ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಜನಪ್ರಿಯ ಮೊಬೈಲ್ ಫೋನ್ ತಯಾರಕ ಕಂಪನಿಯಾದ ಆಪಲ್ ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್ ಗಳಲ್ಲಿ ಫೋನ್ ಬಳಕೆ ಸರಿಯಲ್ಲವೆಂದು ತಿಳಿಸಿದೆ. ತನ್ನ ಸಂಶೋಧನೆಯ ಪ್ರಕಾರ ದ್ವಿಚಕ್ರ ವಾಹನಗಳಲ್ಲಿ ಫೋನ್ ಬಳಸುವುದರಿಂದ ಫೋನ್ ಗಳಿಗೆ ಹಾನಿಯಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಲೇಖನದಲ್ಲಿ ಆಪಲ್ ಕಂಪನಿ ಪ್ರಕಟಿಸಿರುವ ಮಾಹಿತಿಯನ್ನು ನೋಡೋಣ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಬಹುತೇಕ ಎಲ್ಲಾ ವಾಹನ ಸವಾರರು ಕಾರಿನಲ್ಲಾಗಲಿ ಅಥವಾ ಬೈಕಿನಲ್ಲಾಗಲಿ, ಹೊಸ ಹಾದಿಯಲ್ಲಿ ಸಾಗುವಾಗ ತಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆಯೇ ಇಲ್ಲವೇ ಎಂಬುದನ್ನು ತಿಳಿಯಲು ಕೆಲವು ಮ್ಯಾಪ್ ಗಳನ್ನು ಬಳಸುತ್ತಾರೆ. ಕೆಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಮೊಬೈಲ್ ಸ್ಟಾಂಡ್ ಗಳನ್ನು ಸಹ ನೀಡಿರುತ್ತವೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಈ ಹಿನ್ನೆಲೆಯಲ್ಲಿ ವಾಹನ ಸವಾರರು ವಾಹನಗಳಲ್ಲಿರುವ ಮೊಬೈಲ್ ಸ್ಟಾಂಡ್ ಗಳಲ್ಲಿ ತಮ್ಮ ಮೊಬೈಲ್ ಗಳನ್ನಿಟ್ಟು ಗೂಗಲ್ ಮ್ಯಾಪ್ ನಂತಹ ಮಾರ್ಗದರ್ಶಿ ಆಪ್ ಗಳನ್ನು ಬಳಸುತ್ತಾರೆ. ನ್ಯಾವಿಗೇಷನ್ ಪ್ರೊಸೆಸರ್‌ಗಳು ಮಾರ್ಗದ ಬಗ್ಗೆ ವಾಹನ ಸವಾರರಿಗೆ ನಿಖರವಾದ ಮಾಹಿತಿ ನೀಡಲು ಸಾಧ್ಯವಾಗುತ್ತದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಆದರೆ ಕೆಲವೊಮ್ಮೆ ಈ ಆಪ್ ಗಳಿಂದ ವಾಹನ ಸವಾರರು ತಪ್ಪು ಹಾದಿಯಲ್ಲಿ ಸಾಗಿದ ಹಲವು ಘಟನೆಗಳು ವರದಿಯಾಗಿವೆ. ಈ ರೀತಿ ಮೊಬೈಲ್ ಸ್ಟಾಂಡ್ ಗಳಲ್ಲಿ ಮೊಬೈಲ್ ಫೋನ್ ಬಳಸುವುದರಿಂದ ಸಮಸ್ಯೆಯಾಗುತ್ತದೆ ಎಂದು ಆಪಲ್ ಕಂಪನಿ ತಿಳಿಸಿದೆ. ಮಾರ್ಗವನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಬಳಸುವ ಮೊಬೈಲ್ ಸ್ಟ್ಯಾಂಡ್‌ಗಳಿಂದ ತೊಂದರೆ ಉಂಟಾಗುತ್ತದೆ ಎಂದು ಆಪಲ್ ಕಂಪನಿ ತಿಳಿಸಿದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ದ್ವಿಚಕ್ರ ವಾಹನಗಳ ಮೇಲೆ ಮೌಂಟ್ ಮಾಡಲಾಗುವ ಮೊಬೈಲ್ ಸ್ಟಾಂಡ್ ಗಳಲ್ಲಿ ಮೊಬೈಲ್ ಗಳನ್ನು ಇತ್ತು ಪ್ರಯಾಣಿಸುವುದರಿಂದ ಮೊಬೈಲ್ ಕ್ಯಾಮರಾ ಹಾಗೂ ಸೆಲ್ ಫೋನ್ ಗಳ ಇತರ ಸೂಕ್ಷ್ಮ ಭಾಗಗಳಿಗೆ ಹಾನಿಯಾಗುತ್ತದೆ ಎಂದು ಕಂಪನಿ ನಡೆಸಿದ ಅಧ್ಯಯನಗಳ ಆಧಾರದ ಮೇಲೆ ಕಂಪನಿ ಮಾಹಿತಿ ನೀಡಿದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ದ್ವಿಚಕ್ರ ವಾಹನಗಳ ಸೆಲ್‌ಫೋನ್ ಸ್ಟ್ಯಾಂಡ್‌ಗಳನ್ನು ನೇರವಾಗಿ ದ್ವಿಚಕ್ರ ವಾಹನ ಹ್ಯಾಂಡಲ್‌ಬಾರ್‌ಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಹ್ಯಾಂಡಲ್ ಬಾರ್ ದ್ವಿಚಕ್ರ ವಾಹನಗಳಲ್ಲಿ ಅತಿ ಹೆಚ್ಚು ಕಂಪಿಸುವ ಭಾಗಗಳಲ್ಲಿ ಒಂದಾಗಿದೆ. ಇದರಿಂದ ಸಹಜವಾಗಿಯೇ ಹ್ಯಾಂಡಲ್ ಬಾರ್‌ನಲ್ಲಿರುವ ಸೆಲ್ ಫೋನ್ ಸ್ಟ್ಯಾಂಡ್ ಗಳಲ್ಲಿ ಇಡುವ ಮೊಬೈಲ್ ಫೋನ್ ಗಳು ಹೆಚ್ಚು ವೈಬ್ರೆಷನ್ ಗೆ ಒಳಗಾಗುತ್ತವೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಅದರಲ್ಲೂ ಹೆಚ್ಚು ಪರ್ಫಾಮೆನ್ಸ್ ಹೊಂದಿರುವ ದ್ವಿಚಕ್ರ ವಾಹನಗಳು ಹೆಚ್ಚುವರಿ ಕಂಪನಗಳನ್ನು ಉಂಟು ಮಾಡುತ್ತವೆ. ಇದರಿಂದ ಮೊಬೈಲ್ ಫೋನ್ ಗಳಲ್ಲಿರುವ ಕ್ಯಾಮೆರಾಗಳ ಲೆನ್ಸ್ ನಂತಹ ಪ್ರಮುಖ ಭಾಗಗಳು ಬೇಗನೆ ಹಾಳಾಗುತ್ತವೆ. ನಿಯಮಿತವಾಗಿ ಈ ರೀತಿ ಮೊಬೈಲ್ ಬಳಸುವವರ ಮೊಬೈಲ್ ಫೋನ್ ಗಳು ಭಾರೀ ಪ್ರಮಾಣದಲ್ಲಿ ಹಾನಿಗೀಡಾಗುತ್ತವೆ ಎಂದು ಕಂಪನಿ ವರದಿ ಮಾಡಿದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಹೆಚ್ಚು ಕಂಪನ ಒಐಎಸ್ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಹಾಗೂ ಆಟೋ ಫೋಕಸ್ (ಕ್ಲೋಸ್ಡ್-ಲೂಪ್ ಆಟೋಫೋಕಸ್) ಸಿಸ್ಟಂಗಳು ಸಹ ಬೇಗನೆ ಹಾನಿಗೀಡಾತ್ತವೆ ಎಂದು ಹೇಳಲಾಗಿದೆ. ವಾಹನ ಚಲನೆಯಲ್ಲಿರುವಾಗಲೂ ಸ್ಥಿರವಾದ ಚಿತ್ರವನ್ನು ತೆಗೆದುಕೊಳ್ಳಲು ಒಐಎಸ್ ವಾಹನ ಸವಾರರಿಗೆ ನೆರವಾಗುತ್ತದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಗೈರೊಸ್ಕೋಪ್ ಸೆನ್ಸಾರ್‌ಗಳನ್ನು ಸೇರಿಸುವುದರಿಂದ ಮಸುಕಾಗದ ರೀತಿಯಲ್ಲಿ ಚಿತ್ರಗಳನ್ನು ಸ್ಪಷ್ಟವಾಗಿ ಸೆರೆ ಹಿಡಿಯಲು ಸಾಧ್ಯವಾಗುತ್ತದೆ. ವಾಹನ ಚಲನೆಯಲ್ಲಿರುವಾಗ ಸೆಲ್ ಫೋನ್ ಸ್ಟ್ಯಾಂಡ್‌ನಲ್ಲಿ ಐಫೋನ್‌ಗಳು ಇದ್ದರೆ ಈ ಸೆನ್ಸಾರ್ ಆಟೋಮ್ಯಾಟಿಕ್ ಆಗಿ ಆಕ್ಟಿವೇಟ್ ಆಗುತ್ತದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಇದರಿಂದ ಅಗತ್ಯವಿಲ್ಲದಿದ್ದಾಗ ಹೆಚ್ಚು ಸಮಯ ಕೆಲಸ ನಿರ್ವಹಿಸಲು ಆರಂಭಿಸುತ್ತದೆ. ಪರಿಣಾಮವಾಗಿ ಅದರ ಬಾಳಿಕೆ ಕಡಿಮೆಯಾಗುತ್ತದೆ. ಜೊತೆಗೆ ಕ್ಯಾಮೆರಾದ ಮುಖ್ಯ ಸೆನ್ಸಾರ್ ಗಳು ಬೇಗ ಹಾನಿಗೀಡಾಗುತ್ತವೆ. ಈ ಕಾರಣಕ್ಕೆ ಕಂಪನಿಯು ಈಗ ಐಫೋನ್‌ಗಳನ್ನು ಹೆಚ್ಚು ಶಕ್ತಿಶಾಲಿ ಅಥವಾ ಕಂಪಿಸುವ ಬೈಕ್ ಗಳ ಹ್ಯಾಂಡ್ ಬಾರ್‌ಗಳಲ್ಲಿ ಬಳಸುವುದು ಸರಿಯಲ್ಲವೆಂದು ಹೇಳಿದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಡೆಲಿವರಿ ಕೆಲಸ ಮಾಡುವ ಬಹುತೇಕ ಜನರು ತಮ್ಮ ಸೆಲ್ ಫೋನ್‌ಗಳನ್ನು ದ್ವಿಚಕ್ರ ವಾಹನಗಳ ಹ್ಯಾಂಡ್ ಬಾರ್‌ಗಳಲ್ಲಿರುವ ಮೊಬೈಲ್ ಸ್ಟಾಂಡ್ ಗಳಿಗೆ ಅಳವಡಿಸುತ್ತಾರೆ. ಆಪಲ್ ಕಂಪನಿಯು ನೀಡಿರುವ ಈ ಮಾಹಿತಿಯ ನಂತರವಾದರೂ ವಾಹನ ಸವಾರರು ಈ ರೀತಿ ಮಾಡದಂತೆ ಎಚ್ಚೆತ್ತು ಕೊಳ್ಳಬೇಕಿದೆ. ಇದರಿಂದ ಮೊಬೈಲ್ ಫೋನ್ ಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ದ್ವಿಚಕ್ರ ವಾಹನಗಳ ಮೊಬೈಲ್ ಸ್ಟಾಂಡ್'ಗಳಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ ಆಪಲ್ ಕಂಪನಿ

ಆದರೆ ವಿತರಣಾ ಸೇವೆಯಲ್ಲಿ ತೊಡಗಿರುವವರು ಈ ರೀತಿ ಮೊಬೈಲ್ ಫೋನ್ ಬಳಸುವುದು ತಮಗೆ ಅನಿವಾರ್ಯವೆಂದು ಹೇಳಿದ್ದಾರೆ. ನ್ಯಾವಿಗೇಷನ್ ಆಪ್ ಗಳಿಂದ ಸಮಯಕ್ಕೆ ಸರಿಯಾಗಿ ಆರ್ಡರ್ ಪೂರೈಸಲು ಸಾಧ್ಯವಾಗುತ್ತದೆ. ಅಂತಹ ಸ್ಟಾಂಡ್ ಗಳನ್ನು ಬಳಸದೇ ಇದ್ದರೆ ಸಕಾಲಕ್ಕೆ ಯಾವುದೇ ಆರ್ಡರ್ ಗಳನ್ನು ಪೂರ್ಣಗೊಳಿಸಲಾಗುವುದಿಲ್ಲವೆಂಬುದು ಡೆಲಿವರಿ ಸೇವೆಯಲ್ಲಿರುವವರ ಅಭಿಪ್ರಾಯ.

Most Read Articles

Kannada
English summary
Apple company warns motorists not to use mobile phones in two wheeler mobile stand details
Story first published: Monday, September 13, 2021, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X