ಸಿನಿಮಾ ಪ್ರಚಾರಕ್ಕಾಗಿ ಸಾಮಾನ್ಯ ಮಹೀಂದ್ರಾ ಕಾರಿನಲ್ಲಿ ಬಂದ ಜನಪ್ರಿಯ ನಟಿ: ಫ್ಯಾನ್ಸ್ ಫುಲ್ ಫಿದಾ

ಬಾಲಿವುಡ್ ನಟ ಸನ್ನಿ ಡಿಯೋಲ್ 'ಗದರ್ 2'. ಈ ಮೂರು ಚಿತ್ರಗಳು ಇದೀಗ ಬಾಕ್ಸ್​​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿವೆ. ಈ ನಡುವೆ ಚಿತ್ರದ ನಟಿ ಅಮೀಶಾ ಪಟೇಲ್ (Ameesha Patel), ಅವರು ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಐಕಾನಿಕ್ ಗೈಟಿ ಗ್ಯಾಲಕ್ಸಿ ಚಿತ್ರಮಂದಿರಕ್ಕೆ ಹೊಸದಾಗಿ ಖರೀದಿಸಿದ ಮಹೀಂದ್ರಾ XUV700 ಎಸ್‍ಯುವಿಯಲ್ಲಿ ಆಗಮಿಸಿದರು.

ಗದರ್: ಏಕ್ ಪ್ರೇಮ್ ಕಥಾ ಚಿತ್ರದ ಮುಂದುವರಿದ ಭಾಗವಾದ "ಗದರ್ 2" ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ನಟಿ ಅಮೀಶಾ ಹೊಸದಾಗಿ ಖರೀದಿಸಿದ ಮಹೀಂದ್ರಾ XUV700 ಎಸ್‍ಯುವಿಯ ಸನ್‌ರೂಫ್‌ನಿಂದ ಹೊರಗೆ ನಿಂತು, ತನ್ನ ಹೊಸ ಚಲನಚಿತ್ರವನ್ನು ವೀಕ್ಷಿಸಲು ನೆರೆದಿದ್ದ ಜನರತ್ತ ಕೈ ಬೀಸಿದಳು. ಗದರ್ 2 ಚಿತ್ರದ ಪ್ರಮುಖ ನಟಿ ಅಮೀಶಾ ಪಟೇಲ್ ಅವರ ವೀಡಿಯೊವನ್ನು ಕಾರ್ಸ್ ಫಾರ್ ಯೂ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

Ameesha Patel’

ಮಹೀಂದ್ರಾ XUV700 (Mahindra XUV70) ಎಸ್‍ಯುವಿಯು ಆಗಮನವನ್ನು ಪ್ರದರ್ಶಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ನ ಸಿಲ್ವರ್ ಶೇಡ್ ಬಣ್ಣದ ಮಹೀಂದ್ರಾ XUV700 ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಟಿ ಮಹೀಂದ್ರಾ XUV700 ಎಸ್‍ಯುವಿಯ AX7 L ರೂಪಾಂತರವನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಇದು ಈ ಜನಪ್ರಿಯ ಎಸ್‍ಯುವಿಯ ಟಾಪ್-ಸ್ಪೆಕ್ ಮಾಡೆಲ್ ಆಗಿದ.

ವೀಡಿಯೊದಲ್ಲಿ, ಅಮೀಶಾ ಪಟೇಲ್ ಮಹೀಂದ್ರಾ XUV700 ಎಸ್‍ಯುವಿಯ ಪನರೊಮಿಕ್ ಸನ್‌ರೂಫ್ ಹೊರಗೆ ನಿಂತು ಅಲ್ಲಿ ನೆರದಿದ್ದ ಅಭಿಮಾನಿಗಳಿಗೆ ಕೈಬಿಸಿದ್ದಾರೆ. ವೀಡಿಯೊದಲ್ಲಿ ಸಂಕ್ಷಿಪ್ತ ಕ್ಷಣದಲ್ಲಿ, ನಟಿ ದಿಶಾ ಪಟಾನಿ ಅವರು ತಮ್ಮ ಸ್ಯಾಟಿನ್ ಬ್ಲ್ಯಾಕ್ ಬಣ್ಣದ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್‌ನಲ್ಲಿ ಮತ್ತೊಂದು ಸ್ಥಳದಿಂದ ಹೊರಡುತ್ತಿರುವುದನ್ನು ಕಾಣಬಹುದು. ಇನ್ನು ವೀಡಿಯೊದ ಕೊನೆಯಲ್ಲಿ, ಅಮೀಶಾ ಪಟೇಲ್ ಅನ್ನು ಮತ್ತೊಂದು ವಾಹನಕ್ಕೆ ಕರೆದೊಯ್ಯಲಾಯಿತು.

Ameesha Patel’

ಅದು ಬಿಳಿ ಟೊಯೊಟಾ ಫಾರ್ಚುನರ್, ಅಲ್ಲಿ ನಟಿ ತನ್ನ ಹೊಸ ಚಿತ್ರ ಯಶಸ್ಸಿಗಾಗಿ ದೇಶದ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಕಾರಿಗೆ ಸಂಬಂಧಿಸಿದಂತೆ, ಹಿಂದೆ ಹೇಳಿದಂತೆ, ಅಮೀಶಾ ಪಟೇಲ್ ಹೊಚ್ಚಹೊಸ ಈ ಮಹೀಂದ್ರಾ XUV700 ಎಸ್‍ಯುವಿಯನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಮಹೀಂದ್ರಾ XUV700 ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಎಸ್‍ಯುವಿಗಳಲ್ಲಿ ಒಂದಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಪ್ರಮುಖವಾಗಿ ಡೀಸೆಲ್ ಎಂಜಿನ್ ಚಾಲಿತ ರೂಪಾಂತರ ಜಿಪ್, ಜ್ಯಾಪ್, ಜೂಮ್ ಮತ್ತು ಕಸ್ಟಮ್ ಎಂಬ ಡ್ರೈವ್ ಮೋಡ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ XUV700 ಅತ್ಯುತ್ತಮ ಎಸ್‌ಯುವಿ ಎಂದು ಖ್ಯಾತಿಗಳಿಸಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.

ಮಹೀಂದ್ರಾ XUV700 ಎಸ್‍ಯುವಿ 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮಹೀಂದ್ರಾ XUV700 ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಮುಖವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಅತ್ಯಾಧುನಿಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ. ಮಹೀಂದ್ರಾ XUV 700 ಎಸ್‌ಯುವಿಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ನೇರ ಪ್ರತಿಸ್ಪರ್ಧಿಯಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಪೂರೈಸಲು ಕಂಪನಿಯು ತಯಾರಿ ನಡೆಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, August 17, 2023, 8:30 [IST]
English summary
Ameesha patel arrives in new mahindra xuv700 for gadar2 promos details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+