ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಕರೋನಾ ವೈರಸ್ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ 6 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಅವರು ಆತಂಕಕಾರಿ ಎಂದು ಬಣ್ಣಿಸಿದ್ದಾರೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಈ ಲಾಕ್‌ಡೌನ್ ಏಪ್ರಿಲ್ 19ರ ರಾತ್ರಿ 10ರಿಂದ ಏಪ್ರಿಲ್ 26ರ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರಲಿದೆ. ಆನ್‌ಲೈನ್ ಮೂಲಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಲು ಲಾಕ್‌ಡೌನ್ ಅಗತ್ಯವಿದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಲಾಕ್‌ಡೌನ್'ನಿಂದ ಕೋವಿಡ್ -19 ಅನ್ನು ಪೂರ್ತಿಯಾಗಿ ತೆಗೆದು ಹಾಕಲು ಸಾಧ್ಯವಿಲ್ಲವಾದರೂ ಕರೋನಾ ಸೋಂಕು ಹರಡುವ ವೇಗವನ್ನು ಲಾಕ್‌ಡೌನ್ ಮೂಲಕ ಸೋಂಕು ಹರಡುವುದನ್ನು ನಿಧಾನಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಅಗತ್ಯ ಸೇವೆಗಳನ್ನು ನೀಡುವವರಿಗೆ ಲಾಕ್‌ಡೌನ್‌ ಅವಧಿಯಲ್ಲಿ ಹೊರಕ್ಕೆ ಹೋಗಲು ದೆಹಲಿ ಸರ್ಕಾರವು ಅವಕಾಶ ನೀಡಿದೆ. ಅಗತ್ಯ ಸೇವೆಯಲ್ಲಿ ತೊಡಗಿಸಿ ಕೊಂಡಿರುವವರು ಮಾನ್ಯ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ದೆಹಲಿ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ದೇಹಲಿಯಲ್ಲಿರುವ ಎಲ್ಲಾ ಶಾಲೆ, ಕಾಲೇಜು, ಅಂಗಡಿ, ಮಾಲ್‌, ಸಿನೆಮಾ ಹಾಲ್‌ ಹಾಗೂ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಒಂದು ವಾರದ ಈ ಲಾಕ್‌ಡೌನ್‌ ಅವಧಿಯಲ್ಲಿ ಯಾವ ಯಾವ ನಿಯಮಗಳು ಅನ್ವಯವಾಗುತ್ತವೆ, ಯಾವ ಸೇವೆಗಳು ಮುಕ್ತವಾಗಿರುತ್ತವೆ ಎಂಬುದರ ಬಗ್ಗೆ ದೆಹಲಿ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಸಂಚರಿಸಲು ಅವಕಾಶವಿರುತ್ತದೆ. ಅವರು ಹೊರಬಂದಾಗ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಆರೋಗ್ಯ, ಪೊಲೀಸ್, ಗೃಹರಕ್ಷಕ, ನಾಗರಿಕ ರಕ್ಷಣಾ, ಅಗ್ನಿಶಾಮಕ ಸೇವೆ, ನೀರು, ನೈರ್ಮಲ್ಯ, ಸಾರ್ವಜನಿಕ ಸಾರಿಗೆ, ಕರೋನಾ ಸಂಬಂಧಿತ ಕೆಲಸಗಳಲ್ಲಿ ತೊಡಗಿರುವವರಿಗೆ ಲಾಕ್‌ಡೌನ್‌ ಸಮಯದಲ್ಲಿ ಸಂಚರಿಸಲು ಅವಕಾಶವಿರುತ್ತದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಎಲ್ಲಾ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದಲ್ಲಿ ಕೆಲಸ ಮಾಡುವವರಿಗೆ ವಿನಾಯಿತಿ ಸಿಗಲಿದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು, ಆಸ್ಪತ್ರೆ, ಪ್ರಯೋಗಾಲಯ, ವೈದ್ಯಕೀಯ ಆಮ್ಲಜನಕ ಪೂರೈಕೆದಾರರು ಸಹ ವಿನಾಯಿತಿ ನೀಡಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಕರೋನಾ ಪರೀಕ್ಷೆಗೆ ಒಳಗಾದವರಿಗೆ, ಲಸಿಕೆ ಪಡೆಯುವವರಿಗೂ ಸಹ ಲಾಕ್‌ಡೌನ್‌ ನಿಯಮಗಳಿಂದ ವಿನಾಯಿತಿ ನೀಡಲಾಗುತ್ತದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದ ಸಿಬ್ಬಂದಿಗಳಿಗೆ ಹೊರ ಹೋಗುವುದಕ್ಕೆ ವಿನಾಯಿತಿ ನೀಡಲಾಗಿದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಇದರ ಜೊತೆಗೆ ಮಾಧ್ಯಮದವರಿಗೂ ಮನೆಯಿಂದ ಹೊರ ಹೋಗಲು ಅವಕಾಶ ನೀಡಲಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಚಲಿಸುವ ವಾಹನಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ವಿನಾಯಿತಿ ಹೊಂದಲಿರುವ ಕ್ಷೇತ್ರಗಳು

ತರಕಾರಿ, ಹಣ್ಣು, ದಿನಸಿ, ಡೈರಿ, ಮಾಂಸ, ಔಷಧಿ, ಸುದ್ದಿ, ಕಾಗದ, ಇಂಟರ್'ನೆಟ್ ಸೇವೆ, ಕೇಬಲ್ ಸೇವೆ, ಐಟಿ, ಬ್ಯಾಂಕ್, ಎಟಿಎಂಗಳು ತೆರೆದಿರುತ್ತವೆ. ಇ ಕಾಮರ್ಸ್ ವಿತರಣೆ ಮುಂದುವರಿಯಲಿದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಪೆಟ್ರೋಲ್ ಬಂಕ್, ಎಲ್‌ಪಿಜಿ, ಸಿಎನ್‌ಜಿ ಕೇಂದ್ರಗಳು ಸಹ ತೆರೆದಿರಲಿವೆ. ನೀರು ಹಾಗೂ ವಿದ್ಯುತ್ ಸರಬರಾಜು ಮುಂದುವರಿಯುತ್ತದೆ. ಆಹಾರ ವಿತರಣೆ ಮುಂದುವರಿಯುತ್ತದೆ. ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದನ್ನು ನಿಷೇಧಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಸಾರ್ವಜನಿಕ ಸಾರಿಗೆ

ದೆಹಲಿ ಮೆಟ್ರೋ ಕಾರ್ಯಾಚರಣೆ ನಡೆಸಲಿದ್ದು, ಕೇವಲ 50%ನಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು. ಸಾರ್ವಜನಿಕ ಬಸ್ಸು, ಆಟೋ, ಇ ರಿಕ್ಷಾಗಳು 50% ಪ್ರಯಾಣಿಕರೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಹೆಚ್ಚಾದ ಕರೋನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ ಜಾರಿಗೊಳಿಸಿದ ಅರವಿಂದ್ ಕೇಜ್ರಿವಾಲ್

ಕ್ಯಾಬ್, ಟ್ಯಾಕ್ಸಿ ಸೇವೆಗಳು ಮುಂದುವರೆಯಲಿವೆ. ಆದರೆ ದಿನಕ್ಕೆ ಎರಡು ಟ್ರಿಪ್ ಮಾತ್ರ ನೀಡಬೇಕಾಗುತ್ತದೆ. ದೆಹಲಿಯಲ್ಲಿ ಯಾವುದೇ ರೀತಿಯ ಪಾಸ್ ಪಡೆಯ ಬಯಸುವವರು www.delhi.gov.in ಮೂಲಕ ಪಡೆಯಬಹುದು.

Most Read Articles

Kannada
English summary
Arvind Kejriwal announces lockdown for a week in Delhi to curb Covid 19 cases. Read in Kannada.
Story first published: Tuesday, April 20, 2021, 12:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X