ತಂದೆ - ಮಗನ ಬಾಂಧವ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ: ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಗೆ 'ಥಾರ್' ಗಿಫ್ಟ್

ದೇಶದ ಯಶಸ್ವಿ ಉದ್ಯಮಿ ಆನಂದ್ ಮಹೀಂದ್ರಾ (Anand Mahindra), ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಗುರುತಿಸಿ, ತಮ್ಮ ಕಂಪನಿಯ ಕಾರುಗಳನ್ನು ಗಿಫ್ಟ್ ನೀಡುವ ಮೂಲಕ ಗೌರವಿಸುತ್ತಿರುತ್ತಾರೆ. ಈಗ, ಕೊಟ್ಟ ಮಾತಿನಂತೆ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ತಂದೆಗೆ 'ಥಾರ್' ಎಸ್‌ಯುವಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಈ ಬಗ್ಗೆ ಸ್ವತಃ ಟೀಂ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಅವರೇ ತಮ್ಮ ಇನ್ಸ್ಟಾಗ್ರಾಮ್ ಪುಟದ ಸ್ಟೇಟಸ್‌ನಲ್ಲಿ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸರ್ಫರಾಜ್ ತಂದೆ ನೌಶಾದ್‌ ಖಾನ್ ಅವರು, ಮಹೀಂದ್ರಾ ಥಾರ್ (Mahindra Thar) ಕಾರನ್ನು ತಮ್ಮಿಬ್ಬರು ಪುತ್ರರೊಂದಿಗೆ ವಿತರಣೆ ಪಡೆಯುತ್ತಿರುವುದು ಹಾಗೂ ಚಾಲಕನ ಆಸನದಲ್ಲಿ ಕುಳಿತುಕೊಂಡಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.

Anand Mahindra Gifted Mahindra Thar Car Cricketer Sarfaraz Khan Father

ಕಳೆದ ಫೆಬ್ರವರಿಯಲ್ಲಿ ಸರ್ಫರಾಜ್ ತಂದೆ ನೌಶಾದ್‌ ಖಾನ್ ಅವರಿಗೆ ಮಹೀಂದ್ರಾ ಥಾರ್ ಗಿಫ್ಟ್ ನೀಡುತ್ತೇನೆ ಎಂದು ಆನಂದ್ ಮಹೀಂದ್ರಾ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. 'ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ.. ಮಗನಿಗೆ ಸ್ಫೂರ್ತಿ ತುಂಬಲು ತಂದೆಗೆ ಇದಕ್ಕಿಂತ ಉತ್ತಮವಾದ ಗುಣಗಳು ಯಾವುವು?. ಸ್ಪೂರ್ತಿದಾಯಕ ಪೋಷಕರಾಗಿರುವ ನೌಶಾದ್ ಖಾನ್ ಅವರು ಥಾರ್ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದರೆ ಅದು ನನ್ನ ಗೌರವವಾಗುತ್ತದೆ' ಎಂದು ಬರೆದುಕೊಂಡಿದ್ದರು.

ಫೆ.15 ರಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ನಿರಂಜನ್ ಷಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್, ಅರ್ಧಶತಕವನ್ನು ಬಾರಿಸುವ ಮೂಲಕ ಭಾರೀ ಸುದ್ದಿಯಾಗಿದ್ದರು. ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದ ನಂತರ ತಂದೆ ನೌಶಾದ್ ಭಾವುಕರಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

Anand Mahindra Gifted Mahindra Thar Car Cricketer Sarfaraz Khan Father

ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಸರ್ಫರಾಜ್ ಅವರು ಅನ್‌ಸೋಲ್ಡ್‌ ಆಗಿದ್ದು, ಟೂರ್ನಿಯಿಂದ ದೂರವಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮೂಲಕ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದ ಸರ್ಫರಾಜ್, 2015 ರಿಂದ 2018 ರವರೆಗೆ ಆರ್‌ಸಿಬಿ ಭಾಗವಾಗಿದ್ದರು. 2019 ರಿಂದ 2021 ಪಂಜಾಬ್ ಕಿಂಗ್ಸ್ ಪರ ಆಡಿದ್ದ ಅವರು, 2022 ಹಾಗೂ 2023ರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಸರ್ಫರಾಜ್ ತಂದೆ ನೌಶಾದ್‌ ಖಾನ್ ಅವರಿಗೆ ಮಹೀಂದ್ರಾ ಥಾರ್ ಕಾರಿನ ಯಾವ ರೂಪಾಂತರ ಉಡೊಗೊರೆಯಾಗಿ ಸಿಕ್ಕಿದೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಥಾರ್ 3-ಡೋರ್ ಆಯ್ಕೆಯಲ್ಲಿ ದೊರೆಯಲಿದ್ದು, ರೂ.11.25 ಲಕ್ಷದಿಂದ ರೂ.17.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನೊಂದಿಗೆ ಲಭ್ಯವಿದ್ದು, ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ 15.2 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಕ್ರೂಸ್ ಕಂಟ್ರೋಲ್, ಮ್ಯಾನುವಲ್ ಎಸಿ ಸೇರಿದಂತೆ ಖರೀದಿದಾರರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 23, 2024, 12:14 [IST]
English summary
Anand mahindra gifted mahindra thar car cricketer sarfaraz khan father
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+