ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಫೋರ್ಡ್ ಇಂಡಿಯಾ ಶೀಘ್ರದಲ್ಲಿ ಫಿಗೋ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ವಾಹನದ ಸ್ಪೋರ್ಟಿ ಲುಕ್ ಆವೃತ್ತಿಯನ್ನು ಟಿಟಾನಿಯಂ ಬ್ಲೂ ಟ್ರಿಮ್ ಮಾದರಿಯಲ್ಲಿ ಬಿಡುಗಡೆ ಮಾಡಲಿದೆ. ಹೊಸ ಕಾರಿನ ಚಿತ್ರಗಳನ್ನು ಫೋರ್ಡ್ ಶೋರೂಂನಿಂದ ರಹಸ್ಯವಾಗಿ ತೆಗೆಯಲಾಗಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಲುಕ್ ಮತ್ತು ಸ್ಪೆಸಿಫಿಕೇಶನ್ ಗಳು ಆಸ್ಪೈರ್ ಬ್ಲೂನ ಹ್ಯಾಚ್ ಬ್ಯಾಕ್ ಆವೃತ್ತಿಯಂತೆ ಇರಲಿವೆ. ಫೋರ್ಡ್ ಕಂಪನಿಯು ಆಸ್ಪೈರ್ ಬ್ಲೂನಲ್ಲಿ ಇರುವಂತಹ ಎಂಜಿನ್ ಮತ್ತು ಗೇರ್ ಬಾಕ್ಸ್ ಗಳನ್ನು ನೀಡುವ ಸಾಧ್ಯತೆಗಳಿವೆ. ಹೊಸ ಕಾರಿನ ಎಂಜಿನ್, 1.5 ಲೀಟರಿನ 3 ಸಿಲಿಂಡರ್ ಮೋಟಾರ್ ಹೊಂದಿರಲಿದ್ದು, 121 ಬಿಹೆಚ್‍‍‍ಪಿ ಹಾಗೂ 150ಎನ್‍‍ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡಿನ ಆಟೋಮ್ಯಾಟಿಕ್‍‍‍ಗಳನ್ನು ನೀಡಲಾಗುವುದಿಲ್ಲ. ಎಂಜಿನ್ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ.

Photo Courtesy: Teambhp

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

1.2 ಲೀಟರಿನ 3 ಸಿಲಿಂಡರ್ ಡ್ರಾಗನ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು 95 ಬಿಹೆಚ್‍‍‍ಪಿ, 120 ಎನ್‍‍ಎಂ ಟಾರ್ಕ್ ಉತ್ಪಾದಿಸಲಿದೆ. 1.5 ಲೀಟರಿನ 4 ಸಿಲಿಂಡರಿನ ಟಿ‍‍‍ಡಿ‍‍‍ಸಿ‍ಐ ಟರ್ಬೊಚಾರ್ಜ್ ಡೀಸೆಲ್ ಎಂಜಿನ್ ಹೊಂದಿದ್ದು 98.6 ಬಿಹೆಚ್‍‍ಪಿ ಮತ್ತು 215 ಎನ್‍‍ಎಂ ಟಾರ್ಕ್ ಉತ್ಪಾದಿಸಲಿದೆ.

Photo Courtesy: Teambhp

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಎರಡೂ ಎಂಜಿನ್‍‍‍ಗಳು 5 ಸ್ಪೀಡಿನ ಮ್ಯಾನುವಲ್ ಗೇರ್‍‍‍‍ಬಾಕ್ಸ್ ಗಳನ್ನು ಹೊಂದಿರಲಿವೆ. ಬೆಲೆಯ ಬಗ್ಗೆ ಹೇಳುವುದಾದರೆ ಫಿಗೋ ಆಸ್ಪೈರ್‍‍‍ನ ಬೆಲೆಯು ಟಿಟಾನಿಯಂ ಪ್ಲಸ್ ಆವೃತ್ತಿಗಿಂತ ಕಡಿಮೆಯಿರಲಿದೆ. ಈ ಮಾದರಿಯು ಫೋರ್ಡ್ ಆಸ್ಪೈರ್ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿವೆ.

Photo Courtesy: Teambhp

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಹೊಸ ಕಾರಿನಲ್ಲಿರುವ ಲುಕ್, ಹೊಸ ಇಂಟಿರಿಯರ್ ಮತ್ತು ಹೊಸದಾಗಿ ಅಳವಡಿಸಲಾಗಿರುವ ಫೀಚರ್‍‍‍ಗಳಿಂದಾಗಿ ಹೆಚ್ಚು ಮಾರಾಟವನ್ನು ನಿರೀಕ್ಷಿಸಲಾಗುತ್ತಿದೆ. ಫಿಗೋ ಆಸ್ಪೈರ್ ಟಿಟಾನಿಯಂ ಬ್ಲೂನ ಎಕ್ಸ್ ಟಿರಿಯರ್‍‍ನಲ್ಲೂ ಹಲವಾರು ಬದಲಾವಣೆಗಳಾಗಲಿವೆ. ಅವುಗಳೆಂದರೆ ಮುಂಭಾಗದ ಬಂಪರ್ ಮೇಲೆ ಬ್ಲೂ ಚಿಹ್ನೆ, ಪ್ರೊಫೈಲ್ ಮತ್ತು ಬೂಟ್ ಲಿಡ್‍‍ಗಳ ಮೇಲೆ ಬ್ಲೂ ಮತ್ತು ಬ್ಲಾಕ್ ಡೆಕಾಲ್‍‍ಗಳು, 15 ಇಂಚಿನ ಕಪ್ಪು ಬಣ್ಣದ ಅಲಾಯ್ ವ್ಹೀಲ್‍‍‍ಗಳು, ಬ್ಲಾಕ್ ಔಟ್ ವಿಂಗ್ ಮಿರರ್‍‍ಗಳು, ಬ್ಲಾಕ್ ಔಟ್ ರೂಫ್‍‍ಗಳು.

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಕಾರಿನ ಒಳ ಭಾಗದಲ್ಲಿ ಕಪ್ಪು ಬಣ್ಣದ ಡ್ಯಾಶ್ ಬೋರ್ಡ್ ಮತ್ತು ಸೀಟುಗಳು, ಡೋರ್ ಟ್ರಿಮ್ ಮೇಲೆ ಬ್ಲೂ ಹೈಲೈಟ್‍‍ಗಳು ಮತ್ತು ಸ್ಟೀಯರಿಂಗ್ ವ್ಹೀಲ್. ಬೇರೆ ಬದಲಾವಣೆಗಳೆಂದರೆ 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‍‍‍‍ಮೆಂಟ್ ಯೂನಿಟ್, ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋಗಳನ್ನು ಅಳವಡಿಸಲಾಗಿಲ್ಲ.

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ಫೋರ್ಡಿನ ಎಸ್‍‍ವೈ‍ಎನ್‍‍‍ಸಿ3 ಇಂಟರ್‍‍‍ಫೇಸ್ ಅನ್ನು ಬೆಲೆ ಕಡಿಮೆ ಮಾಡುವ ಕಾರಣಕ್ಕಾಗಿ ಅಳವಡಿಸಲಾಗುವುದು.

MOST READ: ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಖ್ಯಾತಿಯ ರೇಂಜ್ ರೋವರ್ ವೆಲಾರ್

ಸ್ಪೋರ್ಟಿ ಲುಕ್‍‍‍ನಲ್ಲಿ ಬರಲಿದೆ ಫೋರ್ಡ್ ಫಿಗೋ ಆಸ್ಪೈರ್

ರಹಸ್ಯ ಚಿತ್ರಗಳು ಟೀಂ ಬಿಹೆಚ್‍‍‍ಪಿ https://www.team-bhp.com/news/more-pics-details-ford-aspire-blu ಕೈ ಸೇರಿದ್ದು, ಅದರಲ್ಲಿರುವಂತೆ ಹೊಸ ಫೋರ್ಡ್ ಫಿಗೋ ಕಾರಿನಲ್ಲಿ 6 ಏರ್‍‍ಬ್ಯಾಗ್‍‍‍ಗಳ ಬದಲು 2 ಏರ್‍‍‍ಬ್ಯಾಗ್‍‍‍ಗಳಿರಲಿವೆ. ಇದರ ಪ್ರಕಾರ ಫೋರ್ಡ್ ಕಾರಿನ ಬೆಲೆಯು ಸ್ಪರ್ಧಾತ್ಮಕವಾಗಿರಲಿದೆ. ಟಾಪ್ ಮಾದರಿಯ ಟಿಟಾನಿಯಂ ಪ್ಲಸ್ ಮಾದರಿಯ ಫಿಗೋ ಆಸ್ಪೈರ್‍‍‍ನ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.7.71 ಲಕ್ಷ ಮತ್ತು ರೂ.8.51 ಲಕ್ಷಗಳಾಗಲಿವೆ. ಫೋರ್ಡ್ ಕಂಪನಿಯು ಫಿಗೋ ಆಸ್ಪೈರ್‍‍ನ ಬೆಲೆಯನ್ನು ಕೆಲ ದಿನಗಳಲ್ಲಿ ಘೋಷಿಸುವ ಸಾಧ್ಯತೆಗಳಿವೆ.

Most Read Articles

Kannada
Read more on ಫೋರ್ಡ್ ford
English summary
Ford Figo Aspire to get sporty - Read in kannada
Story first published: Wednesday, May 8, 2019, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X