ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ನಮ್ಮ ದೇಶದಲ್ಲಿ ವಿಭಿನ್ನ ಕೌಶಲ್ಯಗಳನ್ನು ತೋರುವ ಪ್ರತಿಭೆಗಳಿಗೆ ಬರವಿಲ್ಲ. ಈ ಪ್ರತಿಭೆಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ವೀಡಿಯೊಗಳನ್ನು ಆನಂದ್ ಮಹೀಂದ್ರಾರವರು ತಮ್ಮ ಟ್ವಿಟರ್ ಖಾತೆಯ ಮೂಲಕ ಶೇರ್ ಮಾಡುತ್ತಲೇ ಇರುತ್ತಾರೆ.

ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈಗ ಆನಂದ್ ಮಹೀಂದ್ರಾರವರು ಮತ್ತೊಂದು ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಸ್ಟಾಂಡ್ ಹಾಕಿರುವ ಬೈಕ್ ಅನ್ನು ಸ್ಟಾರ್ಟ್ ಮಾಡಿ ಆ ಬೈಕಿನ ಟಯರ್ ಗಳ ಸಹಾಯದಿಂದ ಜೋಳದ ಕಾಳುಗಳನ್ನು ತೆಗೆದುಹಾಕಲಾಗುತ್ತಿದೆ. ಈ ವೀಡಿಯೊ ಆನಂದ್ ಮಹೀಂದ್ರಾರವರ ಗಮನ ಸೆಳೆದಿದೆ. ಆನಂದ್ ಮಹೀಂದ್ರಾರವರು ಈ ವೀಡಿಯೊ ಶೇರ್ ಮಾಡುವುದರ ಜೊತೆಗೆ ಟಯರ್ ಕಂಪನಿಗೂ ಸಲಹೆ ನೀಡಿದ್ದಾರೆ.

ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈ ವೀಡಿಯೊದಲ್ಲಿ ಸ್ಟಾಂಡ್ ಹಾಕಿ ನಿಲ್ಲಿಸಲಾಗಿರುವ ಬೈಕ್ ಅನ್ನು ಕಾಣಬಹುದು. ಟಯರ್‌ಗಳು ಜೋಳಕ್ಕೆ ಅಪ್ಪಳಿಸುತ್ತಿದ್ದಂತೆ ಜೋಳದ ಕಾಳುಗಳು ಕೆಳಗೆ ಹಾಸಿರುವ ಬಟ್ಟೆಗಳ ಮೇಲೆ ಬೀಳುತ್ತವೆ. ಜೋಳದ ಕಾಳುಗಳನ್ನು ಬೇರ್ಪಡಿಸಲು ಬಜಾಜ್ ಡಿಸ್ಕವರ್ ಬೈಕ್ ಬಳಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾರವರು, ರೈತರು ಬೈಕ್ ಹಾಗು ಟ್ರಾಕ್ಟರುಗಳನ್ನು ಮಲ್ಟಿ ಟಾಸ್ಕಿಂಗ್ ಕಾರ್ಯಗಳಿಗೆ ಬಳಸುತ್ತಿರುವ ವೀಡಿಯೊಗಳನ್ನು ಹೆಚ್ಚು ವೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಈ ವೀಡಿಯೊದಲ್ಲಿರುವಂತೆ ಬೈಕ್ ಅನ್ನು ಕೃಷಿಗೆ ಸಂಬಂಧಿಸಿದ ಇತರ ಕಾರ್ಯಗಳಿಗೂ ಬಳಸಲಾಗುತ್ತದೆ.

ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಇದನ್ನು ಊಹಿಸಲೂ ಸಾಧ್ಯವೇ ಇಲ್ಲ ಎಂದು ಹೇಳಿರುವ ಅವರು ಕಾಂಟಿನೆಂಟಲ್ ಟಯರ್ ಕಂಪನಿಯನ್ನು ಟ್ಯಾಗ್ ಮಾಡಿದ್ದಾರೆ. ಕಾಂಟಿನೆಂಟಲ್ ಟಯರ್ ಕಂಪನಿಯು ಕಾಂಟಿನೆಂಟಲ್ ಹೆಸರಿನ ಮತ್ತೊಂದು ಕಂಪನಿಯನ್ನು ತೆರೆಯಬೇಕು ಎಂದು ಹೇಳಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈ ವೀಡಿಯೊದಲ್ಲಿ ಬೈಕ್‌ ಟಯರ್ ಮೂಲಕ ಜೋಳದ ಕಾಳುಗಳನ್ನು ಬೇರ್ಪಡಿಸುತ್ತಿರುವ ತಂತ್ರವು ಸುಲಭವಾಗಿ ಕಾಣುತ್ತದೆ. ಆದರೆ ಕೆಲವೊಮ್ಮೆ ಈ ತಂತ್ರವು ಅಪಾಯಕಾರಿಯಾಗಬಲ್ಲದು. ಈ ತಂತ್ರವನ್ನು ಅನುಸರಿಸುವಾಗ ಜನರು ತಮ್ಮ ಕೈಗಳ ಬಗ್ಗೆ ಜಾಗ್ರತೆ ವಹಿಸುವುದು ಮುಖ್ಯ.

ಇತ್ತೀಚೆಗಷ್ಟೇ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಸ್ಕೂಟರ್ ನಂತಹ ಸೈಕಲ್ ನಿರ್ಮಿಸಿದ್ದ ಬಗ್ಗೆ ವರದಿಯಾಗಿತ್ತು. ಹರ್ಮನ್‌ಜೋಟ್‌ ಎಂಬ ವಿದ್ಯಾರ್ಥಿ ನಿರ್ಮಿಸಿದ್ದ ಈ ದ್ವಿಚಕ್ರ ವಾಹನವು ಮುಂಭಾಗದಿಂದ ಸ್ಕೂಟರ್‌ನಂತೆ ಕಾಣುತ್ತದೆ. ಸ್ಕೂಟರ್‌ನ ಮುಂಭಾಗವನ್ನು ಈ ಸೈಕಲ್ ನ ಮುಂಭಾಗದಲ್ಲಿ ಅಳವಡಿಸಲಾಗಿದೆ. ಈ ಸ್ಕೂಟರ್ ಸೈಕಲ್ ಅನ್ನು ಸಾಮಾನ್ಯ ಸೈಕಲ್ ರೀತಿಯಲ್ಲಿ ಪೆಡಲ್ ಮೂಲಕ ತುಳಿಯಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮೆಕ್ಕೆ ಜೋಳ ಬೇರ್ಪಡಿಸುವ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರು ಕೆಲ ದಿನಗಳ ಹಿಂದೆ ಹೋಂಡಾ ಕಂಪನಿಯ ಜನರೇಟರ್ ಮೂಲಕ ಕಾರು ಚಾರ್ಜ್ ಮಾಡಿದ ಟೆಸ್ಲಾ ಕಾರು ಮಾಲೀಕರನ್ನು ಶ್ಲಾಘಿಸಿ ಅದರ ವೀಡಿಯೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು.

Most Read Articles

Kannada
English summary
Anand Mahindra shares video of bike used for farming corn. Read in Kannada.
Story first published: Saturday, August 29, 2020, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X