ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಸಿನಿಮಾ, ಧಾರಾವಾಹಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಮಲ್ಲಿಕಾ ಸುಕುಮಾರನ್ ಮಲಯಾಳಂ ಸಿನಿರಂಗದ ಜನಪ್ರಿಯ ನಟಿ. ಅಲ್ಲದೇ ಮಲಯಾಳಂ ಚಿತ್ರರಂಗದ ಟಾಪ್ ನಟರಾದ ಪೃಥಿರಾಜ್ ಮತ್ತು ಇಂದ್ರಜಿತ್ ಅವರ ತಾಯಿಯಾಗುವುದರ ಹೊರತಾಗಿ, ಮಲ್ಲಿಕಾ ಸುಕುಮಾರನ್ ಸಿನಿರಂಗದ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದ್ದಾರೆ.

Recommended Video

Mahindra Scorpio Classic Launched | Price At Rs 11.99 Lakh | Scorpio Classic Vs Scorpio N In Kannada

ಮಲ್ಲಿಕಾ ಸುಕುಮಾರನ್ ಅವರು ಹೊಸ ಕಾರು ಖರೀದಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಖರೀದಿಸಿದ ಕಾರು ಮಾದರಿಯು ಎಂಜಿ ಹ್ಹೆಕ್ಟರ್ ಪ್ಲಸ್ ಎಸ್‍ಯುವಿಯಾಗಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿಯನ್ನು ಖರೀದಿಸಿದ ಬಳಿಕ ಮಲ್ಲಿಕಾ ಸುಕುಮಾರನ್ ಸಂತಸ ವ್ಯಕ್ತಪಡಿಸಿದ್ದಾರೆ. ಮೊಮ್ಮಕ್ಕಳಾದ ಪ್ರತನ್ನ, ನಕ್ಷತ್ರ ಮತ್ತು ಅಲಂಕೃತ ತಮ್ಮ ಅಜ್ಜಿಯೊಂದಿಗೆ ಒಟ್ಟಿಗೆ ವಾಕಿಂಗ್ ಹೋಗಬೇಕು. ಈ ಬಾರಿ ಓಣಂಗೆ ಎಲ್ಲರೂ ತಿರುವನಂತಪುರದಲ್ಲಿ ಸೇರಲಿದ್ದು, ಈ ವೇಳೆ ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಅತಿಥಿಯಾಗಲಿದೆ ಎಂದು ಮಲ್ಲಿಕಾ ಸುಕುಮಾರನ್ ಹೇಳಿದ್ದಾರೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಪೃಥ್ವಿರಾಜ್ ಮತ್ತು ಅವರ ಪತ್ನಿ ಸುಪ್ರಿಯಾ ವಾಹನವನ್ನು ಖರೀದಿಸಲು ಬರುವ ಮೊದಲು ಟೆಸ್ಟ್ ಡ್ರೈವ್‌ಗಾಗಿ ನೋಡಿದ್ದರು. ಇಂದ್ರಜಿತ್ ಟೆಸ್ಟ್ ಡ್ರೈವ್ ಗೆ ಬಂದಿದ್ದರು. ಇಬ್ಬರೂ ಫೋಟೋಗಾಗಿ ಕಾಯುತ್ತಿದ್ದಾರೆ ಎಂದು ನಟ ಹೆಕ್ಟರ್ ಅವರ ವಿತರಣೆಯ ಸಮಯದಲ್ಲಿ ಹೇಳಿದರು. ಕೆಲೆವು ಸ್ಥಳಗಳಿಗೆ ಪ್ರಯಾಣಿಸಲು ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ವಾಹನವನ್ನು ತೆಗೆದುಕೊಳ್ಳಲಾಗಿದೆ ಎಂದು ಮಲ್ಲಿಕಾ ಹೇಳಿದರು.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಎಂಜಿ ಕೋಸ್ಟ್‌ಲೈನ್ ಕೊಚ್ಚಿ ಶೋರೂಮ್‌ನಿಂದ ಮಲ್ಲಿಕಾ ಅವರು ಸಿಲ್ವರ್ ಬಣ್ಣದ ಹೊಸ ಎಂಜಿ ಹ್ಹೆಕ್ಟರ್ ಪ್ಲಸ್ ಎಸ್‍ಯುವಿಯ ವಿತರಣೆಯನ್ನು ಪಡೆದಿದ್ದಾರೆ. ಹೆಕ್ಟರ್ ಪ್ಲಸ್ ಮಾದರಿಯು ಹೆಕ್ಟರ್‌ನ 6 ಮತ್ತು 7 ಆಸನಗಳ ಆವೃತ್ತಿಯಾಗಿದೆ, ಇದು ದೇಶದಲ್ಲಿ ಇಂಟರ್ನೆಟ್ ಸಂಪರ್ಕಿತ ಎಸ್‌ಯುವಿಯಾಗಿ ಜನಪ್ರಿಯವಾಗಿದೆ. ಈ ವಾಹನದ ಎಕ್ಸ್ ಶೋ ರೂಂ ಬೆಲೆಯು ರೂ.16.15 ಲಕ್ಷದಿಂದ ರೂ.20.75 ಲಕ್ಷವಾಗಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಎಂಜಿ ಹೆಕ್ಟರ್ ಪ್ಲಸ್‌ನ ಯಾವ ರೂಪಾಂತರವು ಮಲ್ಲಿಕಾ ಸುಕುಮಾರನ್ ಅವರು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಈ ಎಂಜಿ ಹೆಕ್ಟರ್ ಪ್ಲಸ್‌ 10 ವಿಭಿನ್ನ ರೂಪಾಂತರಗಳಲ್ಲಿ ಬರುತ್ತದೆ. ಹೆಕ್ಟರ್ ಪ್ಲಸ್ ಡೀಸೆಲ್ ಮತ್ತು ಪೆಟ್ರೋಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತು ಇದು ನಿಸ್ಸಂದೇಹವಾಗಿ ಈ ವಿಭಾಗದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣ ಕಾರುಗಳಲ್ಲಿ ಒಂದಾಗಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಹೆಕ್ಟರ್ ಪ್ಲಸ್‌ನಲ್ಲಿ ಗ್ರಾಹಕರು ತಮ್ಮಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಅತ್ಯುತ್ತಮ ಮೈಲೇಜ್ ಜೊತೆ ಪರ್ಫಾಮೆನ್ಸ್ ಮಾದರಿಯಾಗಿರುವ ಪೆಟ್ರೋಲ್ ಹೈಬ್ರಿಡ್ ಮಾದರಿಗೆ ಉತ್ತಮ ಬೇಡಿಕೆಯಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಇದರಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 141 ಬಿಹೆಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 168 ಬಿಹೆಚ್‌ಪಿ, 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮೈಲ್ಡ್ ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆಯ್ದ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಈ ಹೊಸ ಕಾರಿನ ಎಂಜಿನ್‌ಗಳನ್ನು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಮತ್ತು 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯಾಗಿ ಹೊಂದಿದೆ. ಇದರೊಂದಿಗೆ ಈ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಂಜಿ ಕಂಪನಿಯು ಹೊಸ ಕಾರಿನ ಮೂಲಕ ಎಂಪಿವಿ ಕಾರು ಖರೀದಿದಾರನ್ನು ಸೆಳೆಯುತ್ತಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಇನ್ನು ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಯ ಮುಂದುವರಿದ ಭಾಗವಾಗಿರುವ ಹೆಕ್ಟರ್ ಪ್ಲಸ್ ಮಾದರಿಯನ್ನು ಎಂಪಿಪಿ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಲಾಗಿದ್ದು, ಪ್ರತ್ಯೇಕ ಕ್ಯಾಪ್ಟನ್ ಸೀಟ್ ಸೌಲಭ್ಯದ ಮೂಲಕ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯುತ್ತಿದೆ. ಈ ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಹೊಸ ಕಾರು ಸಾಮಾನ್ಯ ಹೆಕ್ಟರ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿದ್ದು, 2+2+2, 2+3+ 2 ಮಾದರಿಯ ಆಸನ ವಿನ್ಯಾಸವನ್ನು ಪಡೆದುಕೊಂಡಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಈ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇನ್ನು ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್, ಪನೊರಮಿಕ್ ಸನ್‌ರೂಫ್ ಸೌಲಭ್ಯವಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಜೊತೆಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, 10.4-ಇಂಚಿನ ವರ್ಟಿಕಲ್ ಇನ್ಪೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಸ್ಮಾರ್ಟ್ ಫೋನ್ ಕೆನೆಕ್ವಿಟಿ, ವೈ-ಫೈ ಸೌಲಭ್ಯ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಈ ಎಸ್‍ಯುವಿಯು 4,720-ಎಂಎಂ ಉದ್ದ, 1,835-ಎಂಎಂ ಅಗಲ, 1,760-ಎಂಎಂ ಅಗಲ ಮತ್ತು 2,720-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಇದು ಸಾಮಾನ್ಯ ಹೆಕ್ಟರ್ ಮಾದರಿಗಿಂತ 65-ಎಂಎಂ ಹೆಚ್ಚುವರಿ ಉದ್ದವನ್ನು ಪಡೆದುಕೊಂಡಿದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಖರೀದಿಸಿದ ಸ್ಟಾರ್ ನಟನ ಅಮ್ಮ

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷ ಎಂದರೆ ಅದು ಐ-ಸ್ಮಾಟ್ ಟೆಕ್ನಾಲಜಿ. ಇದರಲ್ಲಿ ಇ-ಸಿಮ್ ಜೋಡಣೆ ಮಾಡಲಾಗಿದ್ದು, 55 ಕೆನೆಕ್ಟೆಡ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಹೊಸ ತಂತ್ರಜ್ಞಾನದಲ್ಲಿ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಕಾರಿನೊಂದಿಗೆ ಸಂಹವನ ಮಾಡಬಹುದಾದ ಸೌಲಭ್ಯ ಇದರಲ್ಲಿದೆ.

Most Read Articles

Kannada
English summary
Artist mallika sukumaran buys new mg hector plus suv details
Story first published: Monday, August 22, 2022, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X