ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ದೇಶಾದ್ಯಂತ ಲಾಕ್‌ಡೌನ್‌ಗಳನ್ನು ಹಂತ ಹಂತವಾಗಿ ಸಡಿಲಿಸಲಾಗುತ್ತಿದ್ದು, ಸಾರಿಗೆ ಸೇವೆಗಳು ನಿಧಾನವಾಗಿ ಪುನರಾರಂಭಗೊಳ್ಳುತ್ತಿವೆ. ಇದೇ ವೇಳೆ ಮಾರ್ಚ್‌ ತಿಂಗಳಿನಿಂದ ಸ್ಥಗಿತಗೊಂಡಿದ್ದ ಮುಂಬೈನ ರೋರೋ ಫೆರ್ರಿ ಸೇವೆಯನ್ನು ಪುನರಾರಂಭಿಸಲಾಗಿದೆ.

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಈ ಐಷಾರಾಮಿ ರೋರೋ ಫೆರ್ರಿಯ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ಐಷಾರಾಮಿ ರೋರೋ ಫೆರ್ರಿ ಮುಂಬಯಿನಿಂದ ಮಾಂಡ್ವಾಕ್ಕೆ ಚಲಿಸುತ್ತದೆ. ಇದನ್ನು ಆಗಸ್ಟ್ 20ರಿಂದ ಪುನರಾರಂಭಿಸಲಾಗಿದೆ. ಆನಂದ್ ಮಹೀಂದ್ರಾ ರೋರೋ ಫೆರ್ರಿಯಲ್ಲಿ ಹೋಗುತ್ತಿರುವ ಕಾರುಗಳ ಚಿತ್ರಗಳನ್ನು ಸಹ ಶೇರ್ ಮಾಡಿದ್ದಾರೆ. ಈ ರೋರೋ ಫೆರ್ರಿಯಿಂದ ಪ್ರಭಾವಿತರಾಗಿರುವ ಅವರು ಅದರ ಲಭ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ.

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಆನಂದ್ ಮಹೀಂದ್ರಾರವರು ಈ ಐಷಾರಾಮಿ ರೋರೋ ಫೆರ್ರಿಯಲ್ಲಿ ಪ್ರಯಾಣಿಸುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ಕರೋನಾ ಆರ್ಭಟ ನಿಲ್ಲುವವರೆಗೂ ಕಾಯಲಿದ್ದಾರೆ. ಈ ರೋರೋ ಫೆರ್ರಿ 145 ಕಾರು ಹಾಗೂ 500 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ರೋರೊ ಫೆರ್ರಿ ಎಂದರೆ ರೋಲ್ ಆನ್ ರೋಲ್ ಆಫ್. ಇದರಲ್ಲಿ ಜನರು ತಮ್ಮ ಕಾರು, ಬೈಕು ಹಾಗೂ ತಮ್ಮ ಯಾವುದೇ ವಾಹನದೊಂದಿಗೆ ಸಮುದ್ರದಲ್ಲಿ ಪ್ರಯಾಣಿಸಬಹುದು. ಈ ದೋಣಿ ಸೇವೆಯನ್ನು ನೀಡುತ್ತಿರುವ ಎಂ 2 ಎಂ ಕಂಪನಿಯು ತನ್ನ ಪ್ರಯಾಣದ ವೇಳಾಪಟ್ಟಿಯನ್ನು ಸೆಪ್ಟೆಂಬರ್ 4ರವರೆಗೆ ಬಿಡುಗಡೆಗೊಳಿಸಿದೆ.

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಈ ಬಗ್ಗೆ ಮಾತನಾಡಿರುವ ಆನಂದ್ ಮಹೀಂದ್ರಾರವರು ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಮಾಂಡ್ವಾ ನಡುವೆ ಸಂಚರಿಸುವ ಈ ರೋರೋ ಫೆರ್ರಿಯ ವೀಡಿಯೊವನ್ನು ನೋಡಿದ್ದೇನೆ. ಇದರಲ್ಲಿ ಬಹಳ ಹಿಂದೆಯೇ ಸಂಚರಿಸಬೇಕಿತ್ತು. ಕೋವಿಡ್ 19 ಕಡಿಮೆಯಾದ ನಂತರ ಈ ರೋರೋ ಫೆರ್ರಿಯ ಅನುಭವವನ್ನು ಪಡೆಯುತ್ತೇನೆ ಎಂದು ಹೇಳಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಆನಂದ್ ಮಹೀಂದ್ರಾರವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯು ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು. ನಾವು ನೀವು ಬರುವುದನ್ನು ಕಾಯುತ್ತಿದ್ದೇವೆ. ಎಂ 2 ಎಂ ಕಂಪನಿಯು ಫೆರ್ರಿಯಲ್ಲಿ ಹಲವು ಅನುಕೂಲತೆ, ಸುರಕ್ಷತೆಗಳನ್ನು ಒದಗಿಸುತ್ತದೆ ಎಂದು ಹೇಳಿದೆ.

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಫೋಟೋಗಳಲ್ಲಿ ನೋಡುವಂತೆ ಫೆರ್ರಿಯಲ್ಲಿ ಜನರು ತಮ್ಮ ಜೊತೆಗೆ ಕಾರು ಹಾಗೂ ಬೈಕುಗಳನ್ನು ತೆಗೆದುಕೊಂಡು ಹೋಗಬಹುದು. ಅವುಗಳನ್ನು ಫೆರ್ರಿಯಲ್ಲಿ ಸುಲಭವಾಗಿ ತೆಗೆದುಕೊಂಡು ಹೋಗಿ, ಸುಲಭವಾಗಿ ಹಿಂದಕ್ಕೆ ಪಡೆಯಬಹುದು. ಇದು ಮುಂಬೈನಲ್ಲಿರುವ ವಿಶಿಷ್ಟ ರೀತಿಯ ಸೌಲಭ್ಯವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಮಹೀಂದ್ರಾ ಕಂಪನಿಯು ಇತ್ತೀಚಿಗಷ್ಟೇ ತನ್ನ ಹೊಸ ಥಾರ್ ಎಸ್ ಯುವಿಯನ್ನು ಅನಾವರಣಗೊಳಿಸಿತ್ತು. ಈ ಎಸ್ ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಕ್ರೇಜ್ ಸೃಷ್ಟಿಸಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಎಸ್ ಯುವಿಯ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

ಸಮುದ್ರಯಾನಕ್ಕೆ ಜನರ ಜೊತೆಗೆ ಜನರ ವಾಹನಗಳನ್ನು ಕೊಂಡೊಯ್ಯುತ್ತದೆ ಈ ವಿಶಿಷ್ಟ ರೋರೋ ಫೆರ್ರಿ

ಟ್ವೀಟರ್ ನಲ್ಲಿ ಆನಂದ್ ಮಹೀಂದ್ರಾರವರನ್ನು ಶೋಲೆ ಚಿತ್ರದ ಠಾಕೂರ್‌ ಪಾತ್ರದಲ್ಲಿ ಚಿತ್ರಿಸಲಾಗಿತ್ತು. ಗಬ್ಬರ್ ಸಿಂಗ್ ಠಾಕೂರ್ ಗೆ ಈ ಥಾರ್ ನನಗೆ ಬೇಕು ಠಾಕೂರ್ ಎಂದು ಹೇಳುತ್ತಿರುವ ರೀತಿಯಲ್ಲಿ ಚಿತ್ರಿಸಲಾಗಿತ್ತು.

Most Read Articles

Kannada
English summary
Anand Mahindra tweets about Mumbai roro ferry service wants to travel in that. Read in Kannada.
Story first published: Friday, August 28, 2020, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X