ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು "ಭಾರತದಲ್ಲಿ ಮಾತ್ರ" ಎಂದ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಮಹೀಂದ್ರಾ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಬಗ್ಗೆ ವಿಷಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರು ಇನ್ನು ಕೆಲವು ಕುತೂಹಲಕಾರಿಯಾದ ವಿಡಿಯೋಗಲು ಅಥವಾ ಚಿತ್ರಗಳನ್ನು ಸಹ ಹಂಚಿಕೊಳ್ಳುತ್ತಾರೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಅವರು ಇತ್ತೀಚೆಗೆ ವಿಭಿನ್ನವಾಗಿ ಅಲಂಕರಿಸಿರುವ ಬಜಾಜ್ ಚೇತಕ್ ಸ್ಕೂಟರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಟ್ವಿಟ್ಟರ್ ನಲ್ಲಿ ವಿಡಿಯೋ ಜೊತೆ "ಜೀವನವು ನೀವು ಬಯಸಿದಷ್ಟು ವರ್ಣರಂಜಿತ ಮತ್ತು ಮನರಂಜನೆಯನ್ನು ನೀಡಬಹುದು... #OnlyIndia (ಭಾರತದಲ್ಲಿ ಮಾತ್ರ) ಎಂದು ಬರೆದುಕೊಂಡಿದ್ದಾರೆ. ವೀಡಿಯೊದಲ್ಲಿ ಸ್ಕೂಟರ್ ಅನ್ನು ನೋಡಬಹುದು. ಇದು ಸ್ಕ್ರೀನ್ ಅನ್ನು ಸಹ ಹೊಂದಿದೆ, ಅದರ ಮೇಲೆ ನಾವು ಹಳೆಯ ಹಾಡಿನ ವೀಡಿಯೊ ಹಾಡನ್ನು ಪ್ಲೇ ಮಾಡುವುದನ್ನು ನೋಡಬಹುದು. ಈ ಸ್ಕೂಟರ್‌ನಲ್ಲಿ ಸ್ಪೀಕರ್‌ಗಳನ್ನು ಕೂಡ ಅಳವಡಿಸಿದ್ದಾರೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಸ್ಕೂಟರ್‌ನ ಸ್ಟೋರೇಜ್ ಸ್ಪೇಸ್ ನಲ್ಲಿ ಕ್ಲಾಕ್ ಅನ್ನು ಸಹ ಇರಿಸಲಾಗಿದೆ. ಸ್ಕೂಟರ್ ಮಾರ್ಪಡಿಸಿದ ಬಜಾಜ್ ಚೇತಕ್ ಎಂದು ತೋರುತ್ತದೆ. ಪೆಟ್ರೋಲ್ ಪಂಪ್‌ನಲ್ಲಿ ಸ್ಕೂಟರ್ ಪತ್ತೆಯಾಗಿದೆ. ಸ್ಕೂಟರ್ ಸ್ಕ್ರೀನ್ ಮೇಲೆ 'ಚುಪ್ ಗಯೇ ಸಾರೆ ನಜರೆ' ಎಂಬ ಹಾಡು ಪ್ಲೇ ಆಗುತ್ತಿದೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಇದು ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿರುವ ಮೂಲ ಚೇತಕ್ ಆಗಿದೆ. ಈ ಸ್ಕೂಟರ್ ಅನ್ನು ಲೈಟಿಂಗ್ಸ್ ಅನ್ನು ಅಳವಡಿಸಿ ವರ್ಣರಂಜಿತವಾಗಿದೆ. ಕಲರ್ ಫುಲ್ ಲೈಟಿಂಗ್ಸ್ ಜೊತೆ ವಿಭಿನ್ನ ರೀತಿಯ ಶೃಂಗಾರವನ್ನು ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಹಲವಾರು ಜನರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ಸ್ಕೂಟರ್ ಶೃಂಗಾರವು ನೋಡುಗರ ಗಮನಸೆಳೆಯುವಂತಿದೆ. ಕೆಲವು ಜನರು ಹೊಸ ಗ್ರಾಫಿಕ್ಸ್ ಮತ್ತು ಆಫ್ಟರ್ ಮಾರ್ಕೆಟ್ ಮಾಡಿಫೈಟ್ ಪಾರ್ಟ್ಸ್ ಮೂಲಕ ತಮ್ಮ ವಾಹನವನ್ನು ಮಾಡಿಫೈಗೊಳಿಸುತ್ತಾರೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಆದರೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಮಹಿಳೆಯರು ಧರಿಸುವ ಆಭರಣಗಳಿಂದ ತಮ್ಮ ವಾಹನವನ್ನು ಅಲಂಕರಿಸಿದ್ದಾರೆ.ಹೀಗಾಗಿ ವಾಹನಗಳನ್ನು ಅಲಂಕರಿಸುವುದು ಕಾನೂನಿನ ಪ್ರಕಾರ ಅಪರಾಧ. ಭಾರತೀಯ ಮೋಟಾರು ವಾಹನ ಕಾಯಿದೆಯು ಈ ರೀತಿಯ ಚಟುವಟಿಕೆಯನ್ನು ಅನುಮತಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಈ ಹಿಂದೆಯೂ ಭಾರತದಲ್ಲಿ ಮೂಲ ಸ್ವರೂಪ ಕಳೆದುಕೊಂಡಿರುವ ಮಾರ್ಪಾಡು ಮಾಡಿದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ ಘಟನೆಗಳು ನಡೆದಿವೆ. ಈ ವಿಡಿಯೋ ಭಾರೀ ವೈರಲ್ ಆಗಿರುವುದರಿಂದ ಇವರಿಗೆ ದಂಡ ಬೀಳುವ ಸಾಧ್ಯತೆಗಳು ಕೂಡ ಇದೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

80ರ ದಶಕದಲ್ಲಿ ಭಾರತದಲ್ಲೇ ಸದ್ದು ಮಾಡಿದ ಹಮಾರಾ ಬಜಾಜ್ ಬಳಿಕ ಸ್ಥಗಿತಗೊಂಡಿತು. ಬಜಾಜ್ ಬೈಕ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿತು. ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಕಳೆದ ವರ್ಷ ಬಜಾಜ್ ಕಂಪನಿಯು ಬಿಡುಗಡೆಗೊಳಿಸಿದ್ದರು.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಈ ಐಕಾನಿಕ್ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸುವ ಪ್ರಯತ್ನವನ್ನು ಬಜಾಜ್ ಕಂಪನಿಯು ಮಾಡಿತು. ಆದರೆ ಆರಂಭಿಕ ಹಂತದಿಂದಲ್ಲೇ ಬಜಾಜ್ ಕಂಪನಿಯು ಹಲವಾರು ವಿಘ್ನಗಳನ್ನು ಎದುರಿಸಬೇಕಾಯಿತು.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದ ಬಗ್ಗೆ ಹಲವರು ಟೀಕೆಯನ್ನು ಮಾಡಿದರು. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿದ್ದರು. ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಮೊದಲ ತಿಂಗಳಲ್ಲಿ ಕೇವಲ 21 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದ್ದರು. ನಂತರ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಕೂಡ ಹೊಂದಿದೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ನಿಧಾನವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಆದರೆ ಮಾರಾಟದಲ್ಲಿ ಒಂದು ಸಾವಿರ ಗಡಿಯನ್ನು ದಾಟಲು ಹಲವು ತಿಂಗಳನ್ನು ತೆಗೆದುಕೊಂಡಿದೆ.

ಮ್ಯೂಸಿಕಲ್ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹಳೆಯ ಸ್ಕೂಟರ್ ಅನ್ನು ವಿಭಿನ್ನವಾಗಿ ಅಲಂಕಾರಿಸುವುದು ಕಾಣಲು ಆಕರ್ಷಕವಾಗಿದೆ. ಆದರೆ ವಾಹನಗಳನ್ನು ಅಲಂಕರಿಸುವುದು ಕಾನೂನಿನ ಪ್ರಕಾರ ಅಪರಾಧ. ಭಾರತೀಯ ಮೋಟಾರು ವಾಹನ ಕಾಯಿದೆಯು ಈ ರೀತಿಯ ಚಟುವಟಿಕೆಯನ್ನು ಅನುಮತಿಸುವುದಿಲ್ಲ ಎಂಬುದು ಗಮನಾರ್ಹವಾದ ಅಂಶವಾಗಿದೆ.

Most Read Articles

Kannada
English summary
Anand mahindra shared video of a musical bajaj chetak scooter details
Story first published: Friday, June 24, 2022, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X