ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ನಿಮಗೆ ಕಾರುಗಳ ಬಗ್ಗೆ ಹುಚ್ಚು ಇದ್ದರೆ, ಬೇರೆಯರ ಜೊತೆ ಮಾತನಾಡುವಾಗ ಯಾವ ಕಾರು ಹೆಚ್ಚು ಯಾವುದು ಕಡಿಮೆ ಎಂಬ ವಾದಗಳು ನಡೆಯುವುದು ಸಹಜ. ಇಬ್ಬರು ಕಾರು ಪ್ರೇಮಿಗಳು ಒಂದೇ ಕಡೆ ಇದ್ದರೆ, ಹೆಚ್ಚು ವಾದಗಳು ಮತ್ತು ಬಿಸಿಬಿಸಿ ಚರ್ಚೆಗಳು ನಡೆಯುವುದು ಸಾಮಾನ್ಯ.

ಆದರೆ ಈ ರೀತಿಯ ಬಿಸಿ ಬಿಸಿ ಚರ್ಚೆಯಿಂದ ಮೂರು ಜನರ ಮೇಲೆ ಗುಂಡು ಹಾರಿಸುವ ಸಂದರ್ಭ ಬರಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಭಾರತದಲ್ಲಿ ಈ ರೀತಿಯಾಗಿ ಚರ್ಚೆಯಾದರೆ ಮಾರುತಿ ಸುಜುಕಿ ಹೆಚ್ಚೋ, ಹ್ಯುಂಡೈ ಮೋಟಾರ್ಸ್ ಹೆಚ್ಚೋ ಎಂಬುವ ಬಗ್ಗೆ ಚರ್ಚೆಗಳಾಗಬಹುದು. ಇದೇ ರೀತಿಯಾದ ಬಿಸಿ ಬಿಸಿ ಚರ್ಚೆ ಅಮೆರಿಕಾದ ವರ್ಜಿನಿಯಾದಲ್ಲಿರುವ ಬೆಡ್‍‍‍ಫೋರ್ಡ್ ನಗರದಲ್ಲಿ ನಡೆದಿದೆ.

ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ಮಾರ್ಕ್ ಎಡ್ವಿನ್ ಟರ್ನರ್ ಎಂಬ 56 ವರ್ಷದ ವ್ಯಕ್ತಿ ತನ್ನ ಗರ್ಲ್‍‍‍ಫ್ರೆಂಡ್, ಆಕೆಯ ಮಗ ಮತ್ತು ಅಕೆಯ ಮಗನ ಗರ್ಲ್‍‍‍ಫ್ರೆಂಡ್ ಸೇರಿದಂತೆ ಮೂವರ ಮೇಲೆ ಗುಂಡು ಹಾರಿಸಿದ್ದಾನೆ. ಈ ಮೂವರ ಹೆಸರು ತಿಳಿದು ಬಂದಿಲ್ಲ.

ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ಇಬ್ಬರೂ ಜೋಡಿಗಳೂ ಏಪ್ರಿಲ್ 22 ರಂದು ಊಟ ಮಾಡುತ್ತಿದ್ದಾಗ ಟರ್ನರ್ ಮತ್ತು ಆತನ ಗರ್ಲ್‍‍‍ಫ್ರೆಂಡ್ ಮಗ ಇಬ್ಬರೂ ಫೋರ್ಡ್ ಮತ್ತು ಶೆವ್ರೊಲೆಟ್ ಎರಡರಲ್ಲಿ ಯಾವುದು ಬೆಸ್ಟ್ ಎಂದು ಚರ್ಚೆ ಶುರುಮಾಡಿದ್ದಾರೆ.

ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ಈ ಚರ್ಚೆ ತಾರಕಕ್ಕೇರಿ ಟರ್ನರ್ ಚಾಕುವಿನಿಂದ ಜಗಳ ಬಿಡಿಸಲು ಬಂದ ತನ್ನ ಗರ್ಲ್‍‍ಫ್ರೆಂಡ್‍‍ಗೆ ಇರಿದಿದ್ದಾನೆ. ಮನೆಯೊಳಗೆ ಹೋಗಿ ಗನ್ ತಂದು ತನ್ನ ಮಗನನ್ನು ಸಮರ್ಥಿಸಿಕೊಂಡ ಗರ್ಲ್‍‍ಫ್ರೆಂಡ್ ಮೇಲೆ 5 ಬಾರಿ ಗುಂಡು ಹಾರಿಸಿದ್ದಾನೆ. ಎಲ್ಲಾ ಐದು ಗುಂಡುಗಳೂ ಆಕೆಯ ಕಾಲಿಗೆ ತಗುಲಿವೆ. ಆಕೆಯ ಮಗನ ಮೇಲೆ ಹಾರಿಸಿದ ಗುಂಡು ಆತನ ತೋಳಿಗೆ ಮತ್ತು ಮಗನ ಗರ್ಲ್‍‍‍ಫ್ರೆಂಡ್ ಮೇಲೆ ಹಾರಿಸಿದ ಗುಂಡು ಬೌನ್ಸ್ ಆಗಿ ಆಕೆಗೆ ತಾಗಿದೆ. ಗಾಯಾಳುಗಳನ್ನು ಕಂಡ ನೆರೆಹೊರೆಯವರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ಸ್ಥಳಕ್ಕೆ ಧಾವಿಸಿದ ಪೊಲೀಸರು ಶರಣಾಗುವಂತೆ ಟರ್ನರ್‍‍ಗೆ ಸೂಚಿಸಿದ್ದಾರೆ. ಆದರೆ ಟರ್ನರ್ ಶರಣಾಗಲು ನಿರಾಕರಿಸಿದ್ದಾನೆ. ಹಲವು ಗಂಟೆಗಳ ಹೈಡ್ರಾಮಾದ ಬಳಿಕ ಟರ್ನರ್‍‍‍ನನ್ನು ಬಂಧಿಸಿದ ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಟರ್ನರ್ ಮೇಲೆ ಗಂಭೀರ ಸ್ವರೂಪದ ಗಾಯ ಮಾಡಿರುವ, ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿರುವ ಹಾಗೂ ಅಕ್ರಮವಾಗಿ ಗನ್‍ ಹೊಂದಿರುವ ಸಂಬಂಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

MOST READ: ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ಯಾವುದು ಬೆಸ್ಟ್ ಕಾರು ಎಂಬುದರ ಬಗ್ಗೆ ಚರ್ಚೆ ನಡೆಯುವುದು ಒಳ್ಳೆಯದೆ. ಆದರೆ ಚರ್ಚೆ ವಿಕೋಪಕ್ಕೆ ಹೋಗುತ್ತಿದ್ದಂತೆ ಯಾರಾದರೊಬ್ಬರು ಚರ್ಚೆಯಿಂದ ಹಿಂದೆ ಸರಿಯುವುದು ಉತ್ತಮ. ಇಲ್ಲದಿದ್ದರೆ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ.

More from DriveSpark

Article Published On: Wednesday, May 8, 2019, 11:13 [IST]
English summary
Chevrolet Vs. Ford Argument Ends With American Man Shooting Three People Including Girlfriend - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+