ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಇಲಾಖೆಯು ಈ ವರ್ಷ ಇದುವರೆಗೂ 12,000 ಕಿಮೀ ರಸ್ತೆ ನಿರ್ಮಾಣದ ಗುರಿಯಲ್ಲಿ 5,600 ಕಿ.ಮೀ ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯ ಹೊರತಾಗಿಯೂ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಗುರಿ ಸಾಧಿಸಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಗಿರಿಧರ್ ಅರಮನೆ ರವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಈ ಬಗ್ಗೆ ಮಾತನಾಡಿದ ಗಿರಿಧರ್ ಅರಮನೆ ರವರು, ಈ ವರ್ಷ ಸುಮಾರು 12 ಸಾವಿರ ಕಿ.ಮೀ ಗುರಿ ಹೊಂದಿದ್ದು, ಇಲ್ಲಿಯವರೆಗೆ 5,600 ಕಿ.ಮೀ ಗುರಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಉಳಿದ ರಸ್ತೆ ನಿರ್ಮಾಣ ಕಾರ್ಯವು ಸಹ ಉತ್ತಮ ಸ್ಥಿತಿಯಲ್ಲಿವೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ನಮ್ಮ ಗುರಿಯನ್ನು ಪೂರೈಸುವ ಬಗ್ಗೆ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 2018 ಹಾಗೂ 2019 ರ ಅವಧಿಗೆ ಹೋಲಿಸಿದರೆ ಈಗಿರುವ ರಸ್ತೆ ನಿರ್ಮಾಣದ ವೇಗವು ಉತ್ತಮವಾಗಿಲ್ಲ. ಈಗ ನಾವು 6 ಲೇನ್ ಹಾಗೂ 8 ಲೇನ್ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು. ಲೇನ್ - ಕಿ.ಮೀ ನಿರ್ಮಾಣವು ಐತಿಹಾಸಿಕ ಸರಾಸರಿಗೆ ಹೋಲಿಸಿದರೆ 1.5 ಪಟ್ಟು ಹತ್ತಿರದಲ್ಲಿದೆ. 2018 ಹಾಗೂ 2019ರ ಅವಧಿಗೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷವು ಉತ್ತಮವಾಗಿಲ್ಲ.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ನಮ್ಮ ಗುರಿ ಹೆಚ್ಚಾಗಿದ್ದು, ನಾವು ಈಗ ನಿರ್ಮಿಸುತ್ತಿರುವ ರಸ್ತೆಗಳು ಹಿಂದಿನ ರಸ್ತೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ಗಿರಿಧರ್ ಅರಮನೆ ಹೇಳಿದರು. 2018 ಹಾಗೂ 2019 ರಲ್ಲಿ ಮುಖ್ಯವಾಗಿ ನಾಲ್ಕು ಲೇನ್ ಹಾಗೂ ದ್ವಿಪಥಕ್ಕೆ ಹೋಲಿಸಿದರೆ ನಾವು ಈಗ ಹೆಚ್ಚಾಗಿ ಎಂಟು ಲೇನ್, ಎಕ್ಸ್‌ಪ್ರೆಸ್‌ವೇ ಹಾಗೂ ಕೆಲವು ರಾಜ್ಯಗಳಲ್ಲಿ ಆರು ಪಥದ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ನಿರ್ಮಾಣವು ತುಂಬಾ ಹೆಚ್ಚಾಗಿದೆ. ನಾವು ಲೇನ್ ಕಿ.ಮೀ ಅನ್ನು ನೋಡಿದಾಗ, ಆ ಎರಡು ವರ್ಷಗಳಿಗಿಂತ ಸುಮಾರು 1.5ರಿಂದ 1.8 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಭಾರತಮಾಲಾ ಯೋಜನೆ ಬಗ್ಗೆ ಮಾತನಾಡಿದ ಅವರು, ಈವರೆಗೆ ನಾವು 6,600 ಕಿ.ಮೀಗಳ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ವರ್ಷಾಂತ್ಯದ ವೇಳೆಗೆ ಇನ್ನೂ 1,100 - 1,200 ಕಿ.ಮೀ ಪೂರ್ಣಗೊಳಿಸುತ್ತೇವೆ. ನಾವು ನಿರ್ಮಾಣದ ವಿಷಯದಲ್ಲಿ ವರ್ಷಾಂತ್ಯದ ವೇಳೆಗೆ ಭಾರತಮಾಲಾ ಯೋಜನೆಯಡಿಯಲ್ಲಿ 7,800 - 8,000 ಕಿ.ಮೀಗಳಷ್ಟು ರಸ್ತೆ ನಿರ್ಮಾಣ ಮಾಡಲಿದ್ದೇವೆ. ನಾವು ಈಗಾಗಲೇ 19,500 ಕಿ.ಮೀಗಳಷ್ಟು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ವರ್ಷಾಂತ್ಯದ ವೇಳೆಗೆ, ನಾವು ಐದು ವರ್ಷಗಳ ಅವಧಿಯಲ್ಲಿ ಮಾಡಲು ಯೋಜಿಸಿರುವ ಒಟ್ಟು 34,000 ಕಿ.ಮೀಗಳಲ್ಲಿ ಕನಿಷ್ಠ 21,600 ಕಿ.ಮೀ ಕ್ರಮಿಸುತ್ತೇವೆ ಎಂದು ಅವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಅವರು ಟಿಒಟಿ ಯೋಜನೆ ಹಾಗೂ ಹಣಗಳಿಕೆ ಕುರಿತು ಸಹ ಮಾಹಿತಿ ನೀಡಿದರು. ನಾವು ಈಗಾಗಲೇ ಟೋಲ್ ಆಪರೇಟ್ ಟ್ರಾನ್ಸ್‌ಫರ್ (ಟಿಒಟಿ) ಬಂಡಲ್‌ಗಳ ಮೂಲಕ ಸುಮಾರು ರೂ. 2,200 ಕೋಟಿ ಹಣ ಪಡೆದಿದ್ದೇವೆ. ನಾವು ಈ ವರ್ಷ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (ಇನ್ವಿಟ್) ಮೂಲಕ ಸುಮಾರು ರೂ. 8,000 ಕೋಟಿ ಸಂಗ್ರಹಿಸಿದ್ದೇವೆ. ನಮ್ಮ ಬಳಿ ಬಿಡ್ಡಿಂಗ್‌ಗಾಗಿ ಇನ್ನೂ ಎರಡು ಬಂಡಲ್ ಸಿದ್ಧವಾಗಿದೆ ಎಂದು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಇದಲ್ಲದೆ ನಾವು ಕೆಲವು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಅಂದರೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ರಾಯ್‌ಪುರ-ವೈಜಾಗ್ ಎಕ್ಸ್‌ಪ್ರೆಸ್‌ವೇ ಹಾಗೂ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಗಳಲ್ಲಿ 3 ಎಸ್‌ಪಿವಿಗಳನ್ನು ಸಹ ಸುರಕ್ಷಿತಗೊಳಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಈ ಎಕ್ಸ್‌ಪ್ರೆಸ್‌ವೇಗಳು ಭವಿಷ್ಯದ ಟೋಲ್ ಆದಾಯವನ್ನು ಹಣಗಳಿಸಲು ಹಾಗೂ ಹಣ ಸಂಗ್ರಹಿಸಲು ನೆರವಾಗುತ್ತವೆ. ಆ ಹಣವನ್ನು ಅವುಗಳ ನಿರ್ಮಾಣ ಹಾಗೂಕಾರ್ಯಾಚರಣೆಯ ಹಂತದಲ್ಲಿ ಪಡೆದ ಟೋಲ್ ಆದಾಯದ ಮೂಲಕ ಪಾವತಿಸಲಾಗುತ್ತದೆ. ಇದರಿಂದ ನಾವು ನೀಡಿದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಗಿರಿಧರ್ ಅರಮನೆರವರು ವಿವರಿಸಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ವಾಹನಗಳ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಶೀಘ್ರದಲ್ಲೇ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಚಲಿಸುವ ವಾಹನಗಳ ವೇಗವನ್ನು ಹೆಚ್ಚಿಸುವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ನಾವು ವೇಗದ ಮಿತಿಯನ್ನು ಹೆಚ್ಚಿಸುವುದರ ಪರವಾಗಿದ್ದೇವೆ ಆದರೆ ಸುಪ್ರೀಂ ಕೋರ್ಟ್ ಹಾಗೂ ಕೆಲವು ಹೈಕೋರ್ಟ್‌ಗಳಿಂದ ಕೆಲವು ಅಡೆ ತಡೆಗಳಿವೆ, ಇದರಿಂದಾಗಿ ನಾವು ಬಯಸಿದರೂ ವೇಗದ ಮಿತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಸಂಸತ್ತಿನಲ್ಲಿ ಮಸೂದೆಯ ಮೂಲಕ ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ವಾಹನಗಳ ವೇಗದ ಮಿತಿಯ ಭಾರತದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸಿದರೆ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ನಾವು ಈ ಮನಸ್ಥಿತಿಯಿಂದ ಹೊರ ಬರಬೇಕು. ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳ ವೇಗದ ಮಿತಿ ಪ್ರತಿ ಗಂಟೆಗೆ 140 ಕಿ.ಮೀ ಆಗಿರಬೇಕು ಎಂದು ತಾನು ವೈಯಕ್ತಿಕವಾಗಿ ನಂಬುತ್ತೇನೆ ಎಂದು ಗಡ್ಕರಿ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳ ನಾಲ್ಕು ಪಥದ ರಸ್ತೆಗಳಲ್ಲಿ ಚಲಿಸುವ ವಾಹನಗಳ ವೇಗದ ಮಿತಿ ಕನಿಷ್ಠ 100 ಕಿ.ಮೀ ಆಗಿರಬೇಕು. ಎರಡು ಪಥದ ರಸ್ತೆಗಳು 80 ಕಿ.ಮೀಗಳಿಗೆ ಹಾಗೂ ನಗರ ರಸ್ತೆಗಳ ವೇಗದ ಮಿತಿಯನ್ನು 75 ಕಿ.ಮೀಗಳಿಗೆ ಹೆಚ್ಚಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದರು. ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಒಂದು ಬ್ಯಾರಿಕೇಡಿಂಗ್‌ ಮಾಡಲಾಗಿದ್ದು, ಒಂದು ಪ್ರಾಣಿಯೂ ಪ್ರವೇಶಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ವಿವಿಧ ವಾಹನಗಳಿಗೆ ವಿವಿಧ ರೀತಿಯ ಗರಿಷ್ಠ ವೇಗದ ಮಿತಿಯನ್ನು ನಿಗದಿಪಡಿಸಲಾಗುವುದು ಎಂದು ಗಡ್ಕರಿ ಹೇಳಿದರು. ನ್ಯಾಯಾಲಯಗಳ ಕುರಿತು ಪ್ರತಿಕ್ರಿಯೆ ನೀಡಿದ ನಿತಿನ್ ಗಡ್ಕರಿರವರು, ಪ್ರಜಾಪ್ರಭುತ್ವದಲ್ಲಿ ನಮಗೆ ಕಾನೂನುಗಳನ್ನು ಮಾಡುವ ಹಕ್ಕಿದೆ ಹಾಗೂ ನ್ಯಾಯಾಧೀಶರಿಗೆ ಕಾನೂನನ್ನು ಅರ್ಥೈಸುವ ಹಕ್ಕಿದೆ. ಭಾರತೀಯ ರಸ್ತೆಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಪರಿಷ್ಕರಿಸಲು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 5600 ಕಿ.ಮೀ ರಸ್ತೆ ನಿರ್ಮಿಸಿದ ಕೇಂದ್ರ ಸರ್ಕಾರ

ದೇಶವು ಪರಿಸರ ಮಾಲಿನ್ಯ ಹಾಗೂ ಆರ್ಥಿಕತೆಯಿಂದಾಗಿ ಹಲವು ಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರವು ಸದ್ಯಕ್ಕೆ ಇಂಧನ ಆಮದಿಗಾಗಿ ವಾರ್ಷಿಕವಾಗಿ ರೂ. 8 ಲಕ್ಷ ಕೋಟಿ ವ್ಯಯಿಸುತ್ತಿದೆ. ಈ ಪ್ರಮಾಣವು ಮುಂದಿನ ಐದು ವರ್ಷಗಳಲ್ಲಿ ರೂ. 25 ಲಕ್ಷ ಕೋಟಿಗಳಾಗುತ್ತದೆ ಎಂದು ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬಳಕೆಯಿಂದ ಮಾಲಿನ್ಯವು ಹೆಚ್ಚುತ್ತಿದೆ.

Most Read Articles

Kannada
English summary
Around 5600 kms highway construction completed in current fy details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X