ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಜನಪ್ರಿಯ ನಟ
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಆಸಿಫ್ ಅಲಿ ಐಷಾರಾಮಿ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ನಟ ಆಸಿಫ್ ಅಲಿ ಅವರ ಗ್ಯಾರೇಜ್‌ನಲ್ಲಿ ಆಕರ್ಷಕ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇದೀಗ ಅವರ ಕಾರ್ ಕಲೆಕ್ಷನ್‌ಗೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಸೇರಿಕೊಂಡಿದೆ.

ವಿಭಿನ್ನ ಪಾತ್ರಗಳ ಮೂಲಕ ಮಲಯಾಳಂನ ಮನದಲ್ಲಿ ಛಾಪು ಮೂಡಿಸಿರುವ ಜನಪ್ರಿಯ ನಟರಲ್ಲಿ ಆಸಿಫ್ ಅಲಿ ಕೂಡ ಒಬ್ಬರು. ಅವರು ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ನಟ ಆಸಿಫ್ ಅಲಿ ತಮ್ಮ ಫ್ಯಾಮಿಲಿ ಜೊತೆ ತೆರಳಿ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ವಿತರಣೆಯನ್ನು ಪಡೆದುಕೊಂಡಿದೆ. ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯು 90, 110, 130 ಎಂಬ ಮಾದರಿಗಳಲ್ಲಿ ಲಭ್ಯವಿದೆ. ನಟ ಆಸಿಫ್ ಆಲಿ ಡಿಫೆಂಡರ್ 110 ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಲ್ಯಾಂಡ್ ರೋವರ್ ಡಿಫೆಂಡರ್ ಹಾರ್ಡ್ ಕೋರ್ ಆಫ್-ರೋಡ್ ಎಸ್‍ಯುವಿಯಾಗಿದೆ. ಮೊದಲ ನೋಟದಲ್ಲಿಯೇ ಡಿಫೆಂಡರ್ 110 ಎಸ್‌ಯುವಿಯು ತನ್ನ ಗಾತ್ರದಿಂದ ಗಮನ ಸೆಳೆಯುತ್ತದೆ. ಈ ಎಸ್‌ಯುವಿಯಲ್ಲಿರುವ ಕಪ್ಪು ಬಣ್ಣದ ಬ್ಯಾಡ್ಜ್‌ಗಳನ್ನು ಹೊಂದಿರುವ ಪ್ಯಾಂಗಿಯಾ ಗ್ರೀನ್ ಬಣ್ಣವು ಆಕರ್ಷಕವಾಗಿ ಕಾಣುತ್ತದೆ.

ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗುತ್ತದೆ. ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಈ ಡಿಫೆಂಡರ್ ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ನೀಡಲಾಗಿದೆ. ಬಾನೆಟ್‌ನಲ್ಲಿರುವ ರೇಖೆಗಳು ಹಾಗೂ ಕ್ರೀಸ್‌ಗಳು ಈ ಎಸ್‌ಯುವಿಗೆ ಹೆಚ್ಚು ಸ್ಟಾನ್ಸ್ ನೀಡುತ್ತವೆ.

ಬಾನೆಟ್‌ನ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ದಪ್ಪವಾಗಿರುವ ಡಿಫೆಂಡರ್ ಬ್ಯಾಡ್ಜ್ ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ 20 ಇಂಚಿನ ಅಲಾಯ್ ವ್ಹೀಲ್ ನೀಡಲಾಗಿದೆ. ಲೋ ಎಂಡ್ ಮಾದರಿಯಲ್ಲಿ 19 ಇಂಚಿನ ವ್ಹೀಲ್'ಗಳನ್ನು ನೀಡಲಾಗುತ್ತದೆ. ಡಿಫೆಂಡರ್ ಎಸ್‌ಯುವಿಯ ಹೊರಭಾಗದಲ್ಲಿ ಒಟ್ಟು ಆರು ಕ್ಯಾಮೆರಾ ಹಾಗೂ ಸುತ್ತಲೂ ಸೆನ್ಸಾರ್'ಗಳಿವೆ. ಈ ಕ್ಯಾಮರಾ 360 ಡಿಗ್ರಿ ನೋಟವನ್ನು ನೀಡುತ್ತದೆ. ಇದು ಆಫ್ ರೋಡಿಂಗ್'ನಲ್ಲಿ ನೆರವಿಗೆ ಬರುತ್ತದೆ.

ಐಆರ್‌ವಿಎಂ ಹಿಂದೆ ಇರುವ ಕ್ಯಾಮೆರಾ ಆಕ್ಟಿವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ, ಐಆರ್‌ವಿಎಂನಲ್ಲಿ ವೀಡಿಯೊ ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿ ಕ್ಯಾಮೆರಾ ಇನೀಡಲಾಗಿದೆ. ಬೂಟ್‌ನಲ್ಲಿ ಹೆಚ್ಚುವರಿ ಲಗೇಜ್ ಇದ್ದರೆ ಮಿರರ್ ಮೂಲಕ ಹಿಂದೆ ನೋಡಲು ಸಾಧ್ಯವಾಗದಿದ್ದರೆ ಈ ಫೀಚರ್ ನೆರವಿಗೆ ಬರುತ್ತದೆ. ಈ ಎಸ್‌ಯುವಿಯು ಸುಮಾರು 218 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಡಿಫೆಂಡರ್ ಎಸ್‌ಯುವಿಯು ಏರ್ ಸಸ್ಪೆಂಷನ್ ಹೊಂದಿರುವುದರಿಂದ ಆಫ್-ರೋಡ್ ಮೋಡ್‌ನಲ್ಲಿ ಎತ್ತರವನ್ನು 291 ಎಂಎಂಗಳವರೆಗೆ ಹೆಚ್ಚಿಸಬಹುದು. ಈ ಎಸ್‌ಯುವಿಯ ಹಿಂಭಾಗದಲ್ಲಿ ಟೇಲ್‌ಲೈಟ್‌ಗಳಿಗಾಗಿ ಹೊಸ ವಿನ್ಯಾಸವನ್ನು ನೀಡಲಾಗಿದೆ. ಸ್ಪೇರ್ ವ್ಹೀಲ್ ಅನ್ನು ಬೂಟ್‌ನಲ್ಲಿ ನೀಡಿರುವುದರಿಂದ ಬೂಟ್ ತುಸು ಭಾರವೆನಿಸುತ್ತದೆ.

ಬೂಟ್'ಗಳ ಮೇಲೆ ಬ್ಯಾಡ್ಜ್ ಹಾಗೂ ಮಾದರಿಗಳ ಹೆಸರುಗಳನ್ನು ಕಾಣಬಹುದು. ಯಾವುದೇ ಮಾದರಿಗಳಲ್ಲಿ ಕ್ರೋಮ್ ಅಂಶವನ್ನು ನೀಡಲಾಗಿಲ್ಲ. ಈ ಎಸ್‌ಯುವಿಯ ಕ್ಯಾಬಿನ್ ವಿಶಾಲವಾಗಿದೆ. ಈ ಎಸ್‌ಯುವಿಯಲ್ಲಿರುವ ದೊಡ್ಡ ಪನೋರಾಮಿಕ್ ಸನ್‌ರೂಫ್ ಹಾಗೂ ಸೈಡ್ ಆಲ್ಪೈನ್ ಲೈಟ್ ವಿಂಡೋಗಳು ಕ್ಯಾಬಿನ್‌ನೊಳಗೆ ಹೆಚ್ಚು ಬೆಳಕನ್ನು ನೀಡುತ್ತವೆ.

ಫೆಂಡರ್ ಎಸ್‌ಯುವಿಯಲ್ಲಿ ಒಟ್ಟು 14 ಯುಎಸ್‌ಬಿ ಹಾಗೂ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬೂಟ್‌ನಲ್ಲಿರುವ 230 ವೋಲ್ಟ್ ಚಾರ್ಜರ್ ಸಹ ಸೇರಿದೆ. ಈ ಚಾರ್ಜರ್ ಮೂಲಕ ಲ್ಯಾಪ್‌ಟಾಪ್, ಸ್ಪೀಕರ್ ಸೇರಿದಂತೆ ಹಲವು ಗೃಹೋಪಯೋಗಿ ಉಪಕರಣಗಳನ್ನು ಚಾರ್ಜ್ ಮಾಡಬಹುದು. ಟಾಪ್ ಎಂಡ್ ಮಾದರಿಯು ವೆಂಟಿಲೇಟೆಡ್ ಆಗಿದ್ದು, ಡ್ರೈವರ್ ಹಾಗೂ ಪ್ರಯಾಣಿಕರ ಸೀಟುಗಳಲ್ಲಿ ಮೆಮೊರಿ ಫಂಕ್ಷನ್ ನೀಡಲಾಗಿದೆ.

ಸ್ಟೀಯರಿಂಗ್ ವ್ಹೀಲ್ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು, ಆಟೋ ಫೀಚರ್ ಹೊಂದಿದೆ. ಈ ಆಟೋ ಫೀಚರ್ ಸ್ಟೀಯರಿಂಗ್ ವ್ಹೀಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಚಾಲಕನ ಸೀಟ್ ಅನ್ನು ಎತ್ತರಕ್ಕೆ ಅನುಗುಣವಾಗಿ ಹೊಂದಿಸಲು ನೆರವಾಗುತ್ತದೆ. ಈ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ. ಟಚ್ ರೆಸ್ಪಾನ್ಸ್ ಉತ್ತಮವಾಗಿದ್ದು, ಯಾವುದೇ ವಿಳಂಬವಾಗುವುದಿಲ್ಲ.

ಸ್ಟೀಯರಿಂಗ್ ವ್ಹೀಲ್ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು, ಆಟೋ ಫೀಚರ್ ಹೊಂದಿದೆ. ಈ ಆಟೋ ಫೀಚರ್ ಸ್ಟೀಯರಿಂಗ್ ವ್ಹೀಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಚಾಲಕನ ಸೀಟ್ ಅನ್ನು ಎತ್ತರಕ್ಕೆ ಅನುಗುಣವಾಗಿ ಹೊಂದಿಸಲು ನೆರವಾಗುತ್ತದೆ. ಈ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ. ಟಚ್ ರೆಸ್ಪಾನ್ಸ್ ಉತ್ತಮವಾಗಿದ್ದು, ಯಾವುದೇ ವಿಳಂಬವಾಗುವುದಿಲ್ಲ.

ಈ ಡಿಫೆಂಡರ್ ಎಸ್‌ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಂ, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್ ಸೆನ್ಸಿಂಗ್, ಡ್ರೈವರ್ ಕಂಡಿಷನ್ ಮಾನಿಟರಿಂಗ್, ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ.

ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್'ಮಿಷನ್ ಯುನಿಟ್ ಜೋಡಿಸಲಾಗಿದೆ. ಡಿಫೆಂಡರ್ 90 ಎಸ್‌ಯುವಿಯ ಡೀಸೆಲ್ ಆವೃತ್ತಿಯು6.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಡಿಫೆಂಡರ್ 110 ಎಸ್‌ಯುವಿಯ ಡೀಸೆಲ್ ಆವೃತ್ತಿಯು 7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಕಂಪನಿಯ ಇತ್ತೀಚಿನ ಟೆರೈನ್ ರೆಸ್ಪಾನ್ಸ್ 2 ಫೀಚರ್ ಹೊಂದಿದೆ. ಈ ಫೀಚರ್ ಗ್ರಾಹಕರಿಗೆ ಜನರಲ್ ಡ್ರೈವಿಂಗ್, ಗ್ರಾಸ್, ಗ್ರಾವೆಲ್, ಗ್ರಾಸ್, ಸ್ನೋ, ಮಡ್ ಅಂಡ್ ರಟ್ಸ್, ಸ್ಯಾಂಡ್, ರಾಕ್ ಕ್ರಾಲ್ ಹಾಗೂ ವೇಡ್ ಎಂಬ ವಿವಿಧ ಡ್ರೈವಿಂಗ್ ಮೋಡ್'ಗಳನ್ನು ನೀಡುತ್ತದೆ.


Click it and Unblock the Notifications