ಕನಸಿನ ಹೋಂಡಾ ಸ್ಕೂಟರ್ ಖರೀದಿಸಲು ಚೀಲದ ತುಂಬಾ ಹಣ ತಂದ ಗ್ರಾಹಕ

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬೈಕ್ ಅಥವಾ ಸ್ಕೂಟರ್ ಖರೀದಿಸಬೇಕೆಂಬ ಕನಸು ಕಂಡಿರುತ್ತಾರೆ. ಬೆಲೆ ಸಾವಿರಗಳಲ್ಲಿಯೇ ಇದ್ದರೂ ಹಲವು ಕಾರಣಗಳಿಗೆ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಸತತ ಐದು ವರ್ಷಗಳಿಂದ ಕೇವಲ ನಾಣ್ಯಗಳನ್ನು ಸೇರಿಸಿ, ಅದರಲ್ಲಿ ಹೊಚ್ಚ ಹೊಸ ಹೋಂಡಾ ಸ್ಕೂಟರ್‌ನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ತಾವು ಕಂಡ ಕನಸನ್ನು ನಿಜವಾಗಿಸಿಕೊಳ್ಳಲು ಎಷ್ಟೋ ಮಂದಿ ಪ್ರಯತ್ನಿಸುತ್ತಾರೆ. ಇದಕ್ಕೆ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸಿಪಾಜರ್ ನಿವಾಸಿ, ಮಹಮ್ಮದ್ ಸೈದುಲ್ ಹಕ್ ಉತ್ತಮ ನಿರ್ದಶನ. ಬೋರಗೋನ್ ಎಂಬಲ್ಲಿ ಸಣ್ಣ ಅಂಗಡಿ ನಡೆಸುತ್ತಿರುವ ಈತನಿಗೆ ತನ್ನ ಉಳಿತಾಯದ ಹಣದಿಂದ ಸ್ಕೂಟರ್ ಖರೀದಿಸಬೇಕೆಂಬುದು ಬಹುದಿನಗಳ ಆಸೆಯಾಗಿತ್ತು. ಅದಕ್ಕಾಗಿ ಅಂಗಡಿಯಲ್ಲಿ ಅಲ್ಪಸ್ವಲ್ಪ ಉಳಿದ ಚಿಲ್ಲರೆ ಹಣವನ್ನು ಸತತ ಐದು ವರ್ಷಗಳಿಗೆ ಹುಂಡಿಯಲ್ಲಿ ಕೂಡಿಸಿದ್ದಾರೆ.

ಕನಸಿನ ಹೋಂಡಾ ಸ್ಕೂಟರ್ ಖರೀದಿಸಲು ಚೀಲದ ತುಂಬಾ ಹಣ ತಂದ ಗ್ರಾಹಕ

ಹೀಗಿರುವಾಗ ಒಂದು ದಿನ, ತಾನು ಉಳಿತಾಯ ಮಾಡಿರುವ ಹಣ ನೂತನ ಕೊಂಡುಕೊಳ್ಳಲು ಸಾಕಾಗಬಹುದೆಂದು ಅದನ್ನು ಚೀಲದಲ್ಲಿ ತುಂಬಿಕೊಂಡು ಸಿದಾ ಗುವಾಹಟಿಯ ಹೋಂಡಾ ಡೀಲರ್‌ಶಿಪ್‌ಗೆ ತೆರಳಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಈ ಕಾಸಿನಲ್ಲಿ ಸ್ಕೂಟರ್ ಖರೀದಿಸಲು ಬಂದಿರುವುದಾಗಿ ಹೇಳುತ್ತಾರೆ. ಕ್ಷಣಕಾಲ ಅವರೆಲ್ಲೂ ಗಾಬರಿಯಾಗುತ್ತಾರೆ. ಬಳಿಕ, ಕೂಲಂಕುಷವಾಗಿ ಪರಿಶೀಲಿಸಿ 'ಗ್ರಾಜಿಯಾ 125' ಸ್ಕೂಟರ್ ಮಾರಾಟ ಮಾಡಿದ್ದಾರೆ.

ಈ ಬಗ್ಗೆ ವೀಡಿಯೊವೊಂದನ್ನು ಸ್ಥಳೀಯ ಟಿವಿ ವಾಹಿನಿಯೊಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಚೀಲದಲ್ಲಿ ತಂದಿದ್ದ ನಾಣ್ಯವನ್ನು ಗ್ರಾಹಕ ಹಾಗೂ ಡೀಲರ್‌ಶಿಪ್‌ ಸಿಬ್ಬಂದಿಗಳು ಎಣಿಕೆ ಮಾಡುತ್ತಾರೆ. ಐದು ವರ್ಷಗಳಿಂದ ಹುಂಡಿಯಲ್ಲಿ ಕೂಡಿಹಾಕಿದ್ದ 1, 2, 5 ಹಾಗೂ 10 ರೂಪಾಯಿ ಕಾಯಿನ್‍ಗಳು ಒಟ್ಟುಗೂಡಿ 90,000 ರೂಪಾಯಿಗಳಾಗಿದೆ. ಇನ್ನು, ಸ್ಕೂಟರ್ ಖರೀದಿಸಿದ ಬಳಿಕ ಖುಷಿಯನ್ನು ಹಂಚಿಕೊಂಡಿರುವ ಗ್ರಾಹಕ ಸೈದುಲ್ ಹಕ್, 'ಇದು ನನ್ನ ಹಲವು ವರ್ಷಗಳ ಕನಸಾಗಿತ್ತು' ಎಂದು ಹೇಳಿದ್ದಾರೆ.

ಕನಸಿನ ಹೋಂಡಾ ಸ್ಕೂಟರ್ ಖರೀದಿಸಲು ಚೀಲದ ತುಂಬಾ ಹಣ ತಂದ ಗ್ರಾಹಕ

ಹೊಸದೊಂದು ಸ್ಕೂಟರ್ ಖರೀದಿಸಬೇಕೆಂಬ ಆಸೆಯನ್ನು ಸೈದುಲ್ ಕಡೆಗೂ ಈಡೇರಿಸಿಕೊಂಡಿದ್ದಾರೆ. ಇಲ್ಲಿ ತನ್ನ ಗುರಿಯನ್ನು ಮುಟ್ಟಲು ಸತತ ಐದು ವರ್ಷ ಕಾದಿದ್ದು, ಆತನ ತಾಳ್ಮೆಯನ್ನು ಮೆಚ್ಚಲೇಬೇಕು. ಕೆಲವರೂ ಈ ಕೆಲಸ ನಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಅರ್ಧದಲ್ಲಿಯೇ ಸುಮ್ಮನಾಗಿ ಬಿಡುತ್ತಾರೆ. ಆದರೆ, ಸೈದುಲ್ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪ್ರಚಾರಕ್ಕಾಗಿ ಇದನ್ನು ಮಾಡಿಲ್ಲ ಎಂಬುದು ನೆನಪಿರಲಿ.

ಸದ್ಯ, ಚಿಲ್ಲರೆ ನಾಣ್ಯವನ್ನು ಸೇರಿಸಿ ಖರೀದಿಸುವ ಹೋಂಡಾ ಗ್ರಾಜಿಯಾ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು ರೂ.82,520 ದಿಂದ ರೂ.89,845 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 123.97 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 8.25 PS ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 50 kmpl ಮೈಲೇಜ್ ನೀಡಲಿದೆ.

ಈ ಸ್ಕೂಟರ್ ವಿಶೇಷತೆಗಳನ್ನು ನೋಡುವುದಾದರೆ, ಇದು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. LED ಹೆಡ್‌ಲ್ಯಾಂಪ್ಸ್, DRLs, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ NTorq 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಹಾಗೂ ಸುಜುಕಿ ಆಕ್ಸೆಸ್ 125 ಸ್ಕೂಟರ್ ಗಳು ಗ್ರಾಜಿಯಾ ಪ್ರತಿಸ್ಪರ್ಧಿಯಾಗಿದ್ದು, ಬಹುತೇಕ ಇದೇ ಬೆಲೆಯನ್ನು ಪಡೆದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, April 5, 2023, 12:56 [IST]
English summary
Assam man brings sackful coins buy new honda scooter details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+