ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾ ವಿರುದ್ಧ ಪೊಲೀಸರ ಕ್ರಮ

ಮುಂಬೈನಲ್ಲಿ ಟ್ರಾಫಿಕ್ ಜಾಮ್‌ನಿಂದ ಬೇಸತ್ತು ಇತ್ತೀಚೆಗೆ ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ನಟಿ ಅನುಷ್ಕಾ ಶರ್ಮಾ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸಿದ್ದರು. ಇಬ್ಬರೂ ತಾರೆಯರ ವಿಡಿಯೋಗಳು ಈಗ ವೈರಲ್ ಆಗಿದ್ದು, ಇಬ್ಬರ ವಿರುದ್ಧ ಕ್ರಮ ಕೂಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಸೋಮವಾರದಂದು ಅಮಿತಾಭ್ ಬಚ್ಚನ್ ಅವರು ಟ್ರಾಫಿಕ್ ಜಾಮ್‌ನಿಂದಾಗಿ ಶೂಟಿಂಗ್ ಸ್ಥಳಕ್ಕೆ ತಲುಪುವಲ್ಲಿ ತಡವಾದ ಕಾರಣ ತಮ್ಮ ಕಾರಿಳಿದು ಬೈಕ್ ಸವಾರನೊಬ್ಬನ ಬಳಿ ಲಿಫ್ಟ್ ಪಡೆದಿದ್ದರು. ಹಾಗೆಯೇ ಕ್ರಿಕೆಟರ್ ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಹೊರಟಿದ್ದ ದಾರಿಯಲ್ಲಿ ಮರವೊಂದು ಅಡ್ಡಲಾಗಿ ಬಿದ್ದು ಟ್ರಾಫಿಕ್ ಜಾಮ್ ಆಗಿದ್ದ ಕಾರಣ ಅವರೂ ಕೂಡ ಬೈಕ್‌ನಲ್ಲಿ ಹೊರಟಿದ್ದರು.

Amitabh Bachchan, Anushka Sharma

ಆದ್ರೆ ಇಬ್ಬರು ಕೂಡ ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿ ಸಂಚರಿಸಿರುವುದು ಈಗ ಸುದ್ದಿಯಾಗಿದೆ. ಸೋಮವಾರ ಬೆಳಿಗ್ಗೆ ಬಚ್ಚನ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೈಕ್‌ನಲ್ಲಿ ಲಿಫ್ಟ್ ನೀಡಿದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದರು. ಲಿಫ್ಟ್ ಪಡೆಯುವ ಮೂಲಕ ಮುಂಬೈ ಟ್ರಾಫಿಕ್‌ನಲ್ಲೂ ಸಮಯಕ್ಕೆ ಸರಿಯಾಗಿ ತಮ್ಮ ಶೂಟಿಂಗ್ ಸ್ಥಳಕ್ಕೆ ತಲುಪಿರುವುದಾಗಿ ಹೇಳಿಕೊಂಡಿದ್ದರು.

ಬಚ್ಚನ್ ಅವರು ಬೈಕ್‌ನಲ್ಲಿ ಪಿಲಿಯನ್ ಸವಾರಿ ಮಾಡುತ್ತಿರುವ ಫೋಟೋ ಕೂಡ ಹಂಚಿಕೊಂಡಿದ್ದು "ನನ್ನ ರೈಡ್ ಗೆಳೆಯನಿಗೆ ಧನ್ಯವಾದಗಳು .. ನಿಮಗೆ ಗೊತ್ತಿಲ್ಲ .. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ .. ತಪ್ಪಿಸಿಲಾಗದ ಟ್ರಾಫಿಕ್ ಜಾಮ್‌ನಲ್ಲೂ ವೇಗವಾಗಿ ಬಿಟ್ಟಿದ್ದೀರಿ.. ಕ್ಯಾಪ್ಡ್, ಶಾರ್ಟ್ಸ್ ಮತ್ತು ಹಳದಿ ಬಣ್ಣದ ಟಿ-ಶರ್ಟ್ ಮಾಲೀಕರಿಗೆ ಧನ್ಯವಾದಗಳು." ಎಂದು ಬರೆದುಕೊಂಡಿದ್ದರು.

ಈ ಇಬ್ಬರು ತಾರೆಯರು ಹೆಲ್ಮೆಟ್ ಇಲ್ಲದ ಸವಾರಿ ಮಾಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಎರಡೂ ಸಂದರ್ಭಗಳಲ್ಲಿ ನಟರು ಹಾಗೂ ಅವರನ್ನು ಡ್ರಾಪ್ ಮಾಡಿದ ಚಾಲಕರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದನ್ನು ಗಮನಿಸಿದ್ದಾರೆ. ಇಬ್ಬರು ತಾರೆಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್ ಮೂಲಕ ಮುಂಬೈ ಪೊಲೀಸರನ್ನು ತಾಕೀತು ಮಾಡಿದ್ದಾರೆ.

ಇದೀಗ ಮುಂಬೈ ಪೊಲೀಸರು ಇಬ್ಬರು ತಾರೆಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅನುಷ್ಕಾ ಶರ್ಮಾ ಬೈಕ್ ರೈಡ್ ಆಯ್ಕೆ ಮಾಡಿಕೊಂಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವಾರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ಥಳೀಯವಾಗಿ ಉರುಳಿದ್ದ ಮರದಿಂದಾಗಿ ಅನುಷ್ಕಾ ಶರ್ಮಾ ತನ್ನ ಸಿಬ್ಬಂದಿಯ ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಕಳೆದ ವರ್ಷ ಮುಂಬೈ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ರಹಿತ ಪಿಲಿಯನ್ ಸವಾರರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈಗ ಬೆಂಗಳೂರುನಂತೆಯೇ ಮುಂಬೈನಲ್ಲೂ ಬೈಕ್ ಚಲಾಯಿಸುವಾಗ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದೀಗ ಈ ಇಬ್ಬರು ತಾರೆಯರ ವಿರುದ್ಧ ದಂಡ ವಿಧಿಸಿ ಮತ್ತೊಮ್ಮೆ ಮರುಕಳಿಸದಂತೆ ಹೆಲ್ಮೆಟ್ ಧರಿಸಲು ಸೂಚಿಸಬಹುದಾಗಿದೆ.

ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Tuesday, May 16, 2023, 15:27 [IST]
English summary
Amitabh bachchan anushka sharma traveling without helmet case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+