ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಹೊಸ ಸ್ಕಾರ್ಪಿಯೋ-ಎನ್ ಕಾರಿಗೆ ಒಳ್ಳೆಯ ಹೆಸರು ಸೂಚಿಸುವಂತೆ ಟ್ವಿಟ್ಟರ್‌ನಲ್ಲಿ ಕೇಳಿದ್ದರು. ಈ ಟ್ವೀಟ್‌ಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಹಲವು ಹೆಸರುಗಳನ್ನು ಸೂಚಿಸಿದ್ದರು. ಇವುಗಳಲ್ಲಿ ಎರಡನ್ನು ಆಯ್ಕೆ ಮಾಡಿಕೊಂಡಿರುವ ಅವರು ಮತ್ತೆ ಅಭಿಮಾನಿಗಳನ್ನು ಆಶ್ರಿಯಿಸಿದ್ದಾರೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಹೊಸ ಸ್ಕಾರ್ಪಿಯೋ-ಎನ್‌ ಕಾರಿಗೆ ಸಾವಿರಾರು ಹೆಸರುಗಳು ಹರಿದುಬಂದಿದ್ದವು, ಇದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಬಂದಿರುವ ಹಲವು ಹೆಸರುಗಳಲ್ಲಿ ಭೀಮ್ ಹಾಗೂ ಬಿಚ್ಚೂ ಎಂಬ ಎರಡು ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಈ ಎರಡು ಹೆಸರುಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಈ ಟ್ವೀಟ್‌ಗೆ ಈಗಾಗಲೇ 25 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ವಿಶೇಷವೇನೆಂದರೆ ಇಲ್ಲಿ ಹಲವರು ಭೀಮ್ ಎಂಬ ಹೆಸರನ್ನು ಆಯ್ಕೆ ಮಾಡಿದ್ದಾರೆ. ಭೀಮ್ ಇಸ್ ಸಿಂಬಲ್ ಆಫ್ ಕಿಂಗ್ ಹಾಗೂ ಸ್ಕಾರ್ಪಿಯೋಗೆ ಅದೇ ಹೆಸರು ಸೂಕ್ತವಾಗಿದೆ. ಈ ಹೆಸರಿನಲ್ಲಿ ಕರಿಯುವುದು ಕೂಡ ತುಂಬ ಸುಲಭವಾಗಿರುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಇತ್ತೀಚೆಗೆ ಡೆಲಿವರಿ ಪಡೆದಿದ್ದ ಆನಂದ್ ಮಹೀಂದ್ರಾ

ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ವಿತರಣೆಯನ್ನು ಇತ್ತೀಚೆಗೆ ಪಡೆದುಕೊಂಡಿದ್ದರು. ಅವರು ಕೆಂಪು ಬಣ್ಣದ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದು, ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ವಿತರಣೆ ಪಡೆಯುವ ಚಿತ್ರಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ತಮ್ಮ ಸ್ಕಾರ್ಪಿಯೋ-ಎನ್‌ಗೆ ಸೂಕ್ತವಾದ ಹೆಸರನ್ನು ಸೂಚಿಸಲು ಆಹ್ವಾನಿಸಿದ್ದರು.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಆನಂದ್ ಮಹೀಂದ್ರಾ ಅವರು ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಯಾವ ವೆರಿಯೆಂಟ್ ಅನ್ನು ಆಯ್ಕೆ ಮಾಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಫೋರ್ ವೀಲ್ ಡ್ರೈವ್ ಲೇಔಟ್‌ನೊಂದಿಗೆ ಸಂಪೂರ್ಣ-ಲೋಡ್ ಮಾಡಲಾದ ಟಾಪ್-ಎಂಡ್ ಡೀಸೆಲ್ ಆಟೋಮ್ಯಾಟಿಕ್ ಟ್ರಿಮ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಹಲವು ಮಹೀಂದ್ರಾ ಕಾರುಗಳನ್ನು ಹೊಂದಿದ್ದಾರೆ

ಆನಂದ್ ಮಹೀಂದ್ರಾ ಅವರ ಕಾರು ಸಂಗ್ರಹದಲ್ಲಿ ಟಾಪ್-ಆಫ್-ಲೈನ್ ಅಲ್ಟುರಾಸ್ ಐಷಾರಾಮಿ ಎಸ್‍ಯುವಿ ಮತ್ತು ಟಿಯುವಿ300 ಪ್ಲಸ್ ಮಲ್ಟಿ-ಯುಟಿಲಿಟಿ ವೆಹಿಕಲ್ ಕೂಡ ಇವೆ. ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಬೊಲೆರೊ ಇನ್‌ವೇಡರ್ ಲೈಫ್‌ಸ್ಟೈಲ್ ಎಸ್‌ಯುವಿ, ಟಿಯುವಿ300 ಸಬ್-4 ಮೀಟರ್ ಎಸ್‌ಯುವಿ ಮತ್ತು ಮೊದಲ ತಲೆಮಾರಿನ ಸ್ಕಾರ್ಪಿಯೊ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಸ್ಕಾರ್ಪಿಯೋ-ಎನ್ ವಿಶೇಷತೆಗಳು

ಈ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಮಾದರಿಗೆ ಈಗಾಗಲೇ 1 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕಿಂಗ್ ದಾಖಲಾಗಿದೆ. ಈ ಹೊಸ ಎಸ್‍ಯುವಿ ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಈ ಸ್ಕಾರ್ಪಿಯೋ-ಎನ್ ಮಾದರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಲಭ್ಯವಿವೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಮತ್ತು 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಪೆಟ್ರೋಲ್ ಮ್ಯಾನುವಲ್ ಮಾದರಿಯು 203 ಬಿಹೆಚ್‍ಪಿ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಆಟೋಮ್ಯಾಟಿಕ್ ಮಾದರಿಯು 203 ಬಿಹೆಚ್‍ಪಿ ಮತ್ತು 380 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ ಡೀಸೆಲ್ ಆರಂಭಿಕ ಮಾದರಿಯು ಮ್ಯಾನುವಲ್ ಆಯ್ಕೆಯೊಂದಿಗೆ 132 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಇನ್ನು ಹೈ ಎಂಡ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಯೊಂದಿಗೆ 175 ಬಿಹೆಚ್‍ಪಿ ಪವರ್ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ. ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಈ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್‌ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಸಹ ಹೊಂದಿದೆ. ಜೊತೆಗೆ ಹೊಸ ಸ್ಕಾರ್ಪಿಯೋ-ಎನ್‌ನಲ್ಲಿ ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್‌ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಇನ್ನು ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಮೆಟಲ್-ಫಿನಿಶ್ಡ್ ಡ್ಯುಯಲ್ ರೈಲ್‌ಗಳೊಂದಿಗೆ ಆಕರ್ಷಕವಾದ ಸೆಂಟರ್ ಕನ್ಸೋಲ್‌ ಗಮನಸೆಳೆಯಲಿದ್ದು, ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನಗಳನ್ನು ಸಹ ಒಳಗೊಂಡಿವೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಇದರೊಂದಿಗೆ ಹೊಸ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3ಡಿ ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ.

ಆನಂದ್ ಮಹೀಂದ್ರಾ ಅವರ ಹೊಸ ಕಾರಿಗೆ ಕನ್ಫರ್ಮ್ ಆಯ್ತು RRR ಸಿನಿಮಾದ ಈ ನಟನ ಹೆಸರು!

ಜೊತೆಗೆ ಹೊಸ ಕಾರಿನಲ್ಲಿ ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಹವಾಮಾನ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳು ಮತ್ತು ಸ್ಮಾರ್ಟ್‌ಫೋನ್‌ಗಾಗಿ ವೈರ್‌ಲೆಸ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Monday, October 10, 2022, 11:00 [IST]
English summary
Anand Mahindras new car is confirmed to be the name of this actor from the movie RRR
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+