ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಭಾರತವು ಕರೋನಾ ವೈರಸ್ ಕಾರಣದಿಂದಾಗಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಜನರಿಗೆ ಭರವಸೆ ಮೂಡಿಸುವ ಸಲುವಾಗಿ ಉದ್ಯಮಿ ಆನಂದ್ ಮಹೀಂದ್ರಾರವರು ವೀಡಿಯೊವೊಂದನ್ನು ಶೇರ್ ಮಾಡಿದ್ದು, ಅದಕ್ಕೆ ಧೈರ್ಯದ ವ್ಯಾಖ್ಯಾನವನ್ನು ನೀಡಿದ್ದಾರೆ. ಕರೋನಾ ವೈರಸ್‌ಗೂ ಈ ವೀಡಿಯೊಗೂ ಸಂಬಂಧವಿಲ್ಲದಿದ್ದರೂ ವೀಡಿಯೊ ಸ್ಪೂರ್ತಿದಾಯಕವಾಗಿರುವುದಂತೂ ನಿಜ.

ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಹಲವು ದಿನಗಳ ಹಿಂದೆ ಕೈಗಳಿಲ್ಲದಿದ್ದರೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಕೇರಳ ಮೂಲದ ಈ ಮಹಿಳೆಯ ಬಗ್ಗೆ ಹೇಳಲಾಗಿತ್ತು. ದಿವ್ಯಾಂಗರಾದರೂ ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ ಈಕೆ. ಇವರು ತಮ್ಮ ಕಾಲುಗಳಿಂದ ಕಾರನ್ನು ಚಾಲನೆ ಮಾಡುತ್ತಾರೆ.

ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಹುಟ್ಟಿದಾಗಿನಿಂದಲೂ ಎರಡೂ ಕೈಗಳನ್ನು ಹೊಂದಿರದ 28 ವರ್ಷದ ಜಿಲುಮೋಲ್ ಮೆರಿಯಟ್ ಥಾಮಸ್ ಎಂಬುವವರೇ ಈ ದಿಟ್ಟ ಮಹಿಳೆ. ಜಿಲುಮೋಲ್‌ರವರು ಥಾಲಿಡೋಮೈಡ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಈಗ ಜಿಲುಮೋಲ್ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಜಿಲುಮೋಲ್ ಕೇರಳದ ತೊಡುಪುಳ ಬಳಿಯ ಕರಿಮಾನೂರು ಗ್ರಾಮಕ್ಕೆ ಸೇರಿದವರು. ಬಾಲ್ಯದಿಂದಲೂ, ಅವರು ತಮ್ಮ ಕಾರನ್ನು ತಮ್ಮ ಕಾಲುಗಳಿಂದಲೇ ಚಾಲನೆ ಮಾಡುತ್ತಿದ್ದಾರೆ. ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ಸಂಚರಿಸುತ್ತಾರೆ. ಕಾರ್ ಅನ್ನು ಸುಲಭವಾಗಿಯೇ ಕಂಟ್ರೋಲ್ ಮಾಡುತ್ತಾರೆ.

ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಈ ವೀಡಿಯೊ ಬಗ್ಗೆ ಮಾತನಾಡಿರುವ ಆನಂದ್ ಮಹೀಂದ್ರಾರವರು, ಈ ವೀಡಿಯೊ ನೋಡಿದ ನಂತರ ಧೈರ್ಯ ಎಂಬ ಪದದ ಅರ್ಥವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡೆ. ಈ ವೀಡಿಯೊ ಕೋವಿಡ್‌ 19ನೊಂದಿಗೆ ಸಂಬಂಧ ಹೊಂದಿಲ್ಲವಾದರೂ ಬಿಕ್ಕಟ್ಟಿನ ಸಮಯದಲ್ಲಿ ನಮಗೆ ನಂಬಿಕೆಯನ್ನು ನೀಡುತ್ತದೆ. ನಾವು ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ಜಯಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಜಿಲುಮೋಲ್ ಅವರು 2014ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್‌ಟಿಒದಲ್ಲಿ ಅರ್ಜಿ ಸಲ್ಲಿಸಿದ್ದರು. ಆರ್‌ಟಿಒ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಕಾರಣ ಅವರು 2018ರಲ್ಲಿ ಹೈಕೋರ್ಟ್‌ ಮೊರೆ ಹೋದರು. ಹೈಕೋರ್ಟ್ ಆದೇಶದ ನಂತರ ಕೇಂದ್ರ ಸರ್ಕಾರವು ಅವರಿಗೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅನುಮತಿ ನೀಡಿತು. ಈಗ ಅವರಿಗೆ ಲರ್ನರ್ ಲೈಸೆನ್ಸ್ ನೀಡಲಾಗಿದೆ.

ಈಗ ಕೇರಳ ಸರ್ಕಾರವು ಜಿಲುಮೋಲ್‌ರವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಿದೆಯೋ ಇಲ್ಲವೋ ಕಾದುನೋಡಬೇಕಿದೆ. ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ವೇಳೆ ಅಧಿಕಾರಿಗಳಿಗೆ ಕೆಲವು ಅನುಮಾನಗಳು ಮೂಡಿದ್ದು, ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾಲುಗಳಲ್ಲಿ ಕಾರು ಡ್ರೈವಿಂಗ್: ಮಹಿಳೆಯ ದಿಟ್ಟತನಕ್ಕೆ ಬಹುಪರಾಕ್ ಹೇಳಿದ ಆನಂದ್ ಮಹೀಂದ್ರಾ

ಈ ಹಿಂದೆ ಎರಡೂ ಕೈಗಳಿಲ್ಲದ ವಿಕ್ರಮ್ ಅಗ್ನಿಹೋತ್ರಿ ಎಂಬುವವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗಿತ್ತು. ಈ ಇಬ್ಬರೂ ದಿವ್ಯಾಂಗರ ಕಥೆ ನಿಜವಾಗಿಯೂ ಇತರರಿಗೆ ಸ್ಫೂರ್ತಿ ನೀಡುತ್ತದೆ.

ಚಿತ್ರಕೃಪೆ : ಜಿಲುಮೋಲ್ ಮೆರಿಯೆಟ್ ಥಾಮಸ್

Most Read Articles

Kannada
English summary
Anand Mahindra shares inspiring video of Kerala woman driving without hands. Read in Kannada.
Story first published: Monday, June 1, 2020, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X