Video: ಭಾರತದಲ್ಲಿ ಹೀಗಿದ್ರೆ ಎಷ್ಟು ಚೆಂದ.. ಆನಂದ್ ಮಹೀಂದ್ರಾ ಮೆಚ್ಚುಗೆ, ಭಾರೀ ವೈರಲ್

ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರಿಗೆ ವಿಭಿನ್ನವೆನಿಸುವ ಒಂದಷ್ಟು ವಿಚಾರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ, ನೆದರ್‌ಲ್ಯಾಂಡ್ಸ್‌ನಲ್ಲಿರುವ ವಿಶಿಷ್ಟ ಸೇತುವೆ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದು ಎಲ್ಲೆಡೆ ಭಾರೀ ವೈರಲ್ ಆಗಿದೆ.

ಈ ಶತಮಾನದ ಎಂಜಿನಿಯರಿಂಗ್ ಅದ್ಬುತಗಳಲ್ಲಿ ಒಂದೆಂದು ಹೇಳುವ ನೆದರ್‌ಲ್ಯಾಂಡ್ಸ್‌ನ ಅಕ್ವೆಡೆಕ್ಟ್ ಸೇತುವೆಯ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಅದಕ್ಕೆ 'ನಾವು ಇದನ್ನು ಮಾಡಬಹುದೇ..' ಎಂದು ಶೀರ್ಷಿಕೆ ಬರೆದಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಇದು ವೈರಲ್ ಆಗಿದ್ದು, 13 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 19 ಸಾವಿರಕ್ಕಿಂತ ಹೆಚ್ಚಿನ ಲೈಕ್ ಬಂದಿವೆ.

Video: ಭಾರತದಲ್ಲಿ ಹೀಗಿದ್ರೆ ಎಷ್ಟು ಚೆಂದ.. ಆನಂದ್ ಮಹೀಂದ್ರಾ ಮೆಚ್ಚುಗೆ, ಭಾರೀ ವೈರಲ್

ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ಗೆ ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, 'ನೀರು ಉಕ್ಕಿ ಹರಿಯುವ ಸಾಧ್ಯತೆ ಇದ್ಯಾ?' ಎಂದು ಪ್ರಶ್ನೆ ಮಾಡಿದ್ದಾರೆ. 'ಈ ರೀತಿ ಭಾರತದಲ್ಲಿ ಇದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ 'ಕಾಳೇಶ್ವರಂನಲ್ಲಿ ಮುಳುಗಿರುವ ಲಿಫ್ಟಿಂಗ್ ಪಂಪ್‌ಗಳಂತೆ!?' ಎಂದು ಹೇಳಿದ್ದಾರೆ.

'ಹೌದು, ನಮ್ಮಲ್ಲಿಯೂ ಮಾಡಬಹುದು. ಆದರೆ ಅಂತಹ ಸ್ಥಳ ಎಲ್ಲಿದೆ' ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಇನ್ನೊಬ್ಬರು 'ಭಾರತೀಯ ಎಂಜಿನಿಯರ್‌ಗಳು ಯಾರಿಗೇನು ಕಡಿಮೆಯೇನಲ್ಲ. ಎಲ್ಲವನ್ನೂ ಸಾಧ್ಯವಾಗಿಸಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ನಾನು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪರಿಣಿತನಲ್ಲ ಸರ್.. ಆದರೆ ಸ್ವಲ್ಪ ತಪ್ಪು ಅಥವಾ ಸೋರಿಕೆಯಾದರೆ ಇಡೀ ರಸ್ತೆಯನ್ನು ಮುಳುಗಿಸುತ್ತದೆ. ಆದಾಗ್ಯೂ, ಈ ಕಲ್ಪನೆಯು ಆಶ್ಚರ್ಯಕರವಾಗಿ ಕಾಣುತ್ತದೆ' ಎಂದು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಟ್ವೀಟ್ ಮಾಡಿರುವ ನೆದರ್‌ಲ್ಯಾಂಡ್ಸ್‌ನ ಅಕ್ವೆಡಕ್ಟ್ ಸೇತುವೆ ಬಗ್ಗೆ ತಿಳಿಯುವುದಾದರೆ, ಇದನ್ನು ಹಾರ್ಡರ್‌ವಿಜ್‌ನಲ್ಲಿರುವ ವೆಲುವೆಮೀರ್ ಸರೋವರದ ಎರಡು ಕಡೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗಿದ್ದು, ಸಣ್ಣ ದೋಣಿಗಳು ಸಂಚರಿಸುತ್ತವೆ. ವಿಶಿಷ್ಟ ರಚನೆಯನ್ನು ಈ ಸೇತುವೆ ಹೊಂದಿದ್ದು, ಮೇಲೆ ನೀರು ಹರಿಯುತ್ತದೆ. ಕೆಳಗೆ ವಾಹನಗಳು ಓಡಾಡುತ್ತವೆ. 2002ರಲ್ಲಿ ಅಕ್ವೆಡಕ್ಟ್ ಸೇತುವೆಯನ್ನು ಲೋಕಾರ್ಪಣೆ ಮಾಡಲಾಯಿತು. ವರದಿ ಪ್ರಕಾರ, ಪ್ರತಿದಿನ 28,000 ವಾಹನಗಳು ಸಂಚರಿಸುತ್ತವೆ.

ಕಳೆದ ಫೆಬ್ರವರಿ ತಿಂಗಳಲ್ಲಿಯು ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ವಂದೇ ಭಾರತ್ ರೈಲು, ಆಗಷ್ಟೇ ನಿರ್ಮಾಣಗೊಂಡಿದ್ದ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಸೇತುವೆ ಕೆಳಗೆ ಹಾದುಹೋಗುವ ಡ್ರೋನ್ ದೃಶ್ಯಗಳ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ 'ವಿಶ್ವದರ್ಜೆಯ ಗುಣಮಟ್ಟದ ಮೂಲಸೌಕರ್ಯದ ಅಭಿವೃದ್ಧಿಯು ಭಾರತವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಶೀರ್ಷಿಕೆ ಬರೆದಿದ್ದರು.

ಇನ್ನು, ಆನಂದ್ ಮಹೀಂದ್ರಾ ಮಾಡಿರುವ ಈಗಿನ ಟ್ವೀಟ್ ಕೂಡ ಸಖತ್ ವೈರಲ್ ಆಗಿದೆ. ನೆಟ್ಟಿಗರು ಕೂಡ ಕಾಮೆಂಟ್ ಮಾಡುತ್ತಿದ್ದು, ನೆದರ್‌ಲ್ಯಾಂಡ್ಸ್‌ನ ಅಕ್ವೆಡೆಕ್ಟ್ ಸೇತುವೆ ಬಗ್ಗೆ ತಿಳಿದುಕೊಳ್ಳಲು ಬಹುತೇಕರು ಇಂಟರ್ನೆಟ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ನಮ್ಮಲ್ಲಿ ಎಷ್ಟೋ ಕಡೆ ಬೆಟ್ಟಗಳಲ್ಲಿ ಸುರಂಗ ಕೊರೆಯುವ ಮೂಲಕ ಹೆಚ್ಚು ದೂರವನ್ನು ಕೆಲವೇ ಕಿಲೋಮೀಟರ್ ಗಳಿಗೆ ಕಡಿಮೆ ಮಾಡಿರುವ ಹಲವು ಉದಾಹರಣೆಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Tuesday, June 13, 2023, 15:34 [IST]
English summary
Anand mahindra asks gadkari we could do this video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+