ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಟೊಕಿಯೊದಲ್ಲಿ ನಡೆಯುತ್ತಿರುವ 2020ರ ಒಲಂಪಿಕ್ಸ್‌ನಲ್ಲಿ ಭಾರತೀಯ ಕ್ರಿಡಾಪಟುಗಳು ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, ಜಾವಲಿನ್ ಎಸೆತ ವಿಭಾಗದಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ನೀರಜ್ ಚೋಪ್ರಾ ಅವರ ಅಭೂತಪೂರ್ವ ಗೆಲುವಿಗೆ ಅಭಿನಂದನೆಗಳ ಮಾಹಾಪೂರವೇ ಹರಿದುಬರುತ್ತಿದ್ದು, ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕೂಡಾ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಯನ್ನು ಸಲ್ಲಿಸುವ ಮೂಲಕ ವಿಶೇಷ ಉಡುಗೊರೆಯೊಂದನ್ನು ಪ್ರಕಟಿಸಿದ್ದಾರೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಜಾವಲಿನ್ ಎಸೆತ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನೀರಜ್ ಚೋಪ್ರಾ ಅವರಿಗೆ ಆನಂದ್ ಮಹೀಂದ್ರಾ ಅವರು ದುಬಾರಿ ಕಾರು ಮಾದರಿಯೊಂದನ್ನು ಉಡುಗೊರೆ ನೀಡುವುದಾಗಿ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯ ಬಹುನೀರಿಕ್ಷಿತ ಎಕ್ಸ್‌ಯುವಿ700 ಎಸ್‌ಯವಿಯನ್ನು ಉಡುಗೊರೆಯಾಗಿ ಪ್ರಕಟಿಸಲಾಗಿದ್ದು, ಇನ್ನು ಬಿಡುಗಡೆಯಾಗಬೇಕಿರುವ ಹೊಸ ಕಾರು ಹಲವಾರು ಹೊಸ ಸೌಲಭ್ಯಗಳೊಂದಿಗೆ ಐಷಾರಾಮಿ ಮಾದರಿಯಾಗಿ ಅಭಿವೃದ್ದಿಗೊಳ್ಳುತ್ತಿದೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಹೊಸ ಎಕ್ಸ್‌ಯುವಿ700 ಎಸ್‌ಯುವಿ ಕಾರು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯ ಹೊಸ ತಲೆಮಾರಿನ ಆವೃತ್ತಿಯನ್ನೇ ಎಕ್ಸ್‌ಯುವಿ700 ಮಾದರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಎಕ್ಸ್‌ಯುವಿ500 ಮಾದರಿಗಿಂತಲೂ ಹೆಚ್ಚು ವ್ಹೀಲ್ ಬೆಸ್ ಹೊಂದಿರುವ ಎಕ್ಸ್‌ಯುವಿ700 ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ 7 ಸೀಟರ್ ಮಾದರಿಯಲ್ಲಿ ಬಿಡುಗಡೆಯಾಗಲಿದ್ದು, ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಮತ್ತೊಂದು ವಿಶೇಷತೆಯೆಂದರೆ ಮಹೀಂದ್ರಾ ಕಂಪನಿಯು ನೀರಜ್ ಚೋಪ್ರಾ ಅವರಿಗೆ ನೀಡಲಾಗುವ ಕಾರು ಮಾದರಿಯೊಂದಿಗೆ ಸ್ಪೆಷಲ್ ಎಡಿಷನ್ ಅಭಿವೃದ್ದಿಗೊಳಿಸುವ ಮಾಹಿತಿ ಹಂಚಿಕೊಂಡಿದ್ದು, ಮಹೀಂದ್ರಾ ಡಿಸೈನ್ ವಿಭಾಗದ ಮುಖ್ಯಸ್ಥ ಪ್ರತಾಪ್ ಬೋಸ್ ಅವರು ಸ್ಪೆಷಲ್ ಎಡಿಷನ್ ಕುರಿತಾಗಿ ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಇನ್ನು ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 180-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೆ ಹೊಸದಾಗಿ ನೀಡಲಾಗುತ್ತಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 210 ಬಿಎಚ್‌ಪಿ ಉತ್ಪಾದನಾ ಮಾದರಿಯಾಗುವ ಸಾಧ್ಯತೆಗಳಿವೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಇದರ ಜೊತೆಗೆ ಹೊಸ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳಾದ ಆಟೊನಮಸ್ ಲೇವಲ್ 1 ಟೆಕ್ನಾಲಜಿ ಜೊತೆಗೆ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್, ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್‌ರೂಫ್, ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳಿದ್ದು, ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ಒಲಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ ಚೋಪ್ರಾ ಅವರಿಗೆ ದುಬಾರಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಹೊಸ ಕಾರು ಮಾದರಿಯನ್ನು ಕಳೆದ ವರ್ಷವೇ ಥಾರ್ ನ್ಯೂ ಜನರೇಷನ್ ನಂತರ ಬಿಡುಗಡೆ ಮಾಡಬೇಕಿದ್ದ ಮಹೀಂದ್ರಾ ಕಂಪನಿಯು ಕೋವಿಡ್ ಪರಿಣಾಮ ಮುಂದೂಡಿಕೆ ಮಾಡುತ್ತಲೇ ಬಂದಿದ್ದು, ಇದೀಗ ಅಂತಿಮ ಹಂತದ ಬಿಡುಗಡೆಯ ಸಿದ್ದತೆಯಲ್ಲಿದೆ. ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.51 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.20.03 ಲಕ್ಷ ಬೆಲೆ ಹೊಂದಿದ್ದು, ನ್ಯೂ ಜನರೇಷನ್ ಮಾದರಿಯು ಹಳೆಯ ಆವೃತ್ತಿಗಿಂತ ಹೆಚ್ಚುವರಿಯಾಗಿ ರೂ. 80 ಸಾವಿರದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿರಲಿದೆ.

Most Read Articles

Kannada
English summary
Anand mahindra gifts new xuv700 suv to olympics gold medalist neeraj chopra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X