ಭೀಕರ ಅಪಘಾತ; ಭಾರತೀಯ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ?
ಭಾರತೀಯ ರಸ್ತೆಗಳು ಚಾಲನೆಗೆ ಯೋಗ್ಯವಲ್ಲ ಎಂಬ ವಿಚಾರವನ್ನು ಮಗದೊಮ್ಮೆ ಗಂಭೀರವಾಗಿ ಚಿಂತನೆ ಮಾಡಬೇಕಾದ ಸಮಯ ಹತ್ತಿರ ಬಂದಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿಯಲ್ಲಿ ಚಲಿಸುವ ವಾಹನಗಳು, ಮಿತಿ ಮೀರಿದ ಭಾರವನ್ನು ಹೊರುವ ಘನ ವಾಹನಗಳು, ಸರಕು ಸಾಮಾಗ್ರಿಗಳನ್ನು ಹೊತ್ತೊಯ್ಯುವ ವೇಳೆ ಬೇಕಾದಷ್ಟು ಸುರಕ್ಷತೆಯನ್ನು ಕೈಗೊಳ್ಳದಿರುವುದು. ಹೀಗೆ ಒಂದೆಲ್ಲ ಎರಡಲ್ಲ ಅನೇಕ ಕಾರಣಗಳನ್ನು ಭಾರತೀಯ ರಸ್ತೆಗಳ ಶೋಚನೀಯ ಸ್ಥಿತಿಯನ್ನು ಬೊಟ್ಟು ಮಾಡಬಹುದು.
ಇವೆಲ್ಲದರ ಭವಿಷ್ಯತ್ ಪರಿಣಾಮ ಏನೆಂಬುದನ್ನು ನಾವು ಹೇಳದೆಯೇ ನಿಮ್ಮಿಂದ ಊಹನೆ ಮಾಡಬಹುದು. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಮುಂಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಡಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜುಗೊಂಡಿದೆ.

ಇಲ್ಲಿನ ಚಿತ್ರಗಳೇ ಭೀಕರ ಅಪಘಾತವನ್ನು ವಿವರಿಸುತ್ತದೆ. ವಾಣಿಜ್ಯ ನಗರಿಯಲ್ಲೂ ವಾಹನ ನಿಯಮಗಳ ಉಲ್ಲಂಘನೆ ಎಷ್ಟೊಂದು ಹಗಲು ದರೋಡೆಯಂತೆ ನಡೆಯಲಿದೆ ಎಂಬುದು ಇದರಿಂದ ತಿಳಿದು ಬಂದಿದೆ.

ಮುಂಬೈ ಹೆದ್ದಾರಿಯಲ್ಲಿ ನಡೆದ ಘಟನೆಯಲ್ಲಿ ಮೆಟಲ್ ರಾಡ್ ನೇರವಾಗಿ ಆಡಿ ಎ3 ಕಾರಿನ ಒಳಕ್ಕೆ ನುಗ್ಗಿದೆ.

ಆದರೆ ಅಪಘಾತಕ್ಕಿರುವ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಸಂಬಂಧ ದೂರು ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಡಿ ಕಾರಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಕರು ಸುರಕ್ಷಿತವಾಗಿದ್ದರೆ ಎಂಬುದರ ಬಗ್ಗೆಯೂ ಮಾಹಿತಿಗಳು ಅಲಭ್ಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿರಲಿ ಎಂಬ ಪ್ರಾರ್ಥನೆ ನಮ್ಮದಾಗಿದೆ.

ಈ ಸುದ್ದಿಯನ್ನು ಓದುಗರ ಮುಂದೆ ಇಲ್ಲಿ ಹಂಚಿಕೊಂಡಿರುವ ಹಿಂದಿನ ಪ್ರಮುಖ ಕಾರಣ ಏನೆಂದರೆ ಇದು ಭಾರತೀಯ ರಸ್ತೆಗಳಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ನೈಜ ಉದಾಹರಣೆಯಾಗಿದೆ. ಈ ಸಂಬಂಧ ನಿಮ್ಮ ಅಭಿಮತವನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








