ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವಿನ ಆಸೆ ಈಡೇರಿಸಿದ ಆಸ್ಪತ್ರೆ ಸಿಬ್ಬಂದಿ: ಕಣ್ಣೀರಿಟ್ಟ ಆನಂದ್ ಮಹೀಂದ್ರಾ!

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವಿನ ಆಸೆಯನ್ನು ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ಪೂರೈಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಮಹೀಂದ್ರಾ ಸಮೂಹ ಸಂಸ್ಥೆಗಳ ಮಾಲೀಕರಾದ ಆನಂದ್ ಮಹೀಂದ್ರಾ ಅವರು ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಈ ಕುರಿತು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾಗಿರುವ ಮಗುವಿನ ಹೆಸರು ಕಾರ್ತಿಕ್ ಸಿಂಗ್. ಮಗುವಿನ ಪೋಷಕರು ನಿಯಮಿತವಾಗಿ ಮಗುವನ್ನು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಅಪೊಲೊ ಆಸ್ಪತ್ರೆಗೆ ಕರೆದೊಯ್ದು ಕಿಮೊಥೆರಪಿ ಕೊಡಿಸುತ್ತಿದ್ದಾರೆ. ಆದರೆ ಕಾರ್ತಿಕ್ ಮಹೀಂದ್ರ ಥಾರ್ ಎಸ್‌ಯುವಿಯ ದೊಡ್ಡ ಅಭಿಮಾನಿ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗಲೆಲ್ಲಾ ಮಹೀಂದ್ರಾ ಥಾರ್ ಎಸ್‌ಯುವಿ ಬಗ್ಗೆ ಮಾತನಾಡುತ್ತಿದ್ದ.

apollo-hospital-fulfills-kid-wish-anand-mahindra-tears

ಕಾರ್ತಿಕ್ ತಾನು ದೊಡ್ಡವನಾದ ಮೇಲೆ ಮಹೀಂದ್ರ ಥಾರ್ ಎಸ್‌ಯುವಿ ಖರೀದಿಸಲು ಬಯಸಿದ್ದಾಗಿ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಹೇಳುತ್ತಿದ್ದ. ಅಪೋಲೋ ಆಸ್ಪತ್ರೆಯ ಆಡಳಿತವು ಅಂತಹ ಇಚ್ಛೆಗಳನ್ನು ಹೊಂದಿರುವವರಿಗಾಗಿ "ನನ್ಹಿ ಖ್ವಾಹಿಶೆನ್" (ಸಣ್ಣ ಆಸೆಗಳು) ಎಂಬ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರೊಂದಿಗೆ ಕಾರ್ತಿಕ್‌ಗೆ ಸರ್ಪ್ರೈಸ್ ನೀಡಲು ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ಪ್ಲಾನ್ ಮಾಡಿತ್ತು.

ಲಕ್ನೋದಲ್ಲಿನ ಮಹೀಂದ್ರಾ ಡೀಲರ್‌ಶಿಪ್‌ನೊಂದಿಗೆ ಅವರು ಉತ್ತಮ ಸಂಬಂಧವನ್ನು ಹೊಂದಿದ್ದರಿಂದ, ಅವರು ಡೀಲರ್‌ಶಿಪ್‌ಗೆ ಭೇಟಿ ನೀಡಿ ಕಾರ್ತಿಕ್ ಕಥೆಯನ್ನು ಹೇಳಿದ್ದಾರು. ಮಗುವಿನ ಆಸೆ ಈಡೇರಿಸಲು ಡೀಲರ್ ಶಿಪ್ ಮುಂದಾಗಿದೆ. ಕಾರ್ತಿಕ್‌ನ ಮುಂದಿನ ಕೀಮೋ ಸೆಷನ್ ನಿಗದಿಯಾದ ದಿನ, ಮಹೀಂದ್ರಾ ಥಾರ್ ಮಗುವನ್ನು ಕರೆದೊಯ್ಯಲು ಮನೆಗೆ ಬಂದಿತ್ತು.

apollo-hospital-fulfills-kid-wish-anand-mahindra-tears

ಮನೆಯ ಮುಂದೆ ಒಮ್ಮೆಲೆ ತನ್ನಿಷ್ಟದ ಕಾರನ್ನು ಕಂಡು ಕಾರ್ತಿಕ್‌ ಆಶ್ಚರ್ಯಚಕಿತನಾಗಿದ್ದಾನೆ. ಕಾರಿನ ಇಡೀ ಕ್ಯಾಬಿನ್ ಬಲೂನ್‌ಗಳಿಂದ ತುಂಬಿತ್ತು. ಕಾರ್ತಿಕ್‌ನನ್ನು ಕಾರಿನ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾರ್ತಿಕ್‌ನ ಈ ಕ್ಷಣದ ಸಂತೋಷ ಹೇಳತೀರದು. ಕಾರ್ತಿಕ್ ಪ್ರಕರಣದಲ್ಲಿ ಅಪೋಲೋ ಆಸ್ಪತ್ರೆ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ.

ಕ್ಯಾನ್ಸರ್ ನಂತಹ ಭೀಕರ ಕಾಯಿಲೆಯಿಂದ ಬಳಲುತ್ತಿರುವವರು ಎಷ್ಟು ದಿನ ಬದುಕುವರೋ ಎಂದು ತಿಳಿಯದೆ ತಮ್ಮ ಆಸೆಗಳನ್ನು ಒಳಗೆ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಅದೃಷ್ಟ ಚೆನ್ನಾಗಿದ್ದರೆ ಇಂತಹ ಕಾಯಿಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ದೈಹಿಕ ನೋವಿನಿಂದ ಕೂಡಿದ ತಮ್ಮ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವ ಮೂಲಕ ಮಾನಸಿಕವಾಗಿ ತುಂಬಾ ಸಂತೋಷವನ್ನು ಅನುಭವಿಸುತ್ತಾರೆ.

apollo-hospital-fulfills-kid-wish-anand-mahindra-tears

ಆಸ್ಪತ್ರೆಯ ಅಧಿಕಾರಿಗಳು ತಮ್ಮ ಮಗನನ್ನು ಸಂತೋಷಪಡಿಸಲು ನಡೆಸಿದ ಈ ಪ್ರಯತ್ನಕ್ಕೆ ಮಗುವಿನ ಪೋಷಕರು ಸಂತೋಷಪಟ್ಟಿದ್ದಾರೆ. ವೀಡಿಯೊ ಇಂಟರ್ನೆಟ್‌ನಲ್ಲಿ ತ್ವರಿತವಾಗಿ ವೈರಲ್ ಆಗಿದೆ. ಈ ವಿಡಿಯೋ ಆನಂದ್ ಮಹೀಂದ್ರಾ ಅವರ ಗಮನಕ್ಕೆ ಬಂದಾಗ ಅವರು ಭಾವುಕರಾದರು. ತಕ್ಷಣವೇ ಅವರು ಈ ವಿಡಿಯೋವನ್ನು ಎಕ್ಸ್‌ನಲ್ಲಿ (ಟ್ವಿಟ್ಟರ್‌ನಲ್ಲಿ) ಹಂಚಿಕೊಂಡಿದ್ದಾರೆ.

"ನಾನು ಮೂಕನಾಗಿದ್ದೇನೆ. ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಮಗುವಿನ ಬಗ್ಗೆ ನಿಮ್ಮ ಮಾನವೀಯ ಉಪಕ್ರಮಕ್ಕೆ ಧನ್ಯವಾದಗಳು, ನಮ್ಮನ್ನು ಇದರಲ್ಲಿ ಭಾಗಿ ಮಾಡಿದಕ್ಕಾಗಿ ಧನ್ಯವಾದಗಳು. ಈ ಘಟನೆ ನನ್ನನ್ನು ಕಾರ್ತಿಕ್ ಅಭಿಮಾನಿಯನ್ನಾಗಿ ಮಾಡಿತು. ." ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೂಡ ಕೂಡಲೇ ವೈರಲ್ ಆಗಿ ಹಲವರ ಮೆಚ್ಚುಗೆ ಪಡೆಯಿತು.

ಮಹೀಂದ್ರಾ ಥಾರ್ ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಸ್‌ಯುವಿಯಾಗಿದೆ. ಈ ಕಾರಿಗೆ ಇನ್ನೂ ಹೆಚ್ಚಿನ ಬೇಡಿಕೆಯಿದೆ. ಬುಕ್ ಮಾಡಿದ ನಂತರವೂ ಕಾರಿನ ಡೆಲಿವರಿ ತೆಗೆದುಕೊಳ್ಳಲು ಹೆಚ್ಚಿನ ಸಮಯ ಕಾಯಬೇಕು. ಪ್ರಸ್ತುತ ಮಹೀಂದ್ರಾ ಥಾರ್ SUV ದೇಶದಲ್ಲೇ ಅತ್ಯಂತ ಕೈಗೆಟುಕುವ 4×4 SUV ಆಗಿದೆ. ಈ SUV ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

Article Published On: Monday, October 2, 2023, 11:30 [IST]
English summary
Apollo hospital fulfills kid wish anand mahindra tears
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+