Video: ಮಹಿಳೆಯ ಜಾಣ್ಮೆಯ ಕಾರು.. ಉದ್ಯೋಗ ನೀಡುತ್ತೇನೆ ಎಂದ ಆನಂದ್ ಮಹೀಂದ್ರಾ, ಭಾರೀ ಮೆಚ್ಚುಗೆ

ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅಲ್ಲಿ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರಿಗೆ ಆಸಕ್ತಿ ಎನಿಸುವ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ, ಮಹಿಳೆಯೊಬ್ಬಳ ಜಾಣ್ಮೆಗೆ ಫಿದಾ ಆಗಿರುವ ಅವರು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಲು ಸಿದ್ದ ಎಂದು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಅವರು, ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ದೇಶದ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಅವರು, ಯಾವಾಗಲು ಮುಂದಿರುತ್ತಾರೆ. ಮಹಿಳೆಯೊಬ್ಬರು, ಯಾವುದೇ ವಸ್ತುಗಳನ್ನು ಬಳಕೆ ಮಾಡದೇ ಕೇವಲ ಸ್ಟೆಪ್ಲರ್ ಪಿನ್​ ಉಪಯೋಗಿಸಿ, ಪುಟ್ಟ ಕಾರನ್ನು ತಯಾರಿಸಿದ್ದಾರೆ. ಇದನ್ನು ಮೆಚ್ಚಿರುವ ಅವರು, ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Video: ಮಹಿಳೆಯ ಜಾಣ್ಮೆಯ ಕಾರು.. ಉದ್ಯೋಗ ನೀಡುತ್ತೇನೆ ಎಂದ ಆನಂದ್ ಮಹೀಂದ್ರಾ, ಭಾರೀ ಮೆಚ್ಚುಗೆ

ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, 'ಕೇವಲ ಸ್ಟೆಪ್ಲರ್ ಪಿನ್​ ಬಳಸಿ, ಕಾರು ತಯಾರಿಸಬೇಕೆಂಬ ಆಯೋಚನೆ ಆ ಮಹಿಳೆಗೆ ಹೇಗೆ ಬಂತು? ಸೃಜನಾತ್ಮಕತೆ ಹಾಗೂ ಬುದ್ದಿವಂತಿಕೆಯನ್ನು ಮೆಚ್ಚಬೇಕು. ನಿಜವಾಗಿಯೂ ಕಾರು ತಯಾರಿಕೆ ಹಾಗೂ ವಿನ್ಯಾಸದಲ್ಲಿ ಆಕೆ ಕೆಲಸ ಮಾಡಬೇಕು. ಆ ಮಹಿಳೆಗೆ ನಮ್ಮ ಕಂಪನಿಯಲ್ಲಿ ಉದ್ಯೋಗ ನೀಡಲು ಸಿದ್ದ' ಎಂದು ಅವರು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಅವರು ಮಾಡಿರುವ ಪೋಸ್ಟ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈವರೆಗೆ 30ರಕ್ಕೂ ಅಧಿಕ ಮಂದಿ ಲೈಕ್ ಮಾಡಿ, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರನೊಬ್ಬ 'ಅದು, ವಿಶೇಷವಾದ ಸ್ಟೆಪ್ಲರ್ ಪಿನ್ ಇರಬಹುದು. ಸಣ್ಣದಾಗಿ ಭಾರ ಹಾಕಿದರೂ ನನ್ನ ಸ್ಟೆಪ್ಲರ್ ಪಿನ್ ಮುರಿಯುತ್ತವೆ' ಎಂದು ಹೇಳಿದ್ದಾರೆ.

ಮತ್ತೊಬ್ಬ ನೆಟ್ಟಿಗರು 'ಬುಕ್ ಪಿನ್ನಿಂಗ್ ಸ್ಟೇಪ್ಲರ್‌ಗಳೊಂದಿಗೆ ಪ್ರಯತ್ನಿಸಿ, ಅದು ಗಟ್ಟಿಮುಟ್ಟಾಗಿರುತ್ತದೆ ಮತ್ತು ದೊಡ್ಡದಾಗಿರುತ್ತದೆ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ, 'ಇದು ತುಂಬಾ ಚೆನ್ನಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಆ ಮಹಿಳೆ ಟೆಸ್ಲಾ ಕಾರಿನ ಡಿಸೈನರ್ ಇರಬಹುದೆಂದು ನಾನು ಭಾವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಇವಿಷ್ಟೇ ಅಲ್ಲದೆ, ಹಲವಾರು ತಮಗೆ ತೋಚಿದ ಕಾಮೆಂಟ್ ಮಾಡಿದ್ದಾರೆ.

ಈ ಹಿಂದೆಯು, ಆನಂದ್ ಮಹೀಂದ್ರಾ ಕ್ರೀಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ತೋರಿದವರಿಗೆ ತಮ್ಮ ಕಂಪನಿ ವಾಹನಗಳನ್ನು ಉಡುಗೊರೆಯಾಗಿ ನೀಡಿರುವ ಎಷ್ಟೋ ನಿದರ್ಶನಗಳನ್ನು ನೋಡಿದ್ದೀವೆ. ಅದರಲ್ಲೂ ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬುವವರೂ ಕಳೆದ ವರ್ಷ ಹಳೆಯ ವಾಹನದ ಬಿಡಿ ಭಾಗಗಳನ್ನು ಉಪಯೋಗಿಸಿಕೊಂಡು 'ಜೀಪ್' ರೆಡಿ ಮಾಡಿದ್ದರು.

ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅವರನ್ನು ಪ್ರೋತ್ಸಾಹಿಸಲು ಆನಂದ್ ಮಹೀಂದ್ರಾ, 'ಬೊಲೆರೋ' ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದು ಮಾತ್ರವಲ್ಲದೆ ಹಲವರಿಗೆ ಅವರು, ತಮಗೆ ತೋಚಿದ ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಸದ್ಯ, ಸ್ಟೆಪ್ಲರ್ ಪಿನ್​ ಉಪಯೋಗಿಸಿ, ಸಣ್ಣ ಕಾರನ್ನು ತಯಾರಿಸಿರುವ ಮಹಿಳೆಗೆ ಉದ್ಯೋಗ ನೀಡುತ್ತೇನೆ ಎಂದು ಆನಂದ್ ಮಹೀಂದ್ರಾ ಹೇಳಿರುವುದನ್ನು ಮೆಚ್ಚಲೇಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Monday, July 10, 2023, 10:17 [IST]
English summary
Anand mahindra share car toy made staples ready to recruit her details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+