ಪಾರ್ಸೆಲ್ ಡಬ್ಬದಲ್ಲಿ ಬಂದ ರೂ.4 ಲಕ್ಷದ ಬೈಕ್.. ವಿತರಣೆ ಪಡೆದ ಮಗುವಿನ ತಾಯಿ!

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಬೈಕ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಮೋಟಾರ್‌ಸೈಕಲ್‌ಗಳ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದು, ತಮಿಳುನಾಡಿನಲ್ಲಿ ಮಗುವಿನ ತಾಯಿಯೊಬ್ಬರು ದುಬಾರಿ ಬೆಲೆಯ ಎಪ್ರಿಲಿಯಾ ಆರ್‌ಎಸ್ 457 (Aprilia RS 457) ಬೈಕ್‌ನ್ನು ಕೊಂಡುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ತಮಿಳುನಾಡಿನಲ್ಲಿ ವಿತರಣೆಗೊಂಡ ಮೊದಲ ಎಪ್ರಿಲಿಯಾ ಆರ್‌ಎಸ್ 457 ಮೋಟಾರ್‌ಸೈಕಲ್‌ ಇದಾಗಿದೆ. ಟ್ರಕ್​ನಿಂದ ಎಪ್ರಿಲಿಯಾ ಬೈಕ್‌ಯಿರುವ ಪಾರ್ಸೆಲ್ ಡಬ್ಬವನ್ನು ಇಳಿಸಿ, ಶೋರೂಂವೊಂದರ ಸರ್ವಿಸ್ ಸೆಂಟರ್‌ನೊಳಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಡಬ್ಬದಿಂದ ಮಹಿಳೆಯು ಮತ್ತೊಬ್ಬರ ನೆರವಿನಿಂದ ಮೋಟಾರ್‌ಸೈಕಲ್‌ನ್ನು ಹೊರತೆಗೆಯುತ್ತಾರೆ. ಆ ಬಳಿಕ, ಮಗುವಿನೊಂದಿಗೆ ಕೇಸ್ ಕತ್ತರಿ ಸಂಭ್ರಮಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು.

Aprilia RS 457 First Bike Delivery In Tamil Nadu Received By Young Mother

ಈ ಮಹಿಳೆಗೆ ಬೈಕ್‌ಗಳ ಮೇಲೆ ತುಂಬಾ ಪ್ರೀತಿಯಿದ್ದು, ಈಗಾಗಲೇ ಹಲವು ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾನಾ ಬಗೆಯ ಬೈಕ್‌ಗಳನ್ನು ಓಡಿಸುತ್ತಿರುವ ಸಾಕಷ್ಟು ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಕವಾಸಕಿ ನಿಂಜಾ ಝಡ್ 900, ಯಮಹಾ ಎಂಟಿ 15 ಹಾಗೂ ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಸೇರಿದಂತೆ ವಿವಿಧ ಮೋಟಾರ್‌ಸೈಕಲ್‌ಗಳ ಒಡತಿಯು ಆಗಿದ್ದಾರೆ ಎನ್ನಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಪ್ರಿಲಿಯಾ ಆರ್‌ಎಸ್ 457 (Aprilia RS 457) ಬೈಕ್, ರೂ.4.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 457 ಸಿಸಿ ಎಂಜಿನ್ ಹೊಂದಿದ್ದು, 46.9 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 43.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಪಡೆದಿದೆ.

Aprilia RS 457 First Bike Delivery In Tamil Nadu Received By Young Mother

ಈ ಎಪ್ರಿಲಿಯಾ ಆರ್‌ಎಸ್ 457 ಮೋಟಾರ್‌ಸೈಕಲ್‌ 30 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, ಎಲ್ಇಡಿ ಲೈಟಿಂಗ್ ಸೆಟಪ್, 5 - ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರೈಡ್-ಬೈ-ವೈರ್ ಸಿಸ್ಟಮ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಪೋರ್ಟ್, ರೋಡ್ & ರೈನ್ ಎಂಬ ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿದೆ.

ನೂತನ ಎಪ್ರಿಲಿಯಾ ಆರ್‌ಎಸ್ 457 ಬೈಕ್, ಮುಂಭಾಗ (ಫ್ರಂಟ್) 320 ಎಂಎಂ ಮತ್ತು ಹಿಂಭಾಗ (ರೇರ್) 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಕೂಡ ಒಳಗೊಂಡಿದೆ.17-ಇಂಚಿನ ಅಲಾಯ್ ವೀಲ್ಸ್ ಹೊಂದಿರುವ ಈ ಮೋಟಾರ್‌ಸೈಕಲ್‌, 175 ಕೆಜಿ ತೂಕವಿದೆ. ಹಾಗೆಯೇ ಟ್ಯೂಬ್ ಲೆಸ್ ಟೈಯರ್‌ಗಳನ್ನು ಪಡೆದಿದೆ.

ಈ ಬೈಕ್‌ಗೆ ಯಮಹಾ ಆರ್3, ಕೆಟಿಎಂ ಆರ್‌ಸಿ 390 ಹಾಗೂ ಕವಾಸಕಿ ನಿಂಜಾ 400 ಮೋಟಾರ್‌ಸೈಕಲ್‌ಗಳು ಪ್ರಬಲ ಎದುರಾಳಿಯಾಗಿವೆ. ವಿಶ್ವದಾದ್ಯಂತ ಪ್ರೀಮಿಯಂ ಬೈಕ್‌ಗಳನ್ನು ಮಾರಾಟಗೊಳಿಸುವ 'ಎಪ್ರಿಲಿಯಾ' ಇಟಲಿ ಮೂಲದ ವಾಹನ ತಯಾರಕ ಕಂಪನಿಯಾಗಿದೆ. ಇದನ್ನು ಎರಡನೇ ಮಹಾಯುದ್ಧದ ನಂತರ, ಆಲ್ಬರ್ಟೊ ಬೆಗ್ಗಿಯೊ ಅವರು ಸ್ಥಾಪಿಸಿದರು. ಆರಂಭದಲ್ಲಿ ಬೈಸಿಕಲ್‌ಗಳನ್ನು ತಯಾರಿಸಲಾಗುತ್ತಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 27, 2024, 17:15 [IST]
English summary
Aprilia rs 457 first bike delivery in tamil nadu received by young mother
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+