ಬೆಂಗಳೂರಿನಲ್ಲಿ ಗಮನಸೆಳೆದ ಮಾದಕ ವಸ್ತುಗಳ ವಿರುದ್ಧ ನಡೆದ ಬೃಹತ್ ಬೈಕ್ ರ‍್ಯಾಲಿ
ಇತ್ತೀಚಿನ ವರ್ಷಗಳಲ್ಲಿ ಯುವಕರು ಮಾದಕ ದ್ರವ್ಯ (Drug) ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಶಿಸ್ತು ಕ್ರಮಗಳನ್ನು ಕೈಗೊಳುತ್ತಿದ್ದಾರೆ. ಆದರೂ ದೊಡ್ಡ ಸಿಟಿಗಳಲ್ಲಿ ಯುವಕರು ಮಾತ್ರವಲ್ಲದೇ ಯುವತಿಯರು ಕೂಡ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.
ಸರ್ದಾರ್ ಮನ್ಮೀತ್ ಸಿಂಗ್ ಅವರು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಇವರು 'ಗ್ರೀನ್ ಮ್ಯಾನ್ ಆಫ್ ಇಂಡಿಯಾ' ಎಂಬ ಬಿರುದು ಪಡೆದಿರುವ ಪರಿಸರ ಪ್ರೇಮಿಯಾಗಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ನಿರಂತರವಾಗಿ ಗಿಡಗಳನ್ನು ನೆಡುತ್ತಿದ್ದಾರೆ. ಇವರು ಪರಿಸರ ಪ್ರೇಮಿಯ ಜೊತೆಗೆ ಬೈಕ್ ಪ್ರೇಮಿ ಕೂಡ ಆಗಿದ್ದಾರೆ.

ಸರ್ದಾರ್ ಮನ್ಮೀತ್ ಸಿಂಗ್ ಅವರ ನೇತೃತ್ವದಲ್ಲಿ ಮಾದಕ ವ್ಯಸನದ ವಿರುದ್ಧ ಬೃಹತ ಬೈಕ್ ರ‍್ಯಾಲಿ (Bike Rally) ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಪ್ರತಿ ವರ್ಷ ಜೂನ್ 26 ರಂದು ವಿಶ್ವ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಮಾದಕ ವಸ್ತು ವಿರೋಧಿ ದಿನದಲ್ಲಿ ನಡೆದ ಬೃಹತ ಬೈಕ್ ರ‍್ಯಾಲಿ ಜನರ ಗಮನ ಸೆಳೆದಿದೆ.
ಈ ಬೈಕ್ ರ‍್ಯಾಲಿಯಲ್ಲಿ ವಿಶೇಷ ಅತಿಥಿಗಳಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ ಉಪಾಧ್ಯಕ್ಷ ಗೋವಿಂದರಾಜ್ ಉಪಸ್ಥಿತರಿದ್ದರು. ಈ ಬೈಕ್ ರ‍್ಯಾಲಿಯು ವಿಧಾನಸೌಧದಿಂದ ಆರಂಭವಾಗಿ ಬೆಂಗಳೂರು ನಗರದ ವಿವಿಧ ಪ್ರಮುಖ ಭಾಗಗಳ ಮೂಲಕ ಸಾಗಿ ಯಲಹಂಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಯಲ್ಲಿ ಸಮಾಪನಗೊಂಡಿತು.

ವಿಶ್ವ ಮಾದಕ ವಸ್ತು ವಿರೋಧಿ ದಿನದಂದು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಈ ಬೈಕ್ ರ್ಯಾಲಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ಆಯೋಜಿಸಿದ ಈ ಬೈಕ್ ರ್ಯಾಲಿಯನ್ನು ಆಯೋಜಿಸಿತು. ಈ ಬೃಹತ್ ಬೈಕ್ ರ್ಯಾಲಿಯಲ್ಲಿ ಪುರುಷ ಮತ್ತು ಮಹಿಳೆ ಎಂಬ ಬೇಧವಿಲ್ಲದೆ 250ಕ್ಕೂ ಹೆಚ್ಚು ಸವಾರರು ಭಾಗವಾಹಿಸಿದರು.
ರಾಯಲ್ ಎನ್‌ಫೀಲ್ಡ್ ಬುಲೆಟ್ 350, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650, ಹೋಂಡಾ ಹೈನ್ಸ್ CB350 ಮುಂತಾದ ಬೈಕ್‌ಗಳು ಕೂಡ ಈ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿತು. ಇಷ್ಟೇ ಅಲ್ಲದೇ ಹಾರ್ಲೆ ಡೇವಿಡ್ಸನ್, ಕೆಟಿಎಂ ಮತ್ತು ಟ್ರಯಂಫ್‌ನಂತಹ ಕಂಪನಿಗ ಐಷಾರಾಮಿ ಬೈಕ್‌ಗಳೂ ಕಾಣಿಸಿಕೊಂಡಿತು.

ಈ ಬೈಕ್ ರ‍್ಯಾಲಿಯು ಯಲಹಂಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಲುಪಿದ ತಕ್ಷಣ ಮಾದಕ ದ್ರವ್ಯ ಸೇವನೆಯ ಪಿಡುಗನ್ನು ತೊಲಗಿಸಲು ಎಲ್ಲರೂ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಮಾಡಿದರು. ಅಲ್ಲಿಗೆ ಈ ಕಾರ್ಯಕ್ತಮವು ಕೊನೆಗೊಂಡಿತು. ಭವಿಷ್ಯದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಇಂತಹ ಬೈಕ್ ರ‍್ಯಾಲಿಗಳು ವಿವಿಧಡೆ ನಡೆಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಹೊಸ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯಬೇಡಿ.


Click it and Unblock the Notifications