ಅಂಬಾನಿ ಪುತ್ರ ಆಸ್ಟನ್ ಮಾರ್ಟಿನ್ ಅಪಘಾತ; ಪ್ರಕರಣ ಮೂಲೆಗುಂಪು?

By Nagaraja

ಇದು ಸ್ವಲ್ಪ ಹಳೆಯ ಸ್ಟೋರಿ. ಆದರೆ ತಪ್ಪಿತ್ತಸ್ಥರು ಇನ್ನು ಸ್ವಚ್ಛಂಧವಾಗಿ ಜೀವನ ನಡೆಸುತ್ತಿರುವುದು ಆಘಾತಕ್ಕೆ ಕಾರಣವಾಗಿದೆ. ಮೂರು ತಿಂಗಳ ಹಿಂದೆ ಅಂದರೆ 2013 ಡಿಸೆಂಬರ್‌ನಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಪ್ರತ್ಯಕ್ಷ ದರ್ಶಿಯ ಪ್ರಕಾರ ಆಸ್ಟನ್ ಮಾರ್ಟಿನ್‌ನಲ್ಲಿ ಸಂಚರಿಸುತ್ತಿದ್ದ ಅಂಬಾನಿ ಪುತ್ರ, ಅಜಾಗರೂಕ ಚಾಲನೆಯಿಂದಾಗಿ ಅಪಘಾತ ಸಂಭವಿಸಿತ್ತು. ಘಟನೆ ವೇಳೆ ಆಕಾಶ್ ಅಂಬಾನಿ ಪಾನಮತ್ತರಾಗಿದ್ದರು ಎಂಬುದು ತಿಳಿದು ಬಂದಿದೆ. ಇಷ್ಟೆಲ್ಲ ಆದರೂ ಮಾಧ್ಯಮದಲ್ಲಿ ಸುದ್ದಿ ಹೈಲೆಟ್ ಆಗದಿರುವುದು ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ಮಾಧ್ಯಮಗಳು ಸಹ ಮೂಕ ಪ್ರೇಕ್ಷಕನಾಗಿ ನಿಂತಿದೆ.

ಘಟನೆ ವಿವರ

ಘಟನೆ ವಿವರ

ಮುಂಬೈನಲ್ಲಿ 2013 ಡಿಸೆಂಬರ್ 8ರಂದು ಮಧ್ಯರಾತ್ರಿ ಆಕಾಶ್ ಅಂಬಾನಿ ಚಾಲನೆ ಮಾಡುತ್ತಿದ್ದ ಆಸ್ಟನ್ ಮಾರ್ಟಿನ್ ರಾಪಿಡ್ ಕಾರು ಆಡಿ ಹಾಗೂ ಹ್ಯುಂಡೈ ಎಲಂಟ್ರಾ ಕಾರುಗಳಿಗೆ ಢಿಕ್ಕಿ ಹೊಡೆದಿತ್ತು. ಘಟನೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದರು.

ಅಂಬಾನಿ ಪುತ್ರನ ಆಸ್ಟನ್ ಮಾರ್ಟಿನ್ ಸವಾರಿ

ನಾಲ್ಕು ಕೋಟಿ ರು.ಗಳಷ್ಟು ದುಬಾರಿಯ ಈ ಆಸ್ಟನ್ ಮಾರ್ಟಿನ್ ಕಾರು ರಿಲಯನ್ಸ್ ನೊಂದಾವಣಿ ಪಡೆದುಕೊಂಡಿದೆ. ಇದರ ಹಿಂದೆ ಭಾರಿ ಪ್ರಭಾವ ಬೀರಿರುವುದರಿಂದಲೇ ಪ್ರಕರಣ ನೆನೆಗುದಿಗೆ ಬಿದ್ದಿರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಅಂಬಾನಿ ಪುತ್ರನ ಆಸ್ಟನ್ ಮಾರ್ಟಿನ್ ಸವಾರಿ

ಅಂದ ಹಾಗೆ ಆಸ್ಟನ್ ಮಾರ್ಟಿನ್ ರಾಪಿಡ್ ಕಾರು ಕೇವಲ 4.9 ಸಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಮೊದಲ ನೋಟದಲ್ಲೇ ಅತಿಮ ವೇಗದಲ್ಲೇ ಸಂಚರಿಸಿರುವುದು ಅಪಘಾತಕ್ಕೀರುವ ಕಾರಣ ಎಂಬುದು ತಿಳಿದು ಬಂದಿದೆ.

ಅಂಬಾನಿ ಪುತ್ರನ ಆಸ್ಟನ್ ಮಾರ್ಟಿನ್ ಸವಾರಿ

ಆಸ್ಟನ್ ಮಾರ್ಟಿನ್ ರಾಪಿಡ್ ಐಷಾರಾಮಿ ಕಾರು ಶಕ್ತಿಶಾಲಿ 5935 ಸಿಸಿ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 470 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಂಬಾನಿ ಪುತ್ರನ ಆಸ್ಟನ್ ಮಾರ್ಟಿನ್ ಸವಾರಿ

ಇನ್ನು ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುವ ಕಾರುಗಳಲ್ಲಿ ಆಸ್ಟನ್ ಮಾರ್ಟಿನ್ ಕೂಡಾ ಒಂದಾಗಿದೆ. ಇದು ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ ಜತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್‍‌ಗಳಂತಹ ಫೀಚರುಗಳನ್ನು ಹೊಂದಿದೆ.

ಅಂಬಾನಿ ಪುತ್ರನ ಆಸ್ಟನ್ ಮಾರ್ಟಿನ್ ಸವಾರಿ

ಒಟ್ಟಿನಲ್ಲಿ ದೇಶದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಇದುವರೆಗೆ ಯಾವುದೇ ಪುರಾವೆ ಸಂಗ್ರಹಿಸಲು ಸಾಧ್ಯವಾಗದಿರುವುದು ವಿಪರ್ಯಾಸಕ್ಕೆ ಕಾರಣವಾಗಿದೆ.

More from DriveSpark

Article Published On: Monday, March 17, 2014, 10:51 [IST]
English summary
Report says that Akash Ambani, who met with an accident near his 27 storied house and his Aston Martin Rapide S, evidences are still ‘unavailable’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+