ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ರಾಜಕೀಯ ಪಕ್ಷದ ಮುಖಂಡರು ಸಾಮಾನ್ಯವಾಗಿ ಐಷಾರಾಮಿ ಕಾರು, ವಿಮಾನಗಳನ್ನು ಖರೀದಿ ಮಾಡುವುದು ಅಥವಾ ಚಾಲನೆ ಮಾಡುವುದು ಸಾಮಾನ್ಯ. ಆದ್ರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮ ಖಂಡು ಅವರು ಪ್ರವಾಸದೋದ್ಯಮ ಉತ್ತೇಜನಕ್ಕಾಗಿ ವಿಭಿನ್ನ ರೀತಿ ಪ್ರಚಾರ ಕೈಗೊಂಡಿರುವುದಲ್ಲದೇ ಬೈಕ್ ರೈಡ್ ಮೂಲಕ ಪ್ರವಾಸಿಗರ ಗಮನಸೆಳೆದಿದ್ದಾರೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ರಾಜ್ಯಗಳ ಆದಾಯ ಹೆಚ್ಚಿಸುವಲ್ಲಿ ಪ್ರವಾಸೋದ್ಯಮವು ಮಹತ್ವ ಪಾತ್ರ ಹೊಂದಿದ್ದು, ಪ್ರವಾಸಿಗರನ್ನು ಸೆಳೆಯಲು ಪ್ರತಿಯೊಂದು ರಾಜ್ಯಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇರುತ್ತವೆ. ಇದೀಗ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮ ಖಂಡು ಅವರು ಕೂಡಾ ವಿಭಿನ್ನವಾಗಿ ಪ್ರವಾಸಿಗರನ್ನು ಸೆಳೆಯಲು ಮುಂದಾಗಿರುವುದಲ್ಲದೇ ಬೈಕ್ ಅಡ್ವೆಂಚರ್ ಉತ್ತೇಜಿಸಲು ಸ್ವತಃ ಮುಖ್ಯಮಂತ್ರಿಗಳೇ ಬರೋಬ್ಬರಿ 122 ಕಿ.ಮೀ ಬೈಕ್ ರೈಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಾತ್ರರಾಗಿದ್ದಾರೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಘಾಟಿ ಪ್ರದೇಶಗಳಲ್ಲಿ ಬೈಕ್ ಅಡ್ವೆಂಚರ್ ಉತ್ತೇಜಿಸಲು ಮುಂದಾಗಿರುವ ಸಿಎಂ ಪೆಮ ಖಂಡು ಅವರು ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ಬರೋಬ್ಬರಿ 122 ಕಿ.ಮೀ ದೂರ ಕ್ರಮಿಸಿ ಅರುಣಾಚಲ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಅರುಣಾಚಲ ಪ್ರದೇಶದ ಯಿಂಗ್‌ ಕಿಯೊಂಗ್‌ನಿಂದ ಪಾಸಿಘಾಟ್ ತನಕ 122 ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮು ಖಂಡು ಅವರು ತಮ್ಮ ಬೈಕ್ ಸವಾರಿಗೆ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇಂಟರ್‌ಸೆಪ್ಟರ್ 650 ಆಯ್ಕೆ ಮಾಡುವ ಮೂಲಕ ಅಡ್ವೆಂಚರ್ ಪ್ರಿಯರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಸಿಎಂ ಪೆಮ ಖಂಡು ಅವರು ಬೈಕ್ ಸವಾರಿಗೆ ಆಯ್ಕೆ ಮಾಡಿದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅತ್ಯುತ್ತಮ ಎಂಜಿನ್ ಸಾಮರ್ಥ್ಯದೊಂದಿಗೆ ಅಡ್ವೆಂಚರ್ ಪ್ರಿಯರ ಆಕರ್ಷಣೆ ಕಾರಣವಾಗಿದ್ದು, ವಿನ್ಯಾಸ ಮತ್ತು ಗುಣಮಟ್ಟದ ಆಧಾರದ ಮೇಲೆ ನೀಡಲಾಗುವ 'ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್' ಪ್ರಶಸ್ತಿಗೂ ಇದು ಪಾತ್ರವಾಗಿದೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಕ್ಲಾಸಿಕ್ ವಿನ್ಯಾಸದ ಮತ್ತು ಅಧಿಕ ಸಾಮರ್ಥ್ಯದ ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ ಮೂಲಕ ಮತ್ತೊಂದು ಹಂತದತ್ತ ಹೆಜ್ಜೆಯಿಡುತ್ತಿದೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಇಂಟರ್‍‍ಸೆಪ್ಟರ್ 650 ಬೈಕ್ ಮಾದರಿಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.51 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.75 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

MOST READ: ಜನಪ್ರಿಯ ಎಸ್‌ಯುವಿ ಕಾರು ಖರೀದಿಸಿದ ಬಿ ಟೌನ್ ಡ್ರೀಮ್ ಗರ್ಲ್

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಆವೃತ್ತಿಯು 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

MOST READ: ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿವೆ 'ಮೇಡ್ ಇನ್ ಇಂಡಿಯಾ' ಕಿಯಾ ಸೆಲ್ಟೊಸ್

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

MOST READ: ಬಜಾಜ್ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍ಪಿ ಮತ್ತು 52-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ಪ್ರವಾಸೋದ್ಯಮ ಉತ್ತೇಜಿಸಲು 122ಕಿ.ಮೀ ಬೈಕ್ ರೈಡ್ ಮಾಡಿದ ಸಿಎಂ ಪೆಮ ಖಂಡು..!

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Article Published On: Friday, October 18, 2019, 13:26 [IST]
English summary
Arunachal Pradesh Chief Minister Pema Khandu Rides Royal Enfield Interceptor 650: Video. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+