ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಭಾರತದ ರಸ್ತೆಗಳಲ್ಲಿ ವಾಹನ ಸವಾರರ ನಡುವೆ ವಾಗ್ವಾದ ಹಾಗೂ ಜಗಳಗಳು ನಡೆಯುವುದು ಸಾಮಾನ್ಯ. ಇತ್ತೀಚಿಗೆ ಈ ಘಟನೆಗಳು ಹೆಚ್ಚಾಗುತ್ತಿವೆ. ವಾಹನ ಸವಾರರು ರಸ್ತೆಗಳಲ್ಲಿ ಜಗಳವಾಡುವ ಬಗ್ಗೆ ವರದಿಗಳಾಗುತ್ತಲೇ ಇರುತ್ತವೆ.

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಈಗ ಆಟೋ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರನ ನಡುವೆ ಜಗಳ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಈ ವೀಡಿಯೊದಲ್ಲಿ ಸಿಗ್ನಲ್'ನಲ್ಲಿ ನಿಂತಿದ್ದ ಆಟೋ ಬಳಿಗೆ ಬರುವ ದ್ವಿಚಕ್ರ ವಾಹನ ಸವಾರ ಆಟೋ ಡ್ರೈವರ್'ಗೆ ಬಯ್ಯುವುದನ್ನು ಕಾಣಬಹುದು.

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಸಿಗ್ನಲ್ ಬಿದ್ದ ನಂತರ ಅವರಿಬ್ಬರು ಅಲ್ಲಿಂದ ಹೊರಡುತ್ತಾರೆ. ಇಬ್ಬರು ಒಂದೇ ದಾರಿಯಲ್ಲಿ ಮುಂದೆ ಸಾಗುತ್ತಾರೆ. ಆದರೆ ಆಟೋ ಡ್ರೈವರ್ ಇದ್ದಕ್ಕಿದ್ದಂತೆ ತನ್ನ ಆಟೋವನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸುತ್ತಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಆಟೋ ಡ್ರೈವರ್ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕಾರಣಕ್ಕೆ ದ್ವಿಚಕ್ರ ವಾಹನವು ಕೆಳಕ್ಕೆ ಬೀಳುತ್ತದೆ. ಆದರೆ ಏನೂ ಆಗಿಲ್ಲವೆಂಬಂತೆ ಆಟೋ ಡ್ರೈವರ್ ಅಲ್ಲಿಂದ ಹೊರಟು ಹೋಗುತ್ತಾನೆ.

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಆದರೆ ಕೆಳಗೆ ಬಿದ್ದ ದ್ವಿಚಕ್ರ ವಾಹನ ಸವಾರನನ್ನು ರಕ್ಷಿಸಲು ಅಲ್ಲಿದ್ದವರು ಓಡಿ ಬರುತ್ತಾರೆ. ದ್ವಿಚಕ್ರ ವಾಹನ ಸವಾರನು ಯಾವುದೇ ಪ್ರಾಣಾಪಾಯವಿಲ್ಲದೇ ಸಣ್ಣ ಪುಟ್ಟ ಗಾಯಗಳೊಂದಿಗೆ ಪರಾರಿಯಾಗಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಈ ಇಡೀ ಘಟನೆ ವೀಡಿಯೊದಲ್ಲಿ ಸೆರೆಯಾಗಿದೆ. ಈ ವೀಡಿಯೊ ಪೊಲೀಸ್ ಅಧಿಕಾರಿಗಳ ತನಿಖೆಗೆ ಸಹಕಾರಿಯಾಗಿದೆ. ವೀಡಿಯೊದಲ್ಲಿರುವ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

34 ವರ್ಷದ ಬಂಧಿತ ಆಟೋ ಚಾಲಕನ ಮೇಲೆ ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳಿವೆ. ಆತನಿಗೆ ಕಠಿಣ ಶಿಕ್ಷೆಯಾಗುವುದು ಖಚಿತವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಮೊದಲೇ ಹೇಳಿದಂತೆ ರಸ್ತೆಗಳಲ್ಲಿ ವಾಹನ ಸವಾರರ ನಡುವೆ ವಾಗ್ವಾದ ನಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಆದರೆ ಕೆಲವು ಸರಳ ಸೂತ್ರಗಳನ್ನು ಅನುಸರಿಸುವ ಮೂಲಕ ತೊಂದರೆಗೆ ಸಿಲುಕುವುದನ್ನು ತಪ್ಪಿಸಬಹುದು.

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಎಲ್ಲಿಗಾದರೂ ಹೋಗುವಾಗ ಸ್ವಲ್ಪ ಮುಂಚಿತವಾಗಿ ಮನೆ ಬಿಡಬೇಕು. ತರಾತುರಿಯಲ್ಲಿ ಮನೆಯಿಂದ ಹೊರಟರೆ ಉದ್ವೇಗದಿಂದಾಗಿ ಹೆಚ್ಚಿನ ಸಮಸ್ಯೆಗಳುಂಟಾಗುತ್ತವೆ. ವಾಹನ ಚಾಲನೆ ಮಾಡುವಾಗ ಮನಸ್ಸು ಶಾಂತವಾಗಿರುವುದು ಮುಖ್ಯ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರಸ್ತೆಯಲ್ಲಿ ಎದುರಾಗುವ ಅನಿರೀಕ್ಷಿತ ಸಂಗತಿಗಳಿಂದ ವಿಚಲಿತರಾಗದಿರುವುದು ಒಳ್ಳೆಯದು. ಇತರ ವಾಹನ ಚಾಲಕರು ಸಣ್ಣ ತಪ್ಪು ಮಾಡಿದರೆ ಕೂಡಲೇ ಜಗಳಕ್ಕೆ ಹೋಗದಿರುವುದು ಒಳ್ಳೆಯದು.

ಬೈಯ್ದ ಬೈಕ್ ಸವಾರನನ್ನು ಗುದ್ದಿ ನೆಲಕ್ಕೆ ಕೆಡವಿದ ಆಟೋ ಚಾಲಕ

ಬೇರೆ ವಾಹನ ಸವಾರರು ವಿನಾ ಕಾರಣ ಜಗಳಕ್ಕೆ ಬಂದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವುದು ಕ್ಷೇಮ.

Most Read Articles

Kannada
English summary
Angry auto rickshaw driver tries to kill bike rider. Read in Kannada.
Story first published: Saturday, December 26, 2020, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X