್ಕಿಂತ ಮಿಗಿಲಾಗಿ ಪ್ರತಿಷ್ಠೆಯ ಸಂಕೇತವಾಗಿ ಪರಿಣಮಿಸಿದೆ.

ಇನ್ನು ವಿದೇಶಕ್ಕೆ ಹೋಲಿಸಿದರೆ ದೇಶದ ಕಾರು ಲೋಕ ಅಷ್ಟೊಂದು ವಿಸ್ತಾರವಾಗಿ ಬೆಳೆದಿಲ್ಲ. ಆದರೆ ಇದೀಗ ಕಾಲ ಬದಲಾಗಿದೆ. ಬೆಳೆದು ಬರುತ್ತಿರುವ ಭಾರತ ಕೂಡಾ ವಾಹನೋದ್ಯಮದಲ್ಲೂ ಶಿಪ್ರಗತಿಯ ಬೆಳವಣಿಗೆ ಸಾಧಿಸುತ್ತದೆ.

ಅಂದ ಹಾಗೆ ಕಾರು ಬಗ್ಗೆ ಅನೇಕ ಆಸಕ್ತಿದಾಯಕ ವಿಚಾರಗಳನ್ನು ನೀವು ಕೇಳಿರಬಹುದು. ಈ ಪೈಕಿ ಕೆಲವೊಂದನ್ನು ಪಟ್ಟಿ ಮಾಡಿ ತೋರಿಸುವ ಕೆಲಸ ನಮ್ಮದ್ದು. ಹೀಗೆ ಚರ್ಚೆ ಮಾಡಿ ಸಾಗಿದರೆ ಕಾರು ಲೋಕದ ರೋಚಕ ಸತ್ಯಾಸತ್ಯತೆಗಳನ್ನು ಅರಿಯಲು ಸಾಧ್ಯ. ಈ ಲೇಖನ ಮೂಖಾಂತರ ವಾಹನ ಜಗತ್ತಿಗೆ ಸಂಬಂಧಪಟ್ಟ ಆಸಕ್ತಿಕರ, ಅದ್ಭುತ, ಚಮತ್ಕಾರಿ ಹಾಗೂ ಬೆರಗುಗೊಳಿಸುವ ಮಾಹಿತಿಗಳನ್ನು ನಾವು ನಿಮಗೆ ಕೊಡಲಿದ್ದೇವೆ. ಇನ್ಯಾಕೆ ತಡ ಸ್ಲೈಡರ್‌ನತ್ತ ಮುಂದುವರಿಯಿರಿ...

ವಾಹನ ಲೋಕದ ಸತ್ಯಾಸತ್ಯತೆಗಳ ಬಗ್ಗೆ ಅರಿಯಿರಿ

ಜಗತ್ತಿನ ಪ್ರಪ್ರಥಮ ಆಧುನಿಕ ಕಾರು ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? ಹೌದು 1886ರಲ್ಲಿ ಬಿಡುಗಡೆಗೊಂಡ ವಿಶ್ವದ ಮೊದಲ ಆಧುನಿಕ ಕಾರಿನ ಸೂತ್ರಧಾರಿ ಕಾರ್ಲ್ ಬೆಂಝ್ ಆಗಿದ್ದಾರೆ.

ಫ್ಲ್ಯಾಟ್ ಮೊಬೈಲ್

ಫ್ಲ್ಯಾಟ್ ಮೊಬೈಲ್

ಪ್ರಪಂಚದಲ್ಲಿ ಕಡಿಮೆ ಎತ್ತರವನ್ನು ಹೊಂದಿದ ಕಾರೆಂಬ ಖ್ಯಾತಿಗೆ 'ಫ್ಲ್ಯಾಟ್ ಮೊಬೈಲ್' ಪಾತ್ರವಾಗಿದೆ. ಕೇವಲ 19 ಇಂಚು ಎತ್ತರ ಹೊಂದಿರುವ ಈ ಕಾರನ್ನು ಬಕ್ಕಿಂಗ್ ಹ್ಯಾಮ್‌ಶೈರ್‌ನ ಪೆರ್ರಿ ವಾಟ್ಕಿನ್ಸ್ ರೂಪಿಸಿದ್ದಾರೆ.

ಕೌಂಟ್ ಡಿ ಡಿಯಾನ್ (count de dion)

ಕೌಂಟ್ ಡಿ ಡಿಯಾನ್ (count de dion)

ಮೊದಲ ನೋಟಕ್ಕೆ ಕೌಂಟ್ ಡಿ ಡಿಯಾನ್ ವಾಹನವನ್ನು ಕಾರು ಎಂದು ಬಿಂಬಿಸುವುದು ಕಷ್ಟ. ಆದರೆ ನಿಮ್ಮ ಮಾಹಿತಿಗಾಗಿ ಇದು ಅಸ್ತಿತ್ವದಲ್ಲಿರುವ ಅತಿ ಪುರಾತನ ಕಾರಾಗಿದೆ. 1884ನೇ ಇಸವಿಯಲ್ಲಿ ಫ್ರಾನ್ಸ್‌ನಲ್ಲಿ ನಿರ್ಮಿಸಲಾದ ಈ ಕಾರನ್ನು 2011ರಲ್ಲಿ ನಡೆದ ಹರಾಜುವೊಂದರಲ್ಲಿ ಬರೋಬ್ಬರಿ 4.6 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟಗೈಯಲಾಗಿತ್ತು.

ಬ್ರೀಥಲೈಜರ್ (breathalyzer)

ಬ್ರೀಥಲೈಜರ್ (breathalyzer)

ಫ್ರಾನ್ಸ್‌ನಲ್ಲಿ ಪ್ರತಿಯೊಬ್ಬ ಕಾರು ಚಾಲಕರೂ ಬ್ರೀಥಲೈಜರ್ (breathalyzer) ತಮ್ಮ ಬಳಿ ಇಟ್ಟುಕೊಳ್ಳುವುದು ಕಡ್ಡಾಯ ನಿಯಮವಾಗಿದೆ.

ಕಾರುಗಳು

ಕಾರುಗಳು

ಜಗತ್ತಿನಲ್ಲಿ ಸರಾಸರಿ 1 ಬಿಲಿಯನ್ ಕಾರುಗಳು (ಸರಿಯಾಗಿ ಕಾರ್ಯನಿರ್ವಹಿಸುವ) ಬಳಕೆಯಲ್ಲಿದೆ. ಇದು ವಿಶ್ವ ಜನಸಂಖ್ಯೆಯ 1/7ರಷ್ಟಾಗಿದೆ.

ಅಪಘಾತದಲ್ಲಿ ಮೊದಲ ಮರಣ

ಅಪಘಾತದಲ್ಲಿ ಮೊದಲ ಮರಣ

1896ನೇ ಇಸವಿಯಲ್ಲಿ ಕಾರು ಅಪಘಾತದಿಂದಾಗಿ ಮೊದಲ ಸಾವು ದಾಖಲಾಗಿತ್ತು. ರಸ್ತೆ ದಾಟುತ್ತಿದ್ದ ವೇಳೆ 44ರ ಹರೆಯದ ಮಹಿಳೆ ಬ್ರಿಡ್ಜೆಟ್ ಡ್ರಿಸ್ಕಾಲ್ ಎಂಬಾಕೆಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು. ಹಾಗಿದ್ದರೂ ಕಾರು ರಸ್ತೆ ಅಪಘಾತಕ್ಕೆ ಶರಣಾದ ಮೊದಲ ವ್ಯಕ್ತಿ ಹೆನ್ರಿ ಹಾಲೆ ಬ್ಲಿಸ್ ಆಗಿದ್ದಾರೆ. 1899 ಸೆಪ್ಟೆಂಬರ್ 14ರಂದು ನ್ಯೂಯಾರ್ಕ್ ನಗರದಲ್ಲಿ ಅವಘಡ ಸಂಭವಿಸಿತ್ತು.(ಸಾಂಧರ್ಭಿಕ ಚಿತ್ರ)

ಮೊದಲ ದಾಖಲಾತಿ ಪಡೆದ ಅಪಘಾತ

ಮೊದಲ ದಾಖಲಾತಿ ಪಡೆದ ಅಪಘಾತ

ಏತನ್ಮಧ್ಯೆ ಮೊದಲ ದಾಖಲಾತಿ ಪಡೆದ ಕಾರು ಅಪಘಾತ 1769ರಲ್ಲಿ ಸಂಭವಿಸಿತ್ತು. ನಿಕೊಲಾಸ್ ಜೋಸೆಫ್ ಕಗ್‌ನಾಬ್ ಚಲಾಯಿಸಿದ್ದ ದೊಡ್ಡದಾದ ಸ್ಟೀಮ್ ಗಾಡಿ ಅಪಘಾತಕ್ಕೀಡಾಗಿತ್ತು.(ಸಾಂಧರ್ಭಿಕ ಚಿತ್ರ)

ಭೂಮಿಯಿಂತ ಚಂದ್ರನಲ್ಲಿಗೆ

ಭೂಮಿಯಿಂತ ಚಂದ್ರನಲ್ಲಿಗೆ

ಇಲ್ಲೊಂದು ಆಸಕ್ತಿದಾಯಕ ವಿಚಾರವಿದೆ- ನಿಮ್ಮ ಭಾವನಲೋಕದಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ ಹೆದ್ದಾರಿಯೊಂದನ್ನು ರೂಪಿಸಿಕೊಳ್ಳಿ. ಗಂಟೆಗೆ 100 ಕೀ.ಮೀ. ವೇಗದಲ್ಲಿ ಚಲಿಸಿದರೆ ಚಂದ್ರನಲ್ಲಿಗೆ ತಲುಪಲು ಎಷ್ಟು ಸಮಯ ಬೇಕಾದಿತ್ತು? ಹೌದು, ನಿಮಗೆ ಚಂದ್ರ ಗ್ರಹಕ್ಕೆ ತಲುಪಲು ಭರ್ತಿ 6 ತಿಂಗಳು ತಗುಲಲಿದೆ.

ನಾಣ್ಯ ಚಾಲಿತ ಪಾರ್ಕಿಂಗ್ ಮೀಟರ್

ನಾಣ್ಯ ಚಾಲಿತ ಪಾರ್ಕಿಂಗ್ ಮೀಟರ್

ಜಗತ್ತಿನ ಮೊದಲ ನಾಣ್ಯ ಚಾಲಿತ ಪಾರ್ಕಿಂಗ್ ಮೀಟರನ್ನು 1935ನೇ ಇಸವಿಯಲ್ಲಿ ಒಕ್ಲಹೋಮ (Oklahoma) ನಗರದಲ್ಲಿ ಆಳವಡಿಸಲಾಗಿತ್ತು.

ಎಂಜಿನ್ ಬದಲಾವಣೆ

5 ರಾಯಲ್ ಮರೈನ್‌ಗೆ ಸೇರಿದ ತಂಡವೊಂದು ಫೋರ್ಡ್ ಎಸ್ಕಾರ್ಟ್ ಕಾರಿನ ಎಂಜಿನನ್ನು ಕೇವಲ 42 ಸೆಕೆಂಡುಗಳಲ್ಲಿ ಬದಲಾಯಿಸಿತ್ತು. ಇದು ವಿಶ್ವದಲ್ಲೇ ಎಂಜಿನ್ ಬದಲಾಯಿಸಲು ತಗೊಂಡ ಅತಿ ಕಡಿಮೆ ಸಮಯವೆಂಬ ಮನ್ನಣೆಗೆ ಪಾತ್ರವಾಗಿದೆ.

ಕಾರು ಸಾಲ

ಕಾರು ಸಾಲ

ಜರ್ಮನಿಯ ಮಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕಾರು ಪ್ರೇಮ ಎಲ್ಲರಿಗೂ ತಿಳಿದೇ ಇದೆ. ಆದರೆ ಸೆರೆವಾಸದಲ್ಲಿರುವ ಸಂದರ್ಭದಲ್ಲಿ ಮರ್ಸಿಡಿಸ್ ಬೆಂಝ್ ಡೀಲರ್‌ಶಿಪ್‌ವೊಂದರಿಂದ ಕಾರು ಸಾಲಕ್ಕಾಗಿ ವಿನಂತಿಸಿಕೊಂಡಿದ್ದರಂತೆ?

ದಂಡ

ದಂಡ

ಇನ್ನು ಬ್ರಿಟನ್‌ನಲ್ಲಿ ನಿಲ್ಲಿಸಿದ ಕಾರಿನಲ್ಲಿ ಹಾರ್ನ್ ಹೊಡೆದರೆ 30 ಪೌಂಡ್ ಅಂದರೆ ರು. 3000ರಷ್ಟು ದಂಡ ಕಟ್ಟಬೇಕಾಗುತ್ತದೆ. ನಿಜಕ್ಕೂ ಶಬ್ದ ಮಾಲಿನ್ಯ ತಡೆಗಟ್ಟಲು ಇಂದೊಂದು ಉತ್ತಮ ಉಪಾಯವಲ್ಲವೇ?

ಬೆಂಝ್ ಕಮಾಲ್

ಬೆಂಝ್ ಕಮಾಲ್

ಅಲ್ಬೇನಿಯಾ ಎಂಬುದು 2,821,977ರಷ್ಟು ಜನಸಂಖ್ಯೆ ಹೊಂದಿರುವ ಯುರೋಪ್‌ ಖಂಡದ ಒಂದು ಸಣ್ಣ ದೇಶವಾಗಿದೆ. ಆದರೆ ಆ ರಾಷ್ಟ್ರದ ವಿಶೇಷತೆಯೆಂದರೆ ಅಲ್ಲಿರುವ ಶೇಕಡಾ 80ರಷ್ಟು ಕಾರುಗಳು ಮರ್ಸಿಡಿಸ್ ಬೆಂಝ್‌‌ಗೆ ಸೇರಿದ್ದಾಗಿದೆ. ಇದರಿಂದಲೇ ಈ ದೇಶದ ಶ್ರೀಮಂತಿಕೆಯನ್ನು ಅಳೆಯಬಹುದಾಗಿದೆ.

ವಾಹನ ಲೋಕದ ಸತ್ಯಾಸತ್ಯತೆಗಳ ಬಗ್ಗೆ ಅರಿಯಿರಿ

ಬಹುತೇಕ ಎಲ್ಲ ಫಾರ್ಮುಲಾ ಒನ್ ಹಾಗೂ ಗರಿಷ್ಠ ನಿರ್ವಹಣೆಯ ಕಾರುಗಳಲ್ಲಿ ಒಂದು ವಿಧದ ಶಾಖ ನಿರೋಧಕ ನಿಷ್ಕಾಸ ಪೈಪ್ ಲೇಪನವನ್ನು ಬಳಸಲಾಗುತ್ತದೆ. ನಿಮ್ಮ ಮಾಹಿತಿಗಾಗಿ, ಇಂತಹ ತಂತ್ರಗಾರಿಕೆಯನ್ನು ಮೊದಲು ಅಣುಸ್ಥಾವರಗಳಲ್ಲಿ ಬಳಸುವುದಕ್ಕಾಗಿ ಅಭಿವೃದ್ಧಿಪಡಿಸಲಾಗಿತ್ತು.

ಮೊದಲ ಮೋಟಾರು ರೇಸಿಂಗ್ ಸರ್ಕ್ಯೂಟ್

ಮೊದಲ ಮೋಟಾರು ರೇಸಿಂಗ್ ಸರ್ಕ್ಯೂಟ್

ವಿಶ್ವದ ಮೊದಲ ಮೋಟಾರ್ ರೇಸಿಂಗ್ ಸರ್ಕ್ಯೂಟ್ ಅನ್ನು ಬ್ರಿಟನ್‌ನ ಸರ್ರೆಯ ವೆಬ್ರಿಡ್ಜ್ ಸಮೀಪದ ಬ್ರೂಕ್‌ಲ್ಯಾಂಡ್‌ನಲ್ಲಿ ನಿರ್ಮಿಸಲಾಗಿತ್ತು. ಮೋಟಾರ್ ರೇಸಿಂಗ್ ಉದ್ದೇಶ ನಿಮಿತ್ತ ನಿರ್ಮಿಸಲಾದ ಈ ರೇಸ್ ಟ್ರ್ಯಾಕ್ 4.43 ಕೀ.ಮೀ.ಗಳಷ್ಟು ದೂರ ಹರಡಿತ್ತು.

ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್

ಜಗತ್ತಿನ ಶ್ರೀಮಂತ ಸಾಂಪ್ರದಾಯಿಕ ರಾಷ್ಟ್ರಗಳಲ್ಲಿ ಒಂದಾಗಿರುವ ಹಾಂಕಾಂಗ್‌ನಲ್ಲಿ ಅತಿ ಹೆಚ್ಚು ರೋಲ್ಸ್ ರಾಯ್ಸ್ ಕಾರುಗಳಿವೆ.

ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್

ಗ್ರಾಹಕರ ಬೇಡಿಕೆಯ ಅನುಸಾರವಾಗಿ ರೋಲ್ಸ್ ರಾಯ್ಸ್‌ನ ಪ್ರತಿಯೊಂದು ಬಿಡಿಭಾಗಗಳನ್ನು ಜೋಡಣೆ ಮಾಡಲಾಗುತ್ತದೆ. ಹಾಗಿರುವಾಗ 2008ರಲ್ಲಿ ಶ್ರೀಮಂತ ವ್ಯಕ್ತಿಯೊಬ್ಬರು ತಮ್ಮ ರೋಲ್ಸ್ ರಾಯ್ಸ್‌ಗೆ 2,00,000 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆಬಾಳುವ ಅತಿ ದುಬಾರಿ ವಜ್ರದ ಲಾಂಛನವನ್ನು ಲಗತ್ತಿಸಿದ್ದರು.

ಸ್ಟೀವ್ ಜಾಬ್ಸ್

ಸ್ಟೀವ್ ಜಾಬ್ಸ್

ಜಗತ್ತಿನ ಪ್ರಖ್ಯಾತ ಉದ್ಯಮಿ ಸ್ಟೀವ್ ಜಾಬ್ಸ್ ಬಳಿಯಿದ್ದ ಮರ್ಸಿಡಿಸ್ ಎಸ್‌ಎಲ್55 ಎಎಂಜಿ ಕಾರಿನಲ್ಲಿ ಚಾಲನಾ ಪರವಾನಗಿ ಪ್ಲೇಟ್ ಲಗತ್ತಿಸಿರಲಿಲ್ಲ. ಯಾಕೆಂದರೆ ಕ್ಯಾಲಿಫೋರ್ನಿಯಾ ನಿಯಮದಂತೆ ಹೊಸ ಕಾರು ಖರೀದಿಸಿದ ಆರು ತಿಂಗಳ ವರೆಗೆ ರಿಜಿಸ್ಟ್ರೇಶನ್ ಇಲ್ಲದೆಯೂ ಗಾಡಿ ಓಡಿಸಬಹುದಾಗಿತ್ತು. ಇನ್ನು ಆರು ತಿಂಗಳಾಗುವಷ್ಟರಲ್ಲಿ ಸ್ಟೀವ್ ಜಾಬ್ಸ್ ತಮ್ಮ ಕಾರನ್ನು ಬದಲಾಯಿಸಿಕೊಂಡಿದ್ದರು.

ಮಕ್ಕಳ ಆಟದ ಕರಡಿ

ಮಕ್ಕಳ ಆಟದ ಕರಡಿ

ಬ್ರಿಟನ್‌ನಲ್ಲಿ ಟ್ರಾಫಿಕ್ ಪೊಲೀಸರು ತಮ್ಮೊಂದಿಗೆ ಮಕ್ಕಳ ಆಟದ ಕರಡಿಯನ್ನು ಹೊತ್ಯೊಯ್ಯುತ್ತಿದ್ದರು. ಈ ಮೂಲಕ ರಸ್ತೆ ಅಪಘಾತ ಸಂದರ್ಭಗಳಲ್ಲಿ ಮಕ್ಕಳನ್ನು ಸಾಂತ್ವನಗೊಳಿಸಲು ನೆರವಾಗುತ್ತಿದ್ದರು.

ಟೊಯೊಟಾ

ಟೊಯೊಟಾ

ವಿಶ್ವದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ, ದಿನಂಪ್ರತಿ 13,000 ಕಾರುಗಳನ್ನು ಉತ್ಪಾದಿಸುತ್ತಿದೆ.

ಪ್ರಪ್ರಥಮ ಟ್ರಾಫಿಕ್ ಸಿಗ್ನಲ್

ಪ್ರಪ್ರಥಮ ಟ್ರಾಫಿಕ್ ಸಿಗ್ನಲ್

1927ರಲ್ಲಿ ಇಂಗ್ಲೆಂಡ್‌ನ ವೊಲ್ವರ್ಹ್ಯಾಂಪ್ಟನ್‌ನಲ್ಲಿ (Wolverhampton) ವಿಶ್ವದ ಪ್ರಪ್ರಥಮ ವಿದ್ಯುತ್ ಚಾಲಿತ ಟ್ರಾಫಿಕ್ ಲೈಟ್‌ ಸಿಗ್ನಲ್‌ಗಳನ್ನು ಆಳವಡಿಸಲಾಗಿತ್ತು.

ಗಾಳಿಗೂ ಫೋಕ್ಸ್‌ವ್ಯಾಗನ್ ನಂಟು

ಗಾಳಿಗೂ ಫೋಕ್ಸ್‌ವ್ಯಾಗನ್ ನಂಟು

ಬಹುತೇಕ ವೋಲ್ವೋ ಕಾರುಗಳಿಗೆ ಗಾಳಿಯ ಹೆಸರನ್ನಿಡಲಾಗಿದೆ. ಉದಾಹರಣೆಗೆ ಪ್ಯಾಸೆಟ್- ಇದು ಜರ್ಮನಿಯಲ್ಲಿ ಬೀಸುತ್ತಿರುವ ಗಾಳಿಯಾಗಿದೆ. ಹಾಗೆಯೇ ಗಾಲ್ಫ್- ಇದು ಗಲ್ಫ್‌ ಪ್ರದೇಶದಲ್ಲಿ ಬೀಸುವ ಗಾಳಿಯಾಗಿದೆ. ಈ ಸಾಲಿಗೆ ಪೊಲೊ (ಪೊಲಾರ್ ವಿಂಡ್) ಹಾಗೂ ಜೆಟ್ಟಾ (ಜೆಟ್ ಸ್ಟೀಮ್) ಕೂಡಾ ಸೇರಿಕೊಂಡಿದೆ.

ಹಾಡೊಂದ ಹಾಡುವೇ ನಾ

ಹಾಡೊಂದ ಹಾಡುವೇ ನಾ

ನೀವು ಡ್ರೈವಿಂಗ್ ವೇಳೆ ಗುಣು ಗುಣು ಹಾಡು ಹೇಳುತ್ತೀರಾ? ಅಧ್ಯಯನ ವರದಿಯೊಂದರ ಪ್ರಕಾರ ಶೇಕಡಾ 90ರಷ್ಟು ಮಂದಿ ಡ್ರೈವಿಂಗ್ ವೇಳೆ ಹಾಡುತ್ತಾರಂತೆ!

ಹಿರಿಯರ ಕಾರು ಮಾರ್ಕ್

ಹಿರಿಯರ ಕಾರು ಮಾರ್ಕ್

ಜಪಾನ್ ದೇಶದಲ್ಲಿ ಕುತೂಹಲಕಾರಿ ಟ್ರಾಫಿಕ್ ನಿಯಮವೊಂದಿದ್ದು, ಇದರ ಪ್ರಕಾರ 75 ವರ್ಷ ದಾಟಿದ ಹಿರಿಯ ಚಾಲಕರು ತಮ್ಮ ಕಾರಿನ ಹಿಂದುಗಡೆ (ಚಿತ್ರದಲ್ಲಿ ತೋರಿಸಿರುವಂತೆಯೇ) ಹಿರಿಯರ ಕಾರು ಎಚ್ಚರಿಕಾ ಸಂಕೇತವನ್ನು (koreisha) ಕಡ್ಡಾಯವಾಗಿ ಆಳವಡಿಸಬೇಕು.

ಬೆಂಕಿ ಜ್ವಾಲೆ ಹೊರಚಿಮ್ಮುವ ಕಾರು

ಬೆಂಕಿ ಜ್ವಾಲೆ ಹೊರಚಿಮ್ಮುವ ಕಾರು

ದಕ್ಷಿಣ ಆಫ್ರಿಕಾದಲ್ಲಿ ಕಾರು ಕಳ್ಳತನವನ್ನು ತಡೆಗಟ್ಟಲು ಬಿಎಂಡಬ್ಲ್ಯು, ಬೆಂಕಿ ಜ್ವಾಲೆ ಹೊರ ಚಿಮ್ಮುವ ವಿಶೇಷ ತಂತ್ರಜ್ಞಾನವನ್ನು ಅಭವೃದ್ಧಪಡಿಸಿದೆ. ಆದರೆ ಪ್ರಾಯೋಗಿಕವಾಗಿ ಇದು ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದು ತಿಳಿದು ಬಂದಿಲ್ಲ.

ವಾಹನ ಲೋಕದ ಸತ್ಯಾಸತ್ಯತೆಗಳ ಬಗ್ಗೆ ಅರಿಯಿರಿ

ಇದೀಗ ವಾಹನ ಜಗತ್ತಿನ ಸತ್ಯಾಸತ್ಯತೆ ಲೇಖನ ನಿಮಗೆ ಹೇಗನಿಸಿತು? ಈ ಕುರಿತು ನಿಮ್ಮ ಬಳಿ ಹೆಚ್ಚಿನ ಮಾಹಿತಿಯಿದ್ದಲ್ಲಿ ನಮ್ಮ ಜತೆ ಹಂಚಿಕೊಳ್ಳಿರಿ. ನಮ್ಮ ಮುಂದಿನ ಲೇಖನದಲ್ಲಿ ಇದನ್ನು ಆಳವಡಿಸುವ ಪ್ರಯತ್ನ ಮಾಡಲಾಗುವುದು. ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

More from DriveSpark

Article Published On: Saturday, October 19, 2013, 11:00 [IST]
English summary
In this post we have put together some interesting, amazing, quirky and astonishing facts related to cars and automobiles in general. Click through the slides and see how many of them you did or did not know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+