ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಕಳೆದ ಶನಿವಾರ ರಾತ್ರಿ ತೆಲುಗು ದೇಶಂ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರ ಬೆಂಗಾವಲು ವಾಹನಗಳು ಅನಿರೀಕ್ಷಿತವಾಗಿ ಪರಸ್ಪರ ಡಿಕ್ಕಿ ಹೊಡೆದು ಕೊಂಡಿದ್ದವು. ಈ ಘಟನೆಯಲ್ಲಿ ಚಂದ್ರಬಾಬು ನಾಯ್ಡುರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಈ ಘಟನೆ ತೆಲಂಗಾಣ ರಾಜ್ಯದ ಯಾದತ್ರಿ ಪೊಂಗೀರ್ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಚಂದ್ರಬಾಬು ನಾಯ್ಡುರವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮೂವರು ಎನ್‌ಎಸ್‌ಜಿ ಸಿಬ್ಬಂದಿಗಳಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಚಂದ್ರಬಾಬು ನಾಯ್ಡುರವರು ಪ್ರಯಾಣಿಸುತ್ತಿದ್ದ ಬುಲೆಟ್ ಪ್ರೂಫ್ ವಾಹನಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಸೌತ್‌ಪಾಲ್ ಬಳಿಯ ತಾಂಡುಮಲ್‌ಕಾಪುರಂ ಗ್ರಾಮದ ಸಮೀಪವಿರುವ ವಿಜಯವಾಡ-ಹೈದರಾಬಾದ್ ಎನ್‌ಹೆಚ್ -65ರಲ್ಲಿ ಈ ಅಪಘಾತ ಸಂಭವಿಸಿದೆ. ಚಂದ್ರಬಾಬು ನಾಯ್ಡುರವರು ಅಮರಾವತಿಯಲ್ಲಿರುವ ತಮ್ಮ ಮನೆಯಿಂದ ಹೈದರಾಬಾದ್‌ಗೆ ತಮ್ಮ ಬೆಂಗಾವಲು ವಾಹನಗಳ ಜೊತೆಗೆ ಸಾಗುತ್ತಿದ್ದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಚಂದ್ರಬಾಬು ನಾಯ್ಡು ಒಟ್ಟು 7 ವಾಹನಗಳ ಬೆಂಗಾವಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಮುಂದೆ 3 ವಾಹನಗಳು ಹಾಗೂ ಹಿಂದೆ 3 ವಾಹನಗಳು ಇದ್ದವು. ಚಂದ್ರಬಾಬು ನಾಯ್ಡು ನಾಲ್ಕನೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಏಕಾಏಕಿ ಎದುರಾದ ದಾಟಿ ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮೊದಲ ವಾಹನದ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಎಲ್ಲಾ ವಾಹನಗಳು ಹಠಾತ್ತನೇ ಬ್ರೇಕ್ ಹಾಕಿವೆ. ಈ ಕಾರಣಕ್ಕೆ ಬೆಂಗಾವಲಿನಲ್ಲಿದ್ದ 2ನೇ ವಾಹನವು ಮೊದಲ ವಾಹನಕ್ಕೆ ಹಿಂದಿನನಿಂದ ಡಿಕ್ಕಿ ಹೊಡೆದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

2ನೇ ವಾಹನದ ಮುಂಭಾಗಕ್ಕೆ ತೀವ್ರವಾಗಿ ಹಾನಿಯಾಗಿದೆ. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 4ನೇ ವಾಹನದಲ್ಲಿದ್ದರು. ಅವರಿದ್ದ ವಾಹನದ ಚಾಲಕನು ಹಠಾತ್ತನೇ ಬ್ರೇಕ್ ಹಾಕಿದರೂ ಸಹ ಮುಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿಲ್ಲ. ಆದರೆ ಅವರ ಹಿಂದಿದ್ದ ವಾಹನವು ಅವರಿದ್ದ ಕಾರಿಗೆ ಡಿಕ್ಕಿ ಹೊಡೆದು ಹಾನಿ ಸಂಭವಿಸಿದೆ.

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಈ ಘಟನೆಯು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಜಾನುವಾರುಗಳು ಏಕಾಏಕಿ ಅಡ್ಡಬಂದು ಅಪಘಾತಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಭಾರತದ ರಸ್ತೆಗಳಲ್ಲಿ ಜಾನುವಾರುಗಳು ಎಲ್ಲಾ ಸಮಯದಲ್ಲೂ ಇದ್ದಕ್ಕಿದ್ದಂತೆ ಅಡ್ಡ ಬರುತ್ತವೆ. ಹೀಗಾಗಿ ವಾಹನ ಚಾಲಕರು ಸ್ವಲ್ಪ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಮಧ್ಯಮ ವೇಗದಲ್ಲಿ ವಾಹನ ಚಾಲನೆ ಮಾಡುವುದು ಒಳ್ಳೆಯದು. ವೇಗವಾಗಿ ವಾಹನ ಚಾಲನೆ ಮಾಡುವಾಗ ಜಾನುವಾರುಗಳು ಇದ್ದಕ್ಕಿದ್ದಂತೆ ಅಡ್ಡ ಬಂದರೆ ವಾಹನವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.

ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಮುಖ್ಯಮಂತ್ರಿ

ಇದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧ್ಯಮ ವೇಗದಲ್ಲಿ ವಾಹನ ಚಾಲನೆ ಮಾಡಿ. ಜಾನುವಾರುಗಳು ಮಾತ್ರವಲ್ಲದೇ ಜನರು ಸಹ ನಿಮ್ಮ ವಾಹನಕ್ಕೆ ಹಠಾತ್ತನೆ ಅಡ್ಡ ಬರುವ ಸಾಧ್ಯತೆಗಳಿವೆ. ವಾಹನ ಚಾಲನೆ ವೇಳೆ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
AP former chief minister escapes unhurt in accident. Read in Kannada.
Story first published: Tuesday, September 8, 2020, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X