Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 15 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 16 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
'ದಿ ಡರ್ಟಿ ಪಿಕ್ಟರ್' ಸೀಕ್ವೆಲ್ ಫಿಕ್ಸ್: ನಾಯಕಿ ಯಾರು?
- News
UIDAI ಹೊಸ ಸುತ್ತೋಲೆ: ಸರ್ಕಾರಿ ಸವಲತ್ತು, ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ
- Travel
ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ
ಆಂಧ್ರಪ್ರದೇಶದ ವೈಎಸ್ ಜಗನ್ ಅವರ ನೇತೃತ್ವದ ವೈಎಸ್ಆರ್ ಸರ್ಕಾರವು ವಾಹನ ಮಿತ್ರ ಯೋಜನೆಯ ನಾಲ್ಕನೇ ಹಂತದ ಹಣವನ್ನು ವಿತರಿಸಿದ ಹಿನ್ನೆಲೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರವಾಸೋದ್ಯಮ ಸಚಿವೆ ಆರ್.ಕೆ.ರೋಜಾ ಅವರು ಚಾಲಕನ ಆಸನದಲ್ಲಿ ಕುಳಿತು ಆಟೋ ಓಡಿಸಿದರು.

ಆರ್ಥಿಕವಾಗಿ ದುರ್ಬಲವಾಗಿರುವ ಟ್ಯಾಕ್ಸಿ ಚಾಲಕರಿಗೆ ಹಣಕಾಸಿನ ನೆರವು ನೀಡುವ ಮೂಲಕ ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾಕ್ಸಿ ರಿಪೇರಿ ವೆಚ್ಚವನ್ನು ಕಡಿಮೆ ಮಾಡಲು ಆಂಧ್ರಪ್ರದೇಶ ಸರ್ಕಾರದ ಯೋಜನೆಯಾದ ವಾಹನ ಮಿತ್ರದ ನಾಲ್ಕನೇ ಹಂತದ ಕಾರ್ಯಕ್ರಮಕ್ಕೆ ಶುಕ್ರವಾರ ತಿರುಪತಿಯಲ್ಲಿ ಚಾಲನೆ ನೀಡಲಾಯಿತು.

ತಿರುಪತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವೆ ರೋಜಾ ಭಾಗವಹಿಸಿದ್ದು, ಆಟೋ ಚಾಲಕರು ಅವರಿಗೆ ಆಟೋ ಸಮವಸ್ತ್ರ ನೀಡಿದರು. ನಂತರ ರೋಜಾ ಡ್ರೈವರ್ ಸೀಟಿನಲ್ಲಿ ಕುಳಿತು ಇತರರನ್ನು ಕರೆದುಕೊಂಡು ಆಟೋ ಓಡಿಸಿದರು. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ವರದಿಯನ್ನು ಸಾಕ್ಷಿ ಟಿವಿ ಲೈವ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ತಿರುಪತಿಯಲ್ಲಿ ಕಾರ್ಯಕ್ರಮ ನಡೆದಿದ್ದು, ಸಚಿವೆ ಪ್ರಯಾಣಿಕರೊಂದಿಗೆ ಆಟೋ ಓಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಒಳಾಂಗಣ ಪ್ರದೇಶದಲ್ಲಿ ಆಟೋ ಓಡಿಸುತ್ತಿರುವುದು ಕಾಣಿಸುತ್ತಿದೆ. ಇದು ಬಹುಶಃ ಈವೆಂಟ್ ನಡೆಸಿದ ಸ್ಥಳದ ಪಕ್ಕದ ಪ್ರದೇಶವಾಗಿದೆ.

ಆರಂಭದಲ್ಲಿ ಸಚಿವೆ ಆರ್.ಕೆ.ರೋಜಾ ವೃತ್ತಿಪರ ಆಟೋ ಚಾಲಕರ ಜೊತೆಗಿದ್ದರು. ಡ್ರೈವರ್ ಒಬ್ಬರು ಅವರಿಗೆ ಆಟೋ ಓಡಿಸುವ ಸೂಚನೆಗಳನ್ನು ನೀಡುತ್ತಿದ್ದರು. ಹಿಂಬದಿ ಸೀಟಿನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಯಾಣಿಕರೇ ಕಂಡು ಬಂದಿದ್ದಾರೆ. ಸಚಿವರು ಕೆಲಹೊತ್ತು ಆವರಣದೊಳಗೆ ಆಟೋ ಓಡಿಸಿ ಚಾಲಕರು ಹಾಗೂ ಕಾರ್ಯಕರ್ತರಂದಿಗೆ ಸಮಯ ಕಳೆದರು.

ವಾಹನ ಮಿತ್ರ ಯೋಜನೆಯು ಆಂಧ್ರಪ್ರದೇಶ ಸರ್ಕಾರದಿಂದ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಹಣಕಾಸಿನ ನೆರವಿಗಾಗಿ ಉದ್ದೇಶಿಸಲಾದ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರು ವಾರ್ಷಿಕ 10,000 ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ಪಡೆಯಬಹುದಾಗಿದೆ.

ವೈಎಸ್ಆರ್ ವಾಹನ ಮಿತ್ರ ಯೋಜನೆಯಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಎಲ್ಲಾ ಚಾಲಕರಿಗೆ ಪ್ರಯೋಜನವನ್ನು ನೀಡಲಾಗುತ್ತದೆ. ಯೋಜನೆಯಡಿ ಪ್ರಯೋಜನಗಳನ್ನು ನೇರವಾಗಿ ಚಾಲಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಆಸಕ್ತ ಚಾಲಕರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಯೋಜನೆಯ ನಾಲ್ಕನೇ ಹಂತದಲ್ಲಿ 12,137 ಫಲಾನುಭವಿಗಳ ಖಾತೆಗೆ 12.13 ಕೋಟಿ ರೂ. ನೀಡಲಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ವಾರ್ಡ್ ಮತ್ತು ಗ್ರಾಮ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಸ್ವಯಂ ಸ್ವಾಮ್ಯದ ಆಟೋರಿಕ್ಷಾ ಅಥವಾ ಟ್ಯಾಕ್ಸಿ ಓಡಿಸುವ ಚಾಲಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

ಬಸ್ ಚಾಲಕರಾದ ಕ್ರಿಕೆಟಿಗರು
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಇಬ್ಬರು ಶ್ರೀಲಂಕಾ ಕ್ರಿಕೆಟಿಗರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಶ್ರೀಲಂಕಾದ ಮಾಜಿ ಸ್ಪಿನ್ನರ್ ಸೂರಜ್ ರಣದೀವ್ ಮತ್ತು ಜಯಸಿಂಗ್ ಈಗ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕರಾಗಿದ್ದಾರೆ. ಈ ಆಟಗಾರರು ಬಸ್ ಚಾಲನೆಯನ್ನು ಪೂರ್ಣ ಸಮಯದ ಉದ್ಯೋಗವಾಗಿ ಆಯ್ಕೆ ಮಾಡಲು ಯಾವಾಗ ನಿರ್ಧರಿಸಿದರು ಎಂಬುದು ಸ್ಪಷ್ಟವಾಗಿಲ್ಲ.

ಶ್ರೀಲಂಕಾ ಪ್ರಸ್ತುತ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹೆಣಗಾಡುತ್ತಿದೆ. ಈ ಆಟಗಾರರು ತಮ್ಮ ದೇಶವನ್ನು ತೊರೆದು ವಿದೇಶಿ ನೆಲದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಲು ಇದು ಒಂದು ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ಸೂರಜ್ ರಂದೀವ್ ಶ್ರೀಲಂಕಾ ಪರ ಒಟ್ಟು 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಮಿಂಚಿರುವ ಆಫ್ ಸ್ಪಿನ್ನರ್ 31 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿ 36 ವಿಕೆಟ್‌ಗಳನ್ನು ಗಳಿಸಿದ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲೂ ಮೂರು ಪಂದ್ಯಗಳನ್ನು ಆಡಿ 7 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.