ದುಬಾರಿ ಬೆಲೆಯ ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಚೈತ್ರಾ ವಾಸುದೇವನ್ 'ಬಿಗ್ ಬಾಸ್ ಕನ್ನಡ ಸೀಸನ್ 7'ರ ಸ್ಪರ್ಧಿ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಗುಣದಿಂದ ಹಲವು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅಲ್ಲದೇ ಇವರು ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿಯಾಗಿದ್ದಾರೆ.

Recommended Video

ಹೊಸ ರೇಂಜ್ ರೋವರ್ ಎಸ್‌ಯುವಿ ವಾಕ್‌ರೌಂಡ್ | ಆರಂಭಿಕ ಬೆಲೆ ರೂ. 2.39 ಕೋಟಿ | ಐಷಾರಾಮಿ ಆಫ್-ರೋಡ್ ಎಸ್‌ಯುವಿ..

ಚೈತ್ರಾ ವಾಸುದೇವನ್ ಇತ್ತೀಚಿಗೆ ಯೂಟ್ಯೂಬ್‌ ಲೋಕದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಸೆಟ್, ಈವೆಂಟ್ ಮೇಕಿಂಗ್ ವಿಡಿಯೋ, ಮೇಕಪ್, ಸ್ಕಿನ್ ಕೇರ್ ಮತ್ತು ಹೇರ್‌ಕೇರ್‌ ಬಗ್ಗೆ ಸಾಕಷ್ಟು ವಿಡಿಯೋ ಹಂಚಿಕೊಂಡು ಜನರಿಗೆ ಸಿಂಪಲ್ ಟಿಪ್ಸ್‌ ಕೊಡುತ್ತಾರೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಹೀಗಾಗಿ ಚೈತ್ರಾ ವಾಸುದೇವನ್ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ನಿರೂಪಕಿ ಚೈತ್ರಾ ವಾಸುದೇವನ್ ಐಷಾರಾಮಿ ರೇಂಜ್ ರೋವರ್ ಇವೋಕ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ಹೊಸ ಕಾರಿನೊಂದಿಗಿನ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸಖತ್ ವೈರಲ್ ಆಗಿದೆ. ರೇಂಜ್ ರೋವರ್ ಇವೋಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ,

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಇನ್ನು ಚೈತ್ರಾ ವಾಸುದೇವನ್ ಹೆಸರು ಕೇಳಿದ ತಕ್ಷಣ ಅವರು ತಮಿಳಿಯನ್ ಎಂದು ಅನಿಸಬಹುದು, ಆದರೆ ಚೈತ್ರಾ ಪಕ್ಕಾ ಕುಂದಾಪುರದ ಹುಡುಗಿಯಂತೆ. ಬೆಂಗಳೂರಿನ ಕನ್ನಡ ಮಾತನಾಡುವ ಚೈತ್ರಾರನ್ನು ತಮಿಳಿಯನ್ ಅಂತ ಕೆಲವರು ಭಾವಿಸಬಹುದು.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಆದರೆ ಪಾಸ್‌ಪೋರ್ಟ್ ಮಾಡಿಸುವ ವೇಳೆ ಅವರ ತಂದೆ ಹೆಸರು ವಾಸುದೇವ ಅನ್ನೋದನ್ನು ವಾಸುದೇವನ್ ಅಂತ ತಪ್ಪಾಗಿ ಬರೆಯಲಾಗಿ, ಅದೇ ತಪ್ಪು ಈಗ ಮುಂದುವರೆದಿದೆ ಎಂದು ಚೈತ್ರಾ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ನಂತರದಲ್ಲಿ ಚೈತ್ರಾ ಹಲವಾರು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಿದ್ದಾರೆ, ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಚೈತ್ರಾ ತಂದೆ ವಾಸುದೇವನ್ ಹೋಟೆಲ್ ಉದ್ಯಮಿ. ಅವರ ಮಾವ ಮತ್ತು ಅತ್ತೆ ಒಂದು ಶಾಲೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಗಂಡ ಸತ್ಯ ಇವೆಂಟ್ ಮ್ಯಾನೇಜ್‌ಮೆಂಟ್‌ ಮಾಡುತ್ತಿದ್ದಾರಂತೆ. ಫಿಲ್ಮ್‌ಫೇರ್ ಮತ್ತು ಮಿರ್ಚಿ ಮ್ಯೂಸಿಕ್ ಶೋನಲ್ಲಿ ನಿರೂಪಣೆ ಮಾಡುವ ಅವಕಾಶ ದಕ್ಕಿಸಿಕೊಂಡಿದ್ದಾರೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಚೈತ್ರಾ ಅವರು ಖರೀದಿಸಿದ ರೇಂಜ್ ರೋವರ್ ಇವೋಕ್ ಕಾರಿನ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಹೊಂದಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲೂ ಆರ್ ಡೈಮಾನಿಕ್ ವೆರಿಯೆಂಟ್‌ನೊಂದಿಗೆ ಎಸ್ ವೆರಿಯೆಂಟ್ ಹೊಂದಿವೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ನಟಿ ಚೈತ್ರಾ ಅವರು ಆರ್ ಡೈಮಾನಿಕ್ ವೆರಿಯೆಂಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನಿರೀಕ್ಷಿಸುತ್ತೇವೆ. ಈ ರೇಂಜ್ ರೋವರ್ ಇವೋಕ್ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಫ್ ರೋಡ್ ಕೌಶಲ್ಯತೆಗಾಗಿ ಹಲಾವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಆಲ್ ಟೆರೈನ್ ರೆಸ್ಪಾನ್ಸ್ ಸಿಸ್ಟಂ ಅನ್ನು ನೀಡಲಾಗಿದೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಅತ್ಯಾಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳ ಪರಿಪೂರ್ಣ ಸಮತೋಲನವನ್ನು ನೀಡುವ ಹೊಸ ಕಾರಿನಲ್ಲಿ ನಾಲ್ಕು ಸಿಲಿಂಡರ್ ಹೊಂದಿರುವ ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಪವರ್ ಟ್ರೈನ್‍ ಆಯ್ಕೆಗಳು ಲಭ್ಯವಿವೆ. ಇದರಲ್ಲಿ 2.0 ಲೀಟರ್ ಪೆಟ್ರೋಲ್ ಮಾದರಿಯು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 247 ಬಿಎಚ್‌ಪಿ ಪವರ್ ಮತ್ತು 365-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಇನ್ನು 2.0 ಲೀಟರ್ ಡೀಸೆಲ್ ಮಾದರಿಯು ಸಹ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 201 ಬಿಎಚ್‌ಪಿ ಪವರ್ ಮತ್ತು 430 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಹಾಗೆಯೇ ಈ ಕಾರಿನಲ್ಲಿ ಕಂಪನಿಯು ಹಲವಾರು ಹೊಸ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಏರ್ ಸಸ್ಪೆನ್ಷನ್, 3D ಸರೌಂಡ್ ಕ್ಯಾಮೆರಾ ಮತ್ತು PM2.5 ಫಿಲ್ಟರ್‍ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ನಂತಹ ಹೊಸ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಜೊತೆಗೆ ಹೊಸ ಕಾರಿನ ವೈಶಿಷ್ಟ್ಯತೆಗಳನ್ನು ಮತ್ತು ವಿಶಿಷ್ಠವಾಗಿಸಲು ಹೊಸ ಕಾರಿನಲ್ಲಿ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಮತ್ತು ಆಕ್ಟಿವ್ ರೋಡ್ ನಾಯ್ಸ್ ಕ್ಯಾನ್ಸಲೇಷನ್ ನಂತಹ ಫೀಚರ್ಸ್‌ಗಳನ್ನು ಸಹ ಜೋಡಣೆ ಮಾಡಲಾಗಿದೆ. ಹೊಸ ಫೀಚರ್ಸ್‌ಗಳೊಂದಿಗೆ ಇವೋಕ್ ಕಾರು ಮಾದರಿಯು ಈ ಹಿಂದೆಂದಿಗಿಂತಲೂ ಆಕರ್ಷಕ, ಹೆಚ್ಚು ಸುರಕ್ಷಿತ ಮತ್ತು ಸ್ಮಾರ್ಟ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಡೀಪ್ ಗಾರ್ನೆಟ್ ಮತ್ತು ಎಬೊನಿ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಇನ್ನು ಲ್ಯಾಂಡ್ ರೋವರ್ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಎಸ್‌ಯುವಿ ಮಾದರಿಯನ್ನು ಕಳೆದ ಜನವರಿಯಲ್ಲಿ ಬಿಡುಗಡೆಗೊಳಿಸಿತ್ತು. ಕಾರು ವಿವಿಧ ಎಂಜಿನ್ ಆಯ್ಕೆಗಳು ಮತ್ತು ಬೆಲೆ ಆಧರಿಸಿ ಒಟ್ಟು 33 ವೆರಿಯೆಂಟ್‌ಗಳನ್ನು ಹೊಂದಿದೆ. 2022ರ ರೇಂಜ್ ರೋವರ್ ಅನ್ನು ಕಂಪನಿಯು ಹೊಸ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಿದ್ದು, ಹೊಸ ಮಾದರಿಯು ಅದರ ಹಿಂದಿನ ಮಾದರಿಯಲ್ಲಿದ್ದ ಹೆಚ್ಚಿನ ಶೈಲಿಯನ್ನು ಉಳಿಸಿಕೊಂಡಿದೆ. ಈ ಹೊಸ ರೇಂಜ್ ರೋವರ್ ಎಸ್‌ಯುವಿಯು ಪರಿಚಿತವಾಗಿ ಕಾಣುತ್ತದೆ ಮತ್ತು ವಿಭಿನ್ನ ಸಿಲೂಯೆಟ್ ಅನ್ನು ತಕ್ಷಣವೇ ಗುರುತಿಸಬಹುದಾಗಿದ್ದು, ಹೊಸ ಎಸ್‍ಯುವಿಯು ನವೀಕರಿಸಲಾದ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಅತ್ಯತ್ತಮ ಹೊರನೋಟ ಹೊಂದಿದೆ.

ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಿರೂಪಕಿ ಚೈತ್ರಾ ವಾಸುದೇವನ್ ಅವರು ಜನಪ್ರಿಯ ಐಷಾರಾಮಿ ರೇಂಜ್ ರೋವರ್ ಇವೋಕ್ ಎಸ್‍ಯುವಿಯನ್ನು ಇತ್ತೀಚೆಗೆ ಖರೀದಿಸಿದ್ದಾರೆ. ರೇಂಜ್ ರೋವರ್ ಇವೋಕ್ ಮಾದರಿಯು ಭಾರತೀಯ ಮಾರುಕಟ್ಟೆಯಲಿ ವೊಲ್ವೊ ಎಕ್ಸ್‌ಸಿ60, ಬಿಎಂಡಬ್ಲ್ಯು ಎಕ್ಸ್3 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತದೆ.

Most Read Articles

Kannada
English summary
Anchor chaitra vasudevan buys range rover evoque suv details
Story first published: Friday, August 26, 2022, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X