ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ರವರು ನಿನ್ನೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಸಿದ್ದಾರೆ. ಉದ್ಯಮ, ವ್ಯಾಪಾರ ಕ್ಷೇತ್ರದಲ್ಲಿ ಆನಂದ್ ಮಹೀಂದ್ರಾರವರು ನೀಡಿರುವ ವಿಶಿಷ್ಟ ಸೇವೆಗಾಗಿ ಈ ಗೌರವ ನೀಡಲಾಗಿದೆ. ಆನಂದ್ ಮಹೀಂದ್ರಾ ರವರು ಕಳೆದ 25 ವರ್ಷಗಳಿಂದ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಅವರು ದೇಶ, ವಿದೇಶಗಳಲ್ಲಿ ಮಹೀಂದ್ರಾ (Mahindra) ಕಂಪನಿಯ ವ್ಯಾಪಾರವನ್ನು ವೃದ್ಧಿಸಿದ್ದಾರೆ. ಇದರ ಜೊತೆಗೆ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಆನಂದ್ ಮಹೀಂದ್ರಾ ಕೆಲವು ವರ್ಷಗಳಿಂದ ವ್ಯವಹಾರದಲ್ಲಿ ತಮ್ಮದೇ ಆದ ಹಿಡಿತವನ್ನು ಸ್ಥಾಪಿಸಿ, ಭಾರತೀಯ ಕೈಗಾರಿಕೋದ್ಯಮಿಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇದರಿಂದ ಮಹೀಂದ್ರಾ ಗ್ರೂಪ್‌ನ ಕಾರ್ಪೊರೇಟ್ ಆಡಳಿತವನ್ನು ಸುಗಮವಾಗಿ ನಡೆಸಲು ಸಾಧ್ಯವಾಗಿದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಜೊತೆಗೆ ಸಮೂಹ ವ್ಯವಹಾರದಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಕಂಪನಿಯ ವ್ಯವಹಾರವು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹರಡಿದೆ. ಇದರ ಜೊತೆಗೆ ಆನಂದ್ ಮಹೀಂದ್ರಾ ಜಾಗತಿಕ ಮಟ್ಟದಲ್ಲಿ ಸುಸ್ಥಿರತೆ ಹಾಗೂ ಹವಾಮಾನ ಬದಲಾವಣೆಯತ್ತ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮುಂಬರುವ ಪೀಳಿಗೆಗೆ ಹೆಚ್ಚಿನ ಪ್ರಯೋಜನವಾಗುತ್ತದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಅವರು ತಮ್ಮ ನಡೆ ನುಡಿಗಳಿಂದ ತಮ್ಮ ಗೆಳೆಯರು, ಉದ್ಯೋಗಿಗಳು, ಪಾಲುದಾರರು ಹಾಗೂ ಉದ್ಯಮದಲ್ಲಿನ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಹೊಸ ವ್ಯಾಪಾರವನ್ನು ಉತ್ತೇಜಿಸಲು ಅವರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆನಂದ್ ಮಹೀಂದ್ರಾ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಅವರು ಕಾರುಗಳ ಬಗ್ಗೆಯೂ ಒಲವು ಹೊಂದಿದ್ದಾರೆ. ಆನಂದ್ ಮಹೀಂದ್ರಾ ರವರು ಯಾವ ಕಾರುಗಳನ್ನು ಹೊಂದಿದ್ದಾರೆ ಎಂಬುದನ್ನು ನೋಡುವುದಾದರೆ...

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

Mahindra Bolero Invader

ಮಹೀಂದ್ರ ಬೊಲೆರೊ ಇನ್ವೇಡರ್ ವಿನ್ಯಾಸವು ಮಹೀಂದ್ರಾ ಬೊಲೆರೊದಿಂದ ಪ್ರೇರಿತವಾಗಿದೆ. ಈ ವಾಹನವು 2.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. Invader ಓಪನ್ ರೂಫ್ ಹೊಂದಿರುವ ಸ್ಪೋರ್ಟಿ ಎಂಪಿವಿಯಾಗಿದೆ. ಆನಂದ್ ಮಹೀಂದ್ರಾ ತಮ್ಮ ಯೌವನದಲ್ಲಿ ಈ ಕಾರ್ ಅನ್ನು ಚಾಲನೆ ಮಾಡುತ್ತಿದ್ದರು. ಈಗ ಈ ಕಾರು ರಸ್ತೆಗಳಲ್ಲಿ ಕಂಡು ಬರುವುದು ತೀರಾ ಅಪರೂಪ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

Mahindra TUV 300

ಆನಂದ್ ಮಹೀಂದ್ರಾ ರವರು 2015ರಲ್ಲಿ TUV 300 ಕಾರಿನ ಬಳಕೆಯನ್ನು ಆರಂಭಿಸಿದರು. TUV 300 ಬಾಕ್ಸ್ ವಿನ್ಯಾಸವು ಆಕರ್ಷಕವಾದ ನೋಟವನ್ನು ನೀಡುತ್ತದೆ. ಆನಂದ್ ಮಹೀಂದ್ರಾ ಈ ಕಾರ್ ಅನ್ನು ಆರ್ಮರ್ ಲುಕ್‌ನಲ್ಲಿ ಕಸ್ಟಮೈಸ್ ಮಾಡಿದ್ದಾರೆ. ಈ ಕಾರಿನ ವ್ಹೀಲ್, ಬಾನೆಟ್ ಹಾಗೂ ಲೈಟ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಕಾರಿನ ಸುತ್ತಲೂ ಪ್ಲಾಸ್ಟಿಕ್ ಹೊದಿಕೆ ನೀಡಲಾಗಿದೆ. ಹಸಿರು ಬಣ್ಣದಲ್ಲಿರುವ ಈ ಕಾರು ಯಾವುದೇ ಯುದ್ಧ ಯಂತ್ರಕ್ಕಿಂತ ಕಡಿಮೆಯಿಲ್ಲ ಎಂದೇ ಹೇಳಬಹುದು.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

Mahindra TUV 300 Plus

ಈ ಕಾರಿನ ಆಗಮನವನ್ನು ಆನಂದ್ ಮಹೀಂದ್ರಾ ಟ್ವೀಟ್ ಮಾಡುವ ಮೂಲಕ ಘೋಷಿಸಿದ್ದರು. ಈ ಕಾರನ್ನು ವಿಶೇಷವಾದ ಬೂದು ಬಣ್ಣದಲ್ಲಿ ಚಿತ್ರಿಸಲು ಆನಂದ್ ಮಹೀಂದ್ರಾ ಬಹಳ ಕಾಲ ಕಾಯಬೇಕಾಯಿತು. ಈ ಕಾರು ಬೂದು ಬಣ್ಣವನ್ನು ಹೊಂದಿರುವುದರಿಂದ ಆನಂದ್ ಮಹೀಂದ್ರಾ ರವರು ಈ ಕಾರ್ ಅನ್ನು ಗ್ರೇ ಘೋಸ್ಟ್ ಎಂದು ಕರೆಯುತ್ತಾರೆ. ಅದರ ಬಣ್ಣದಿಂದಾಗಿ ಈ ಕಾರು ಜನಸಂದಣಿಯಲ್ಲಿ ಎದ್ದು ಕಾಣುತ್ತದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

Mahindra Scorpio

ಆನಂದ್ ಮಹೀಂದ್ರಾ Scorpio ಕಾರಿನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರು. ಸ್ಕಾರ್ಪಿಯೋ ಸರಣಿಯ ಕಾರುಗಳು ಆಫ್ ರೋಡ್ ಪ್ರಿಯರಲ್ಲಿ ಸಾಕಷ್ಟು ಜನಪ್ರಿಯವಾಗಿವೆ. Scorpio ರೋಮಾಂಚಕ ಅನುಭವಕ್ಕೆ ಹೆಸರುವಾಸಿಯಾಗಿದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

Mahindra Alturas G4

ಆನಂದ್ ಇತ್ತೀಚೆಗಷ್ಟೇ Alturas G4 ವಿತರಣೆಯನ್ನು ತೆಗೆದುಕೊಂಡರು. Alturas G4 ಮಹೀಂದ್ರಾ ಕಂಪನಿಯ ದುಬಾರಿ ಕಾರು. ಈ ಕಾರಿನ ವಿತರಣೆಯನ್ನು ಸ್ವೀಕರಿಸಿದ ನಂತರ ಅವರು ತಮ್ಮ ಹೊಸ ಕಾರಿಗೆ ಹೆಸರು ಸೂಚಿಸುವಂತೆ ಟ್ವಿಟರ್ ಖಾತೆಯ ಮೂಲಕ ಮನವಿ ಮಾಡಿದ್ದರು. ಹೆಸರನ್ನು ಸೂಚಿಸಿದ ವ್ಯಕ್ತಿಗೆ ಅವರು ಡೈಕಾಸ್ಟ್ ಮಾದರಿಯನ್ನು ಉಡುಗೊರೆಯಾಗಿ ಘೋಷಿಸಿದರು. ನಂತರ ತಮ್ಮ Alturas G4 ಕಾರಿಗೆ ಬಾಜ್ ಎಂದು ಮರು ನಾಮಕರಣ ಮಾಡಿದರು.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಇನ್ನು ಆನಂದ್ ಮಹೀಂದ್ರಾ ರವರು ಕ್ರೀಡಾ ಪಟುಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಟೋಕಿಯೋ ಒಲಿಂಪಿಕ್ಸ್‌‌ನ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌ ಚೋಪ್ರಾ ರವರಿಗೆ ಆನಂದ್ ಮಹೀಂದ್ರಾ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ XUV 700 ಸ್ಪೆಷಲ್ ಎಡಿಷನ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ರವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಕ್ರಿಡಾಪಟುಗಳಿಗೆ ವಿಶೇಷ ಉಡುಗೊರೆಗಳನ್ನು ಘೋಷಿಸಿದ್ದರು. ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ಹೊಸ ಎಕ್ಸ್‌ಯುವಿ 700 ಎಸ್‌ಯುವಿಯನ್ನು ಕ್ರೀಡಾ ಸಾಧಕರಿಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಒಳಗೊಂಡ ಗೋಲ್ಡ್ ಎಡಿಷನ್ ಆವೃತ್ತಿಯನ್ನು ಅಭಿವೃದ್ದಿ ಪಡಿಸಿ ವಿತರಿಸಲಾಗಿದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯ ಉಡುಗೊರೆ ಪಡೆದ ನಂತರ ನೀರಜ್ ಚೋಪ್ರಾ ರವರು ತಮ್ಮ ಟ್ವಿಟರ್ ಖಾತೆ ಮೂಲಕ ಹೊಸ ಕಾರಿನ ಬಗ್ಗೆ ಮಾಹಿತಿ ನೀಡಿ, ಆನಂದ್ ಮಹೀಂದ್ರಾ ರವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನೀರಜ್ ಚೋಪ್ರಾ ರವರಿಗೆ ನೀಡಲಾದ ಎಕ್ಸ್‌ಯುವಿ 700 ಸ್ಪೆಷಲ್ ಎಡಿಷನ್ ಕಾರು ಹಲವು ಹೊಸ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದೆ. ಸ್ಯಾಟಿನ್ ಚಿನ್ನದ ಲೇಪವನ್ನೂ ಹೊಂದಿರುವ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಚಿನ್ನದ ಲೇಪಿತ ಬ್ಯಾಡ್ಜ್‌ ಹೊಂದಿರುವ ವಿಶೇಷ ಆವೃತ್ತಿಯಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತಹ ತಾಂತ್ರಿಕ ಅಂಶಗಳಿವೆ. ಈ ಹೊಸ ಕಾರಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್‌ಶೋರೂಂ ದರದಂತೆ ರೂ. 11.99 ಲಕ್ಷಗಳಾಗಿದ್ದರೆ, ಹೆಚ್ಚು ಫೀಚರ್ ಹೊಂದಿರುವ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 22.89 ಲಕ್ಷಗಳಾಗಿದೆ.

Most Read Articles

Kannada
English summary
Anand mahindra receives padma bhushan award details
Story first published: Tuesday, November 9, 2021, 10:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X