ಈಗಷ್ಟೇ ಜನಿಸಿದ ಮನೆ ಮಹಾಲಕ್ಷ್ಮಿಗಾಗಿ 3 ಕೋಟಿ ರೂ. ಕಾರು... ಬೆಂಬಿದ್ದ ಮಾಧ್ಯಮಗಳು!

ಶ್ರೀಮಂತರಿಗೆ ದುಬಾರಿ ವಸ್ತುಗಳಂದ್ರೆ ಅದೇನೋ ಮೋಜು, ಮನೆಯಲ್ಲಿ ನೂರಾರು ಕಾರುಗಳಿದ್ರೂ ಮಗು ಜನಿಸಿದ್ರೆ ಹೊಸ ಕಾರು ಖರೀದಿಸಿ ಅದ್ರಲ್ಲಿ ಕರೆತಂದಿದ್ದಾರೆ. ಅಷ್ಟಕ್ಕೂ ಈ ಕುಟುಂಬ ಯಾವುದು, ಮಗು ಯಾರದ್ದು ಎಂಬುದನ್ನು ಮುಂದೆ ಓದದೇ ಈಗಲೇ ಊಹಿಸಿ ನೋಡೋಣ.

ಇವರದ್ದು ದೇಶದ ಅಗ್ರ ಶ್ರೀಮಂತ ಕುಟುಂಬ, ಈಗ ನಿಮಗೆ ಗೊತ್ತಾಗಿರಬಹುದು ಅಲ್ಲವೇ? ಹೌದು ಇದು Ambani ಕುಟುಂಬ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ತಮ್ಮ ಎರಡನೇ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತರುತ್ತಿರುವಾಗ ಹೊಚ್ಚಹೊಸ ಮರ್ಸಿಡಿಸ್-ಮೇಬ್ಯಾಕ್ S580 ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿರುವ ಅಂಬಾನಿ ಕುಟುಂಬದ ಮನೆಯ ಹೊರಗೆ ಹೊಸ ಕಾರನ್ನು ಗುರುತಿಸಲಾಗಿದೆ.

Mercedes Maybach S580

ಹೊಸ Mercedes Maybach S580 ಕಾರಿನಲ್ಲಿ ಮಗು ನೀತಾ ಅಂಬಾನಿಯವರೊಂದಿಗೆ ಇರುವುದನ್ನು ಗುರ್ತಿಸಲಾಗಿದೆ. ಈ ಹೊಸ Mercedes-Maybach S580 ಕಾರು ಲಂಬೋರ್ಗಿನಿ ಉರುಸ್ ಜೊತೆಗೆ ಭಾರೀ ಭದ್ರತೆಯ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಮೂಲಕ ಅಂಬಾನಿ ಕುಟುಂಬಕ್ಕೆ ಮತ್ತೊಂದು ಮೇಬ್ಯಾಕ್ ಸೇರ್ಪಡೆಯಾಗಿದೆ.

ಅಂಬಾನಿ ಕುಟುಂಬವು 2021 ರಲ್ಲಿ ಎರಡನೇ ಮರ್ಸಿಡಿಸ್-ಮೇಬ್ಯಾಕ್ S560 ಕಾರನ್ನು ಖರೀದಿಸಿತ್ತು. ಹಳೆಯ ಮಾದರಿಯು ಸಂಪೂರ್ಣ ಬ್ಲಾಕ್ ಶೇಡ್‌ನಲ್ಲಿದ್ದರೇ ಈಗ ಖರೀದಿಸಿರುವ ಹೊಸ ಮೇಬ್ಯಾಕ್ ಸಿಲ್ವರ್ ಜೊತೆಗೆ ಡ್ಯುಯಲ್ ಶೇಡ್‌ನಲ್ಲಿ ಬಂದಿದೆ. ಮೇಬ್ಯಾಕ್ ಸಿರೀಸ್‌ನಲ್ಲಿ ಅಂಬಾನಿ ಕುಟುಂಬದ ಮೂರನೇ ಮೇಬ್ಯಾಕ್ ಸೆಡಾನ್ ಕಾರು ಇದಾಗಿದ್ದು, ಮಗುವಿನ ಜೊತೆಗೆ ಮನೆಗೆ ಬಂದ ಕಾರಣ ಈ ಕಾರು ಅವರಿಗೆ ವಿಶೇವಾಗಿದೆ.

Mercedes Maybach S580

ಹೊಸ Maybach S580 ಕಾರು 3 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಮೇಬ್ಯಾಕ್ ಮಾದರಿಗಳನ್ನು ಹಲವಾರು ಪ್ರಸಿದ್ಧ ವ್ಯಕ್ತಿಗಳು ಹೊಂದಿದ್ದರೂ, ಡ್ಯುಯಲ್-ಟೋನ್‌ನಲ್ಲಿ ಬರುವ ಈ ಮೇಬ್ಯಾಕ್ S580 ಅಪರೂಪದ ಕಾರಾಗಿದೆ. ಇದು ನಾಟಿಕ್ ಬ್ಲೂ ಮತ್ತು ಹೈಟೆಕ್ ಸಿಲ್ವರ್ ಶೇಡ್‌ನಲ್ಲಿ ಬರುತ್ತದೆ. ಖಂಡಿತ ಜನಸಂದಣಿಯಲ್ಲಿ ಎದ್ದು ಕಾಣುವ ಮಾದರಿಯಾಗಿದೆ.

ಏನಿದರ ವಿಶೇಷತೆಗಳು: ಸ್ಟ್ಯಾಂಡರ್ಡ್ S-ಕ್ಲಾಸ್‌ಗೆ ಹೋಲಿಸಿದರೆ ಮರ್ಸಿಡಿಸ್-ಮೇಬ್ಯಾಕ್ S-ಕ್ಲಾಸ್ ಗಮನಾರ್ಹವಾಗಿ ಹೆಚ್ಚಿನ ಮಟ್ಟದ ಐಷಾರಾಮಿಗಳನ್ನು ನೀಡುತ್ತದೆ. ಹಿಂದಿನ ಸೀಟ್‌ನಲ್ಲಿ ಅತ್ಯಂತ ಐಷಾರಾಮಿ ವೈಶಿಷ್ಟ್ಯಗಳು ಕಂಡುಬರುತ್ತವೆ. 19 ಮತ್ತು 44 ಡಿಗ್ರಿಗಳ ನಡುವೆ ಒರಗಿಕೊಳ್ಳಬಹುದಾದ ಹೊಂದಾಣಿಕೆಯ ಹಿಂಬದಿಯ ಆಸನಗಳನ್ನು ನೀಡುತ್ತದೆ, ಜೊತೆಗೆ ಹೆಚ್ಚುವರಿ ಸೌಕರ್ಯಕ್ಕಾಗಿ ಹಿಂತೆಗೆದುಕೊಳ್ಳುವ ಲೆಗ್ ರೆಸ್ಟ್ ಅನ್ನು ನೀಡುತ್ತದೆ.

Mercedes Maybach S580

ಹೀಟೆಡ್ ಆರ್ಮ್‌ರೆಸ್ಟ್‌ಗಳು, ಮಲ್ಟಿ ಕಾಂಟೂರ್ ಸೀಟ್ ಮಸಾಜರ್, ಸೀಟ್ ವೆಂಟಿಲೇಶನ್ ಸೇರಿದಂತೆ ಇನ್ನೂ ಹೆಚ್ಚು ವಿಶೇಷವಾದ ಅನುಭವ ಬಯಸುವವರಿಗೆ ವುಡೆನ್ ಟ್ರಿಮ್‌ಗಳು, ಪೂರ್ಣ ಉದ್ದದ ಸೆಂಟರ್ ಕನ್ಸೋಲ್, ನಿಯೋಜಿಸಬಹುದಾದ ಟ್ರೇಗಳು, ಶಾಂಪೇನ್ ಕೂಲರ್ ಮತ್ತು ಕಸ್ಟಮ್ ಸಾಲಿಡ್ ಮೆಟಲ್ ಫ್ಲೂಟ್‌ಗಳನ್ನು ಸೇರಿಸುವ ಕಾರ್ಯನಿರ್ವಾಹಕ ಆಸನ ಪ್ಯಾಕೇಜ್ ಇದರಲ್ಲಿ ಲಭ್ಯವಿದೆ.

ಹೊಸ ಮರ್ಸಿಡಿಸ್-ಮೇಬ್ಯಾಕ್ S580 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ EQ ಬೂಸ್ಟ್‌ನೊಂದಿಗೆ 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದೆ. ಇದು 496 Bhp ಪವರ್ ಉತ್ಪಾದನೆ ಮತ್ತು 700 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರು 4 ವೀಲ್ ಡ್ರೈವ್ ಸಿಸ್ಟಮ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ ಹೊಂದಿದೆ.

Article Published On: Monday, June 5, 2023, 13:12 [IST]
English summary
Ambani family buys new mercedes maybach s580
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+