81ನೇ ವಸಂತಕ್ಕೆ ಕಾಲಿಟ್ಟ ಅಮಿತಾಬ್.. 3.5 ಕೋಟಿಯ ರೇಂಜ್ ರೋವರ್ ಕಾರಿನಲ್ಲಿ ಕಾಣಿಸಿಕೊಂಡರು: ವಿಶೇಷತೆಗಳೇನು?
ಭಾರತೀಯ ಚಿತ್ರರಂಗದ ಪ್ರಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಬುಧವಾರ 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಲವು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದ್ದು, ಅವರ ಮುಂಬೈ ನಿವಾಸದ ಸಮೀಪ ಹಲವೆಡೆಯಿಂದ ಬಂದ ಫ್ಯಾನ್ಸ್ ಡಾನ್ಸ್ ಮಾಡಿ, ಸಂಭ್ರಮಿಸಿದ್ದಾರೆ.
ಐದು ದಶಕಗಳ ಕಾಲದ ಚಲನಚಿತ್ರ ವೃತ್ತಿಜೀವನದಲ್ಲಿ ಅಮಿತಾಬ್ ಬಚ್ಚನ್, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಭಾರತ ಸರ್ಕಾರ ನೀಡುವ ಪದ್ಮಶ್ರೀ (1984), ಪದ್ಮಭೂಷಣ (2001), ಪದ್ಮವಿಭೂಷಣ (2015) ಹಾಗೂ ದಾದಾಸಾಹೇಬ್ ಫಾಲ್ಕೆ (2019) ಸೇರಿದಂತೆ ಅತ್ಯುತ್ತಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಾಮಾನ್ಯವಾಗಿ ಮುಂಬೈ ನಗರದಲ್ಲಿ ಓಡಾಟ ನಡೆಸಲು ಬಿಗ್ ಬಿ ಹಳೆಯ ರೇಂಜ್ ರೋವರ್ ಕಾರನ್ನು ಬಳಕೆ ಮಾಡುತ್ತಿದ್ದರು.

ಆದರೀಗ ಹುಟ್ಟುಹಬ್ಬದ ದಿನ ಅಮಿತಾಬ್ ಬಚ್ಚನ್ ಹೊಚ್ಚ ಹೊಸ ರೇಂಜ್ ರೋವರ್ (Range Rover) ಕಾರಿನಲ್ಲಿ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ. ಇದು, ಲಾಂಗ್ ವೀಲ್‌ಬೇಸ್ ವೇರಿಯೆಂಟ್ ಆಗಿದ್ದು, ಮುಂಬೈನಲ್ಲಿ 3.5 ಕೋಟಿ ರೂಪಾಯಿ ಬೆಲೆಯನ್ನು ಹೊಂದಿದೆ. ಆ ದರಕ್ಕೆ ತಕ್ಕಂತೆ ಈ ಎಸ್‌ಯುವಿ, ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಹೆಚ್ಚು ಅತ್ಯಾಧುನಿಕವಾಗಿದೆ.
ಈ ರೇಂಜ್ ರೋವರ್ ಎಲ್‌ಡಬ್ಲ್ಯೂಬಿ (ಲಾಂಗ್ ವೀಲ್‌ಬೇಸ್) ಆಟೋಬಯೋಗ್ರಫಿ ಕಾರು, 4395 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 5500 rpmನಲ್ಲಿ 523 bhp ಗರಿಷ್ಠ ಪವರ್ ಹಾಗೂ 1800 rpmನಲ್ಲಿ 750 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಜೊತೆಗೆ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಸ್ಯಾಂಟೊರಿನಿ ಬ್ಲ್ಯಾಕ್, ಫ್ಯೂಜಿ ವೈಟ್, ಸಿಲಿಕಾನ್ ಸಿಲ್ವರ್, ಕಾರ್ಪಾಥಿಯನ್ ಗ್ರೇ, ಪೋರ್ಟೋಫಿನೋ ಬ್ಲೂ, ಈಗರ್ ಗ್ರೇ, ಹಕುಬಾ ಸಿಲ್ವರ್, ಚಾರೆಂಟೆ ಗ್ರೇ ಸೇರಿದಂತೆ 11 ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಇದರೊಟ್ಟಿಗೆ ಕ್ಯಾಬಿನ್ ಒಳಭಾಗದಲ್ಲಿ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಅಮಿತಾಬ್ ಬಚ್ಚನ್ ಸಾಕಷ್ಟು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಬಳಿ, ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಎಂಪಿವಿಯಿದೆ. ಇದು, ರೂ.71.05 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, 6 - 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಸಿಗಲಿದೆ. 2.1 - ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ಈ ಕಾರು, 163 PS ಪವರ್ ಮತ್ತು 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 7ಜಿ-ಟ್ರಾನಿಕ್ ಆಟೊಮೆಟಿಕ್ ಗೇರ್‌ಬಾಕ್ಸ್ ಪಡೆದಿದೆ.
ಅಮಿತಾಬ್ ಬಚ್ಚನ್ ಅವರಿಗೆ ಚಿತ್ರ ನಿರ್ಮಾಪಕ-ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಾರು, ರೂ.8.99 ಕೋಟಿ ಬೆಲೆಯನ್ನು ಹೊಂದಿತ್ತು. ಕೆಲ ವರ್ಷಗಳ ಬಳಿಕ ಈ ಕಾರನ್ನು ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲಾಯಿತು. ಅಲ್ಲದೆ, ಟೊಯೊಟಾ ಲ್ಯಾಂಡ್ ಕ್ರೂಸರ್ ಸೇರಿದಂತೆ ಅನೇಕ ಕಾರುಗಳಿಗೆ ಬಿಗ್ ಬಿ ಮಾಲೀಕರಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








