ಚೆಸ್ ಆಟಗಾರ ಪ್ರಗ್ನಾನಂದ ಪೋಷಕರಿಗೆ XUV400 ಎಲೆಕ್ಟ್ರಿಕ್ ಕಾರು ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ದೇಶದ ಪ್ರಖ್ಯಾತ, ಉದ್ಯಮಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra), ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮಗೆ ಉತ್ತಮವಾಗಿ ಕಂಡ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಗುರುತಿಸುವ ಅವರು, ತಮ್ಮ ಕಂಪನಿಯ ಕಾರುಗಳನ್ನು ಗಿಫ್ಟ್ ನೀಡಿ ಗೌರವಿಸಿಕೊಂಡು ಬಂದಿದ್ದಾರೆ.

ಚೆಸ್ ಆಟಗಾರ, ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ (R Praggnanandhaa) ಪೋಷಕರಿಗೆ ಮಹೀಂದ್ರಾ ಎಕ್ಸ್‌ಯುವಿ400 (Mahindra XUV400) ಎಲೆಕ್ಟ್ರಿಕ್ ಕಾರನ್ನು ಮಂಗಳವಾರ ಉಡುಗೊರೆಯಾಗಿ ನೀಡಲಾಗಿದೆ. ಈ ಫೋಟೊಗಳನ್ನು ಪ್ರಗ್ನಾನಂದ ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದು, 'ಎಕ್ಸ್‌ಯುವಿ400ನ್ನು ವಿತರಣೆ ಪಡೆದಿರುವುದು ನನ್ನ ಪೋಷಕರಿಗೆ ತುಂಬಾ ಸಂತೋಷ ತಂದಿದೆ. ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

Anand Mahindra Gifted New XUV400 Electric Car Chess Grandmaster Praggnanandhaa Family

ಕಳೆದ ವರ್ಷದ ಆಗಸ್ಟ್‌ನಲ್ಲಿ ಚೆಸ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆದ ಪ್ರಗ್ನಾನಂದಗೆ ಥಾರ್ ಎಸ್‌ಯುವಿ ಗಿಫ್ಟ್ ಕೊಡುವಂತೆ ನೆಟ್ಟಿಗರು ಆನಂದ್ ಮಹೀಂದ್ರಾ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ತಮ್ಮ 'ಎಕ್ಸ್'ನಲ್ಲಿ ಉತ್ತರಿಸಿದ್ದ ಅವರು, 'ನಿಮ್ಮಂತಹವರ ಅನೇಕರ ಭಾವನೆಯನ್ನು ಮೆಚ್ಚಿದ್ದಾನೆ. ನೀವೆಲ್ಲ ಪ್ರಗ್ನಾನಂದಗೆ ಥಾರ್ ಉಡುಗೊರೆಯಾಗಿ ನೀಡುವಂತೆ ಒತ್ತಾಯಿಸಿದ್ದೀರಿ. ಆದರೆ, ನನಗೆ ಇನ್ನೊಂದು ಆಲೋಚನೆಯಿದೆ. ಚೆಸ್ ಕ್ರೀಡೆಯತ್ತ ಮಕ್ಕಳನ್ನು ವಾಲುವಂತೆ ಮಾಡಿದ ಅವರ ಪೋಷಕರನ್ನು ಬೆಂಬಲಿಸಲು ಬಯಸುತ್ತೇನೆ' ಎಂದಿದ್ದರು.

ಮುಂದುವರಿದು, 'ನಮ್ಮ ಭೂಮಿಯ ಭವಿಷ್ಯಕ್ಕೆ ಎಲೆಕ್ಟ್ರಿಕ್ ವಾಹನಗಳಂತೆ ಚೆಸ್ ಕ್ರೀಡೆಯು ಉತ್ತಮ ಕೊಡುಗೆಯಾಗಿದೆ. ಅದರಿಂದಾಗಿ ಎಕ್ಸ್‌ಯುವಿ400 ಇವಿಯನ್ನು ಗಿಫ್ಟ್ ನೀಡಬೇಕೆಂದು ಕೊಂಡಿದ್ದೇನೆ. ಪ್ರಗ್ನಾನಂದ ತಾಯಿ ನಾಗಲಕ್ಷ್ಮಿ ಮತ್ತು ತಂದೆ ರಮೇಶ್ ಬಾಬು ತಮ್ಮ ಮಗನ ಆಸಕ್ತಿಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಬೇಕಾಗಿದೆ' ಎಂದು ಆನಂದ್ ಮಹೀಂದ್ರಾ ಅವರು ಬರೆದುಕೊಂಡಿದ್ದರು.

Anand Mahindra Gifted New XUV400 Electric Car Chess Grandmaster Praggnanandhaa Family

ಸದ್ಯ, ಪ್ರಗ್ನಾನಂದ ಪೋಷಕರಿಗೆ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರಿನ ಯಾವ ರೂಪಾಂತರವನ್ನು ಉಡುಗೊರೆಯಾಗಿ ನೀಡಲಾಗಿದೆ ಎಂಬ ವಿವರಗಳು ಲಭ್ಯವಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ400 ರೂ.15.49 ಲಕ್ಷದಿಂದ ರೂ.19.39 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪ್ರೊ ಇಸಿ, ಪ್ರೊ ಇಎಲ್ ರೂಪಾಂತರ ಮತ್ತು ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದ್ದು, 5 ಮಂದಿ ಆರಾಮದಾಯಕವಾಗಿ ಕುಳಿದುಕೊಂಡು ಪ್ರಯಾಣಿಸಬಹುದು.

ಈ ಎಲೆಕ್ಟ್ರಿಕ್ ಕಾರು 34.5 ಕೆಡಬ್ಲ್ಯೂಹೆಚ್ (kWh) ಮತ್ತು 39.4 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರಲ್ಲಿ ಬಳಕೆ ಮಾಡಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 150 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 310 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 375 ಕಿಲೋಮೀಟರ್ ರಿಂದ 456 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರು, 50 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 0-80% ಚಾರ್ಜ್ ಆಗಲು 50 ನಿಮಿಷ ತೆಗೆದುಕೊಳ್ಳುತ್ತದೆ. ಅದೇ 7.2 ಕೆಡಬ್ಲ್ಯೂ ಎಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಸಂಪೂರ್ಣ ಬ್ಯಾಟರಿ 6.5 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡುಯಲ್-ಜೋನ್ ಎಸಿ, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಎಕ್ಸ್‌ಯುವಿ400 ಅತ್ಯುತ್ತಮವಾಗಿದೆ. 6 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಟಾಟಾ ನೆಕ್ಸಾನ್ ಇವಿ ಪ್ರಬಲ ಎದುರಾಳಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 13, 2024, 11:54 [IST]
English summary
Anand mahindra gifted xuv400 electric car chess grandmaster praggnanandhaa family
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+