ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಮುಖ್ಯಮಂತ್ರಿಯವರ ಬೆಂಗಾವಲು ಪಡೆಗಳು ತಮ್ಮದೇ ಆದ ಗತ್ತು, ಘನತೆಯನ್ನು ಹೊಂದಿರುತ್ತವೆ. ಮುಖ್ಯಮಂತ್ರಿಗಳು ಸಂಚರಿಸುವ ವೇಳೆಯಲ್ಲಿ ಯಾವುದೇ ತೊಂದರೆಯಾಗದಂತೆ ಅವರು ಹೊರಡುವ ಎಲ್ಲಾ ಮಾರ್ಗಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಮುಖ್ಯಮಂತ್ರಿಯವರ ಈ ಬೆಂಗಾವಲು ಪಡೆಯಲ್ಲಿ ಬೆಂಗಾವಲು ಕಾರುಗಳು, ಆಂಬುಲೆನ್ಸ್‌ಗಳು, ಅವರ ಭದ್ರತಾ ಸಿಬ್ಬಂದಿಯ ಕಾರುಗಳು ಸೇರಿದಂತೆ ಹಲವಾರು ವಾಹನಗಳಿರುತ್ತವೆ. ಮುಖ್ಯಮಂತ್ರಿಗಳ ಸಂಚಾರದ ವೇಳೆಯಲ್ಲಿ ಅವರ ವಾಹನಗಳ ಸುತ್ತಮುತ್ತ ಬೇರೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ತಮ್ಮ ಬೆಂಗಾವಲು ಪಡೆಗೆ ರಸ್ತೆಯಿಂದ ಪಕ್ಕಕ್ಕೆ ಸರಿಯುವಂತೆ ಸೂಚಿಸಿದ್ದಾರೆ.

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿರವರು ವಿಜಯವಾಡದ ಪುಲಿವೆಂದುಲದಿಂದ ತಡೆಪಲ್ಲಿಯಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ತಮ್ಮ ಬೆಂಗಾವಲು ಪಡೆಯ ಹಿಂದೆ ಆಂಬ್ಯುಲೆನ್ಸ್ ವೊಂದು ಬರುತ್ತಿರುವುದನ್ನು ನೋಡಿದ್ದಾರೆ. ಆ ಆಂಬ್ಯುಲೆನ್ಸ್ ನಲ್ಲಿ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಇದನ್ನು ಕಂಡ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಗಾವಲು ಪಡೆಗೆ ಸೂಚಿಸಿದ್ದಾರೆ. ಇದರಿಂದ ಸಕಾಲಕ್ಕೆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ಗೆ ಸಾಧ್ಯವಾಗಿದೆ.

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಆಂಧ್ರಪ್ರದೇಶದ ಮುಖ್ಯಮಂತ್ರಿಯವರು ಕಪ್ಪು ಬಣ್ಣದ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ನೀಲಿ ಬಣ್ಣದ ಆಂಬುಲೆನ್ಸ್‌ಗೆ ಬೆಂಗಾವಲು ಪಡೆ ದಾರಿ ಮಾಡಿಕೊಟ್ಟಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯವರ ಈ ನಡೆಯನ್ನು ದೇಶಾದ್ಯಂತ ಪ್ರಶಂಸಿಸಲಾಗುತ್ತಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಜಗನ್ ಮೋಹನ್ ರೆಡ್ಡಿಯವರು ಬೇರೆ ನಾಯಕರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿಯವರು ಕೆಲವು ದಿನಗಳ ಹಿಂದೆ ಆಂಧ್ರ ಪ್ರದೇಶದಲ್ಲಿ 1000 ಆಂಬುಲೆನ್ಸ್‌ಗಳಿಗೆ ಚಾಲನೆ ನೀಡಿದ್ದರು. ಫೋರ್ಸ್ ಮೋಟಾರ್ಸ್ 1000 ಆಂಬುಲೆನ್ಸ್‌ಗಳನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ವಿತರಿಸಿತ್ತು.

ಈ ಎಲ್ಲಾ ಆಂಬುಲೆನ್ಸ್‌ಗಳಲ್ಲಿ ಅತ್ಯಾಧುನಿಕ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಅಳವಡಿಸಲಾಗಿದೆ ಎಂದು ಫೋರ್ಸ್ ಮೋಟಾರ್ಸ್ ಹೇಳಿದೆ. ಇವುಗಳಲ್ಲಿ 130 ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳಾದರೆ, 282 ಮೂಲ ಆಂಬುಲೆನ್ಸ್‌ಗಳು ಹಾಗೂ 656 ಮೊಬೈಲ್ ಮೆಡಿಕಲ್ ಯುನಿಟ್ ಗಳಾಗಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಿಎಂ ಬೆಂಗಾವಲು ಪಡೆ

ಕರೋನಾ ವೈರಸ್ ದೇಶದ ಆರೋಗ್ಯ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಬಹಿರಂಗಪಡಿಸಿದೆ ಎಂದು ಫೋರ್ಸ್ ಮೋಟಾರ್ಸ್ ಎಂಡಿ ಪ್ರಸಾನ್ ಫಿರೋಡಿಯಾಹೇಳಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಆಂಧ್ರಪ್ರದೇಶ ಸರ್ಕಾರವು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಆಂಬುಲೆನ್ಸ್‌ಗಳನ್ನು ಒದಗಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Most Read Articles

Kannada
English summary
Andhra Pradesh chief minister convoy gives way for ambulance. Read in Kannada.
Story first published: Thursday, September 3, 2020, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X