Mahindra: 'ನನಗೆ ಪ್ರೇರಣೆ ನೀವು' ಎಂದ ಆನಂದ್ ಮಹೀಂದ್ರಾ: 73ರ ವಯಸ್ಸಲ್ಲಿ ಜೆಸಿಬಿ, ಟ್ರಕ್...

ಜನಪ್ರಿಯ ಕಾರು ತಯರಕಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ(Anand mahindra) ಅವರು, 73 ವರ್ಷದ ಭಾರತೀಯ ವೃದ್ಧೆಯ ಅದ್ಭುತ ಸಾಧನೆಯನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿವಿಧ ರೀತಿಯ ವಾಹನಗಳಿಗೆ ಒಟ್ಟು ಹನ್ನೊಂದು ಚಾಲನಾ ಪರವಾನಗಿಗಳನ್ನು ವೃದ್ದೆ ಪಡೆದುಕೊಂಡಿದ್ದು, ಈ ವಯಸ್ಸಿನಲ್ಲೂ ಅವರ ಉತ್ಸಾವನ್ನು ಮೆಚ್ಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಅವರು, ಉತ್ತೇಜಕ ಕಥೆಗಳು, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುತ್ತಾರೆ. ಇತ್ತೀಚೆಗೆ ಈ ಪ್ರವೃತ್ತಿಯನ್ನು ಮುಂದುವರಿಸುತ್ತಾ, ತಮ್ಮ X (ಟ್ವಿಟರ್)ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಜೀವನದ ಬಗ್ಗೆ ತೃಪ್ತಿಪಡಿಸಲಾಗದ ಹಸಿವು, ತನ್ನ ಹೆಜ್ಜೆಗುರುತನ್ನು ಅಥವಾ ಪಾದವನ್ನು ಸಾಧ್ಯವಾದಷ್ಟು ಪೆಡಲ್‌ಗಳ ಮೇಲೆ ಬಿಡಬೇಕೆಂಬ ಬಯಕೆ, ವಯಸ್ಸು ನಿಜವಾಗಿಯೂ ಆಕೆಗೆ ಕೇವಲ ಒಂದು ಸಂಖ್ಯೆಯಾಗಿದೆ. ಇವರೇ ನನ್ನ ಸೋಮವಾರದ ಪ್ರೇರಣೆ" ಎಂದು 11 ಬಗೆಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ 73 ವರ್ಷದ ಭಾರತೀಯ ಮಹಿಳೆಯ ಬಗ್ಗೆ ಹಾಡಿಹೊಗಳಿದ್ದಾರೆ.

anand-mahindra-shared-73-year-old-woman-with-11-driving-licenses-story

ಯಾರು ಈ ರಾಧಾಮಣಿ?: ಕೇರಳ ಮೂಲದವರಾದ ರಾಧಾಮಣಿ ಅವರು, ಜೆಸಿಬಿ ಮತ್ತು ಕ್ರೇನ್‌ಗಳಂತಹ ಬೃಹತ್ ವಾಹನಗಳನ್ನು ಓಡಿಸುವುದರ ಜೊತೆಗೆ ದೇಶದಲ್ಲಿ ಕಾರುಗಳು ಮತ್ತು ಭಾರಿ ವಾಹನಗಳನ್ನು ಕಾನೂನುಬದ್ಧವಾಗಿ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆ. 2004 ರಲ್ಲಿ ರಾಧಾಮಣಿಯವರ ಪತಿ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ರಾಧಾಮಣಿ ಅವರು ತಮ್ಮ ಕುಟುಂಬದ ಚಾಲನಾ ಶಾಲೆಯನ್ನು (Driving School) ನಿರ್ವಹಿಸುವ ಮೂಲಕ ಕುಟುಂಬವನ್ನು ಮುನ್ನಡೆಸಿದರು.

ಡ್ರೈವಿಂಗ್ ಸ್ಕೂಲ್‌ನ ಓನರ್: ರಾಧಾಮಣಿ ಕೇರಳದ ಕೊಚ್ಚಿಯಲ್ಲಿರುವ A2Z ಡ್ರೈವಿಂಗ್ ಸ್ಕೂಲ್‌ನ ಮಾಲೀಕರಾಗಿದ್ದಾರೆ. ಡ್ರೈವಿಂಗ್ ಸ್ಕೂಲ್ ಅನ್ನು 1970 ರಲ್ಲಿ ಅವರ ಪತಿ ಸ್ಥಾಪಿಸಿದರು. ರಾಧಾಮಣಿ ಅವರು 30 ವರ್ಷದವರಾಗಿದ್ದಾಗ ಮೊದಲು ಕಾರು ಓಡಿಸುವುದನ್ನು ಕಲಿತರು. ಆಕೆಯ ಪತಿಯೇ ಡ್ರೈವಿಂಗ್ ಕಲಿಯಲು ಒತ್ತಾಯಿಸಿದ್ದರಂತೆ. ಪ್ರಸ್ತುತ 11 ವಿವಿಧ ವರ್ಗಗಳ ವಾಹನಗಳನ್ನು ಓಡಿಸಲು ಪರವಾನಗಿಗಳನ್ನು ಹೊಂದಿದ್ದಾರೆ.

anand-mahindra-shared-73-year-old-woman-with-11-driving-licenses-story

ದಿವಂಗತ ಪತಿಯಿಂದ ಪ್ರೇರಿತರಾಗಿ, ಅವರು 1988 ರಲ್ಲಿ ಬಸ್ ಮತ್ತು ಟ್ರಕ್ ಓಡಿಸಲು ತಮ್ಮ ಮೊದಲ ಚಾಲನಾ ಪರವಾನಗಿಗಳನ್ನು ಪಡೆದರು. ಇಲ್ಲಿಗೆ ಅವರ ಪ್ರಯಾಣ ನಿಲ್ಲದೇ 2021 ರಲ್ಲಿ ಅವರು ಅಪಾಯಕಾರಿ ಸರಕುಗಳನ್ನು ಸಾಗಿಸಲು ಕೂಡ ಪರವಾನಗಿಯನ್ನು ಪಡೆದುಕೊಂಡರು. ಅಗೆಯುವ ಯಂತ್ರ, ಫೋರ್ಕ್‌ಲಿಫ್ಟ್, ಕ್ರೇನ್, ರೋಡ್ ರೋಲರ್, ಟ್ರಾಕ್ಟರ್, ಕಂಟೈನರ್ ಟ್ರೈಲರ್ ಟ್ರಕ್, ಬಸ್, ಲಾರಿ ಮತ್ತು ಇನ್ನೂ ಹೆಚ್ಚಿನ ವಾಹನಗಳನ್ನು ಓಡಿಸಲು ಪರವಾನಗಿಯನ್ನು ಹೊಂದಿದ್ದಾರೆ. ಕೇರಳದಲ್ಲಿ ಭಾರೀ ವಾಹನ ಪರವಾನಗಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ರಾಧಾಮಣಿ ಪಾತ್ರರಾಗಿದ್ದಾರೆ.

ರಾಧಾಮಣಿ ಅವರು ಈ ಎಲ್ಲಾ ಭಾರೀ ವಾಹನಗಳು ಮತ್ತು ಕಾರುಗಳನ್ನು ಓಡಿಸಲು ಪರವಾನಗಿ ಹೊಂದಿದ್ದರೂ, ಆಕೆಯ ಅತ್ಯಂತ ನೆಚ್ಚಿನ ವಾಹನವೆಂದರೆ ದ್ವಿಚಕ್ರ ವಾಹನ. ಅವರು 1993 ರಲ್ಲಿ ತಮ್ಮ ದ್ವಿಚಕ್ರ ವಾಹನ ಪರವಾನಗಿಯನ್ನು ಪಡೆದರು. ಅವರು 2020 ರಲ್ಲಿ ಮಾಧ್ಯಮ ಪ್ರಕಟಣೆಗೆ ನೀಡಿದ ಸಂದರ್ಶನದಲ್ಲಿ, ಅವರ ಪತಿ ತನಗಾಗಿ ಸ್ಕೂಟರ್ ಕೊಡಿಸಿದ್ದರು. ಅಂದಿನಿಂದ ಅದೇ ಸ್ಕೂಟರ್‌ನಲ್ಲಿ ಓಡಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಪರವಾನಗಿಗಳನ್ನು ಪಡೆಯಲು ಕಾರಣ ಅವರು 2004 ರಲ್ಲಿ ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ನಂತರ ಡ್ರೈವಿಂಗ್ ಸ್ಕೂಲ್ ವ್ಯವಹಾರವನ್ನು ಸ್ವತಃ ನಡೆಸಬೇಕಾಗಿತ್ತು. ಡ್ರೈವಿಂಗ್ ಸ್ಕೂಲ್ ನಡೆಸಲು, ಮಾಲೀಕರು ಅಥವಾ ಬೋಧಕರು ಅವರು ಕಲಿಸುವ ವಾಹನಗಳಿಗೆ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಭಾರತದಲ್ಲಿ ಚಾಲನಾ ಪರವಾನಗಿಗಳನ್ನು ತೂಕ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಹಲವಾರು ವರ್ಗಗಳಾಗಿ ವರ್ಗೀಕರಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, May 7, 2024, 12:13 [IST]
English summary
Anand mahindra shared 73 year old woman with 11 driving licenses story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+