ಬರೋಬ್ಬರಿ 9 ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಭಾರತದ ಏಕೈಕ ಕುಟುಂಬ
ಅಂಬಾನಿ ಕುಟುಂಬವು ಭಾರತದಲ್ಲಿ ಅತಿ ಹೆಚ್ಚು ಕಾರುಗಳನ್ನು ಹೊಂದಿರುವ ಏಕೈಕ ಕುಟುಂಬವಾಗಿದೆ. ತಮ್ಮ ಗ್ಯಾರೇಜ್‌ನಲ್ಲಿ ವ್ಯಾಪಕ ಶ್ರೇಣಿಯ ದುಬಾರಿ ಮತ್ತು ವಿಲಕ್ಷಣ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿಯಿರುವ ಕಾರುಗಳ ನಿಖರ ಸಂಖ್ಯೆಯ ಬಗ್ಗೆ ಪ್ರಸ್ತುತ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಅವರ ಬಳಿಯಿರುವ ಕಾರುಗಳ ಬಗ್ಗೆ ಈಗಾಗಲೇ ಹಲವು ಬಾರಿ ಸುದ್ದಿಯಾಗಿದೆ. ಇತ್ತೀಚೆಗೆ ಅಂಬಾನಿ ಕುಟುಂಬ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಲ್ಲಿನನ್ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಇದು ಅವರಿಗೆ 9ನೇ ಕಲ್ಲಿನನ್ ಎಸ್‌ಯುವಿಯಾಗಿದೆ. ಈ ಕಾರು ಇತ್ತೀಚೆಗೆ ಕಾಣಿಸಿಕೊಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮುಂಬೈನ ರಸ್ತೆಗಳಲ್ಲಿ ಹಲವಾರು ಸೂಪರ್ ಕಾರುಗಳು ಮತ್ತು ಸ್ಪೋರ್ಟ್ಸ್ ಕಾರುಗಳೊಂದಿಗೆ ಕಾಣಿಸಿಕೊಂಡಿದ್ದ ಅಂಬಾನಿ ಕುಟುಂಬ, ಇತ್ತೀಚೆಗೆ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಲ್ಲಿನನ್‌ನಲ್ಲಿ ಸಂಚರಿಸುವಾಗ ಕಾಣಿಸಿಕೊಂಡಿದೆ. ಮಹೀಂದ್ರಾ ಸ್ಕಾರ್ಪಿಯೋ, ಟೊಯೊಟಾ ಫಾರ್ಚೂನರ್ ಮತ್ತು ಮರ್ಸಿಡಿಸ್ ಜಿ 63 ಎಎಂಜಿಯಂತಹ ಕಾರುಗಳು ಸೇರಿದಂತೆ ಭದ್ರತಾ ವಾಹನಗಳ ಬೆಂಗಾವಲಿನೊಂದಿಗೆ ಕಾಣಿಸಿಕೊಂಡಿದೆ.

ಈ ಐಷಾರಾಮಿ ಎಸ್‌ಯುವಿಯನ್ನು ಬಹಳ ಅಪರೂಪದ ಬಣ್ಣದಲ್ಲಿ ನಿರ್ಮಿಸಲಾಗಿದೆ. ಇದು ಪೆಬಲ್ ಪ್ಯಾರಾಡಿಸೊ ಎಂಬ ಬಣ್ಣದಲ್ಲಿದ್ದು (ನೀಲಿ ಬಣ್ಣದ ತಿಳಿ ಛಾಯೆ), ಈ ಅಪರೂಪದ ಬಣ್ಣಕ್ಕಾಗಿ ಅಂಬಾನಿ ಸಾಕಷ್ಟು ವೆಚ್ಚಿಸಿರುವುದಾಗಿ ತಿಳಿದುಬಂದಿದೆ. ಇದೇ ವೀಡಿಯೊದಲ್ಲಿ ಮತ್ತೊಂದು ರೋಲ್ಸ್ ರಾಯ್ಸ್ ಕಲ್ಲಿನನ್ ಎಸ್‌ಯುವಿ ಕಾಣಿಸಿಕೊಂಡಿದ್ದು, ಇದು ರೆಗ್ಯುಲರ್ ಕಲ್ಲಿನಾನ್ ಆಗಿದೆ, ಇದರ ಬಣ್ಣಕ್ಕೆ 1 ಕೋಟಿ ರೂ. ವೆಚ್ಚಿಸಲಾಗಿದೆ.
ಅಂಬಾನಿ ಗ್ಯಾರೇಜ್‌ನಲ್ಲಿರುವ 9 ಕಲ್ಲಿನನ್ ಎಸ್‌ಯುವಿಗಳಲ್ಲಿ ಎರಡನ್ನು ಈ ವೀಡಿಯೊದಲ್ಲಿ ಕಾಣಬಹುದು. ವೀಡಿಯೊವನ್ನು ರಾತ್ರಿಯಲ್ಲಿ ರೆಕಾರ್ಡ್ ಮಾಡಿದ್ದರಿಂದ, ಕಾರಿನ ಬಣ್ಣ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಅಂಬಾನಿ ಒಡೆತನದ ಕೆಲವು ಕಲ್ಲಿನನ್‌ಗಳು ಇತರ ದೇಶಗಳಲ್ಲಿವೆ. ಅಂಬಾನಿ ಕುಟುಂಬ ಶಾಪಿಂಗ್ ಮಾಡಲು ದುಬೈಗೆ ಹೋದಾಗ ಭದ್ರತಾ ವಾಹನಗಳೊಂದಿಗೆ ಈ ಹಿಂದೆ ಕಲ್ಲಿನನ್ ಕಾಣಿಸಿಕೊಂಡಿತ್ತು.
ಭಾರತದಲ್ಲಿ ಅಥವಾ ಬಹುಶಃ ಜಗತ್ತಿನಲ್ಲಿ ಇಷ್ಟು ಕಲ್ಲಿನನ್ ಕಾರುಗಳನ್ನು ಹೊಂದಿರುವ ಏಕೈಕ ಕುಟುಂಬ ಅಂಬಾನಿಯದ್ದಾಗಿದೆ. ರೋಲ್ಸ್ ರಾಯ್ಸ್ ಐಷಾರಾಮಿ ಕಾರು ಕಂಪನಿಯು ವಿವಿಧ ಗ್ರಾಹಕೀಕರಣ ಆಯ್ಕೆಗಳನ್ನು ನೀಡುವುದರಿಂದ ಅಂಬಾನಿಯ ಕಾರು ಸಂಗ್ರಹದಲ್ಲಿರುವ ಪ್ರತಿಯೊಂದು ರೋಲ್ಸ್ ರಾಯ್ಸ್ ಕಲ್ಲಿನನ್ ಇತರ ಮಾಲೀಕರಿಗಿಂತ ಭಿನ್ನವಾಗಿದೆ.
ಸ್ಟ್ಯಾಂಡರ್ಡ್ ಕಲ್ಲಿನಾನ್‌ಗೆ ಹೋಲಿಸಿದರೆ, ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಹೊರಭಾಗದಲ್ಲಿ ಗ್ಲೋಸ್ ಬ್ಲ್ಯಾಕ್ ಹೈಲೈಟ್‌ಗಳಂತಹ ಕಾಸ್ಮೆಟಿಕ್ ನವೀಕರಣಗಳನ್ನು ಪಡೆಯುತ್ತದೆ. ಇದರಲ್ಲಿ ಅಪ್ರತಿಮ "ಸ್ಪಿರಿಟ್ ಆಫ್ ಎಕ್ಸ್‌ಟಸಿ" ಲಾಂಛನವನ್ನು ಹೊಂದಿದೆ. ಐಷಾರಾಮಿ ಮತ್ತು ಕಸ್ಟಮೈಸೇಶನ್ ಆಯ್ಕೆಗಳು, ಎಸ್‌ಯುವಿ ಸ್ಟೈಲಿಂಗ್‌ನಿಂದಾಗಿ ಅಂಬಾನಿ ಕುಟುಂಬವು 10 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯ ಈ ಐಷಾರಾಮಿ ಎಸ್‌ಯುವಿಗೆ ಆಕರ್ಷಿತರಾಗಿರಬಹುದು.
ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ 6.75-ಲೀಟರ್ ಟ್ವಿನ್-ಟರ್ಬೊ ವಿ-12 ಎಂಜಿನ್ ಹೊಂದಿದೆ. ಇದು 600 ಬಿಹೆಚ್‌ಪಿ ಪವರ್ ಮತ್ತು 900 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಾಮಾನ್ಯ ಕಲ್ಲಿನಾನ್‌ಗೆ ಹೋಲಿಸಿದರೆ, ಇದು 29 ಬಿಹೆಚ್‌ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಹೆಚ್ಚಾಗಿದೆ. ಇದರ ಎಂಜಿನ್ ಅನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








