ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಸಾಮಾನ್ಯವಾಗಿ ಬಿಲಿಯನೇರ್‌ಗಳು ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಕೆಲವು ಬಿಲಿಯನೇರ್‌ಗಳು ಐಷಾರಾಮಿ ಕಾರುಗಳ ಸಂಗ್ರಹವನ್ನೇ ಹೊಂದಿರುತ್ತಾರೆ. ಇನ್ನೂ ಕೆಲವು ಬಿಲಿಯನೇರ್‌ಗಳು ತಮ್ಮ ಹಳೆಯ ಕಾರುಗಳ ಬಳಕೆಯನ್ನೇ ಮುಂದುವರೆಸುತ್ತಾರೆ.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ 207 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನು ಹೊಂದಿರುವ ಜೆಫ್ ಬೆಜೋಸ್ ಈಗಲೂ ಸಹ ತಮ್ಮ ಹಳೆಯ ಕಾರ್ ಅನ್ನು ಹೊಂದಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

1994 ರಲ್ಲಿ ಮದುವೆಯಾದ ನಂತರ ಜೆಫ್ ಬೆಜೋಸ್ ತಮ್ಮ ಕೆಲಸವನ್ನು ತ್ಯಜಿಸಿ ಅಮೆಜಾನ್ ಕಂಪನಿಯನ್ನು ಆರಂಭಿಸಿದರು. ಆಗ ಅವರಿಗೆ 30 ವರ್ಷ. ಆ ವೇಳೆ ಅಮೆಜಾನ್‌ನ ಕಾರ್ಯಾಚರಣೆಗಳು ತುಂಬಾ ಸರಳವಾಗಿದ್ದವು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಆಗ ಅಮೆಜಾನ್ ಕಂಪನಿ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಆ ಸಮಯದಲ್ಲಿ ಕಂಪನಿಯಲ್ಲಿ ಕೇವಲ ಹತ್ತು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಜೆಫ್ ಬೆಜೋಸ್ 1987 ರ ಮಾದರಿಯ ಶೆವ್ರೊಲೆಟ್ ಬ್ಲೇಜರ್ ಕಾರಿನಲ್ಲಿ ಪುಸ್ತಕಗಳನ್ನು ಕೊಂಡೊಯುತ್ತಿದ್ದರು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಪುಸ್ತಕಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಿಸಲು ಇನ್ನೂ ಉತ್ತಮವಾದ ಕಾರು ಇದ್ದರೆ ಒಳ್ಳೆಯದು ಎಂದು ಆ ಸಮಯದಲ್ಲಿ ಬೆಜೋಸ್‌ರವರ ಆಸೆಯಾಗಿತ್ತು. ಮೂರು ವರ್ಷಗಳ ನಂತರ ಅಂದರೆ 1997 ರಲ್ಲಿ, ಜೆಫ್ ಬೆಜೋಸ್‌ರವರ ಆಸ್ತಿ ಮೌಲ್ಯ 12 ಬಿಲಿಯನ್ ಡಾಲರ್'ಗಳಾಗಿತ್ತು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಈ ಸಂದರ್ಭದಲ್ಲಿ ಜೆಫ್ ಬೆಜೋಸ್‌ರವರು 1987 ರ ಶೆವ್ರೊಲೆಟ್ ಬ್ಲೇಜರ್ ಕಾರಿನಿಂದ ಹೋಂಡಾ ಅಕಾರ್ಡ್‌ಗೆ ಬದಲಾದರು. 1999 ರಲ್ಲಿ ಅಮೆರಿಕಾದ ಜನಪ್ರಿಯ ಟಿವಿ ಕಾರ್ಯಕ್ರಮವಾದ ಬಾಬ್ ಸೈಮನ್ ನಿರೂಪಣೆಯ 60 ಮಿನಿಟ್ಸ್'ಗೆ ಹಾಜರಾಗಿದ್ದ ಜೆಫ್ ಬೆಜೋಸ್‌ರವರನ್ನು ಈ ಹೋಂಡಾ ಕಾರಿನ ವಿಶೇಷತೆ ಬಗ್ಗೆ ಪ್ರಶ್ನಿಸಲಾಗಿತ್ತು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಇದಕ್ಕೆ ಉತ್ತರಿಸಿದ್ದ ಜೆಫ್ ಬೆಜೋಸ್ ಇದು ಒಳ್ಳೆಯ ಕಾರು ಎಂದು ಹೇಳಿ ಮುಗುಳ್ನಗೆ ಬೀರಿದ್ದರು. ಆ ವೇಳೆ ಅವರ ಆಸ್ತಿಯ ಮೌಲ್ಯ ಶತಕೋಟಿ ಡಾಲರ್ ಮೌಲ್ಯದ್ದಾಗಿತ್ತು. ಕಾರು ಮಾತ್ರವಲ್ಲದೇ ಅಮೆಜಾನ್ ಪ್ರಧಾನ ಕಚೇರಿಯಿಂದ ಸಿಇಒ ಸೀಟಿನವರೆಗೆ ಎಲ್ಲಾ ವಸ್ತುಗಳು ತುಂಬಾ ಸರಳವಾಗಿದ್ದವು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಬಾಬ್ ಸೈಮನ್ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಜೆಫ್ ಬೆಜೋಸ್ ಜನರು ತಮಗೆ ಮುಖ್ಯವಾದ ವಿಷಯಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಬೇಕು. ಮುಖ್ಯವಲ್ಲದ ವಿಷಯಗಳಿಗೆ ಖರ್ಚು ಮಾಡಬಾರದು ಎಂದು ಹೇಳಿದ್ದರು.

ಸರಳ ಸಂಗತಿಗಳಿಗೆ ಆದ್ಯತೆ ನೀಡುವ ಅಮೆಜಾನ್ ಕಂಪನಿ ಸ್ಥಾಪಕ

ಅವರ ಈ ಮಾತು ವ್ಯವಹಾರವನ್ನು ಬೆಳೆಸುವುದು ಏಕೈಕ ಗುರಿಯಾಗಿರ ಬೇಕು ಎಂಬ ತತ್ವವನ್ನು ಆಧರಿಸಿದೆ. ಅಮೆಜಾನ್‌ ಕಂಪನಿಯ ಬೆಳವಣಿಗೆಗೆ ಹಲವು ಕಾರಣಗಳಿದ್ದರೂ ಜೆಫ್ ಬೆಜೋಸ್ ಅವರ ಈ ಮನಸ್ಥಿತಿಯು ಸಹ ಪ್ರಮುಖ ಕಾರಣವಾಗಿರಬಹುದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Amazon founder Jeff Bezos drove Honda Accord when he was billonaire know the reasons. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X