ಆ್ಯಂಬುಲನ್ಸ್ ಡ್ರೈವರ್‌ಗೆ ಸಲಾಂ... ಕೇವಲ 2 ಗಂಟೆಗಳಲ್ಲಿ 135 ಕಿ.ಮೀ ರಣಭೀಕರ ಡ್ರೈವಿಂಗ್

ಕೇರಳದಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಯುವತಿಯ ಜೀವ ಉಳಿಸಲು ಇಡೀ ಊರೇ ಒಂದಾಗಿದ್ದು, ಪೊಲೀಸ್‌ ಅಧಿಕಾರಿಗಳು ಕೂಡ ಸಹಕರಿಸಿರುವುದು ಹಲವರ ಪ್ರಶಂಸೆಗೆ ಪಾತ್ರವಾಗಿದೆ. ಅದರಲ್ಲೂ ಆ್ಯಂಬುಲನ್ಸ್ ಡ್ರೈವರ್‌ ಚಾಲನಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನದಿಂದ ವರದಿಯಾಗಿದೆ. ಮೂಲಗಳ ಪ್ರಕಾರ, 17 ವರ್ಷದ ಬಾಲಕಿಯಾದ ಆನ್ ಮರಿಯಾ ಚರ್ಚ್‌ನಲ್ಲಿ ತನ್ನ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದಾಳೆ. ಈ ವೇಳೆ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದು, ವೈದ್ಯರು ಆಕೆಗೆ ತೀವ್ರ ಹೃದಯಾಘಾತವಾಗಿದೆ, ಕೂಡಲೇ ಕೊಚ್ಚಿಗೆ ಕರೆದೊಯ್ಯಬೇಕು ಎಂದು ಹೇಳಿದ್ದರು.

Ambulance driver who saved girl life

ಆದ್ರೆ ಇಲ್ಲಿ ಎಲ್ಲರೂ ಬಾಲಕಿಯ ಜೀವ ಉಳಿಸಿಕೊಳ್ಳುವುದು ತೀರಾ ಕಷ್ಟ ಎಂದು ಭಾವಿಸಿದ್ದರು. ಏಕೆಂದರೆ ಕೊಚ್ಚಿಯು ಕಟ್ಟಪ್ಪನದಿಂದ ಸುಮಾರು 135 ಕಿ.ಮೀ ದೂರವಿದೆ. ಬಾಲಕಿಯನ್ನು ಉಳಿಸಿಕೊಳ್ಳಲು ಅವರಿಗೆ ಹೆಚ್ಚಿನ ಸಮಯ ಕೂಡ ಇರಲಿಲ್ಲ. ಆಗಲೇ ಸ್ಥಳೀಯ ಪೊಲೀಸರು ಕೂಡ ಬಾಲಕಿಯ ಕುಂಟುಂಬಕ್ಕೆ ಧೈರ್ಯ ಹೇಳಿ ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಇಡುಕ್ಕಿ ಎಸ್ಪಿ ಕೂಡ ಮಧ್ಯಪ್ರವೇಶಿಸಿ ಆಂಬ್ಯುಲೆನ್ಸ್‌ಗೆ ಪೈಲಟ್ ವಾಹನ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಎಲ್ಲರೂ ಕೂಡ ಆಂಬುಲನ್ಸ್‌ಗೆ ಸಹಕರಿಸಿದ್ದಾರೆ. ರಸ್ತೆಯನ್ನು ತೆರವುಗೊಳಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಎಲ್ಲಾ ವರ್ಗದ ಜನರು ಮುಂದೆ ಬಂದಿದ್ದರು. ಇಷ್ಟೆಲ್ಲಾ ಆದನಂತರ ಸಮಯಕ್ಕೆ ಕೊಚ್ಚಿ ತಲುಪಿ ಬಾಲಕಿಯ ಜೀವ ಉಳಿಸುವುದು ಆಂಬುಲನ್ಸ್ ಡ್ರೈವರ್‌ ಕೈಯಲ್ಲಿದೆ.

Ambulance driver who saved girl life

ವಿಷಯದ ಗಂಭೀರತೆಯನ್ನು ಅರಿತ ಡ್ರೈವರ್ ರಣಭೀಕರವಾಗಿ ಚಾಲನೆ ಮಾಡಿದ್ದಾರೆ. ಕೇವಲ 2.6 ಗಂಟೆಗಳಲ್ಲಿ ಕಟ್ಟಪ್ಪನ- ಕೊಚ್ಚಿ ಮಾರ್ಗದಲ್ಲಿ ಆಂಬ್ಯುಲೆನ್ಸ್ ಜೆಟ್‌ ವೇಗದಲ್ಲಿ ಪ್ರಯಾಣಿಸಿದೆ. ಈ ಮಾರ್ಗದಲ್ಲಿನ ಸ್ಥಳೀಯರೂ ಕೂಡ ಆಂಬುಲನ್ಸ್‌ಗೆ ಸಹಾಯ ಮಾಡಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣವು 4 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದ್ರೆ ಎಲ್ಲರ ಸಹಕಾರದಿಂದ ಕೇವಲ ಎರಡು ಗಂಟೆಗಳಲ್ಲಿ ತಲುಪಿದ್ದಾರೆ.

ಫೇಸ್‌ಬುಕ್‌ನಲ್ಲಿ ಸಹಾಯ ಕೋರಲಾಗಿತ್ತು: ಇಡುಕ್ಕಿ ಜಿಲ್ಲೆಯವರಾದ ರಾಜ್ಯ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ರಸ್ತೆಯನ್ನು ತೆರವುಗೊಳಿಸಲು ಜನರ ಸಹಾಯವನ್ನು ಕೋರಿದ್ದಾರೆ. ಇಡುಕ್ಕಿ ಎಸ್ಪಿ ಕೂಡ ಪೈಲಟ್ ವಾಹನ ವ್ಯವಸ್ಥೆ ಮಾಡಿದ್ದ ಕಾರಣ ರಸ್ತೆಯನ್ನು ತೆರವುಗೊಳಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಯಾವುದೇ ಅಡ್ಡಿ ಎದುರಾಗಲಿಲ್ಲ.

ಶಾಲೆಯ ಸಮಯದ ಕಾರಣದಿಂದ ರಸ್ತೆಯಲ್ಲಿ ವಿಪರೀತ ನೂಕುನುಗ್ಗಲು ಇದ್ದರೂ, ಆಂಬ್ಯುಲೆನ್ಸ್ 2.6 ಗಂಟೆಗಳಲ್ಲಿ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ಯಶಸ್ವಿಯಾಗಿ ತಲುಪಿತು. ಸಚಿವ ರೋಶಿ ಆಗಸ್ಟಿನ್, ಸಾರ್ವಜನಿಕರು ಮತ್ತು ಪೊಲೀಸರಿಗೆ ಮುಖ್ಯವಾಗಿ ಆಂಬುಲನ್ಸ್ ಡ್ರೈವರ್‌ಗೆ ಬಾಲಕಿಯ ಕುಟುಂಬ ಕೃತಜ್ಞತೆ ಸಲ್ಲಿಸಿದರು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Friday, June 2, 2023, 12:09 [IST]
English summary
Ambulance driver traveled 135 km 2 hours saved girl life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+